HEALTH TIPS

No title

                   ಮುಗಿಯದ ಮಲತಾಯಿ ಧೋರಣೆ
                ರಾಜ್ಯೋತ್ಸವದ ಮರೆಯಲ್ಲಿ ಕನ್ನಡ ಹೊಸಕುವ ಯತ್ನ
  ಮಂಜೇಶ್ವರ: ಭಾಷಾವಾರು ಪ್ರಾಂತ್ಯ ವಿಭಜನೆಯ ಸಂದರ್ಭ ಅನ್ಯಾಯವಾಗಿ ಕೇರಳದ ಪಾಲಾದ ಕನ್ನಡದ ನೆಲ ಕಾಸರಗೋಡು ಬಳಿಕ ದಶಕಗಳಿಂದ ವ್ಯಾಪಕ ಸಂಕಷ್ಟಗಳಿಂದ ತೊಳಲಾಡುತ್ತಿದ್ದು, ಅಧಿಕಾರಿ ವರ್ಗದ ಮಲತಾಯಿ ಧೋರಣೆಯಿಂದ ಹಕ್ಕು ಸಂರಕ್ಷಣೆಗಾಗಿ ಮೂರನೇ ದಜರ್ೆಯ ಪ್ರಜೆಗಳಂತೆ ವ್ಯವಹರಿಸಬೇಕಾದ ಅತಂತ್ರತೆ ಮುಂದುವರಿದಿದೆ.
   ಗುರುವಾರ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿದ್ಯಾಥರ್ಿಗಳಿಗೆ ಹಕ್ಕು ಸಂರಕ್ಷಣೆಗೆ ಪ್ರತಿಭಟನೆ ನಡೆಸಲೂ ಅಡಿಪಡಿಸಿದ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
   ಕಾಲೇಜಿನ ವಿದ್ಯಾಥರ್ಿಗಳು ಪ್ರತಿವರ್ಷ ರಾಜ್ಯೋತ್ಸವದ ದಿನ ಗಡಿನಾಡಿನ ಕನ್ನಡಿಗರ ಭಾಷಾಪರ ಸಮಸ್ಯೆಗಳನ್ನು ಮುಂದಿಟ್ಟು ಶಾಂತಿಯುತ ಪ್ರತಿಭಟನೆ, ಬಂದ್ ಚಳವಳಿ ನಡೆಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಬರುತ್ತಿದೆ. ಈ ಹಿನ್ನೆಲೆಯಲ್ಲಿ ವರ್ತಮಾನದಲ್ಲಿ ಮತ್ತಷ್ಟು ಬಿಗುಗೊಂಡಿರುವ ಸರಕಾರದ ಮಲತಾಯಿ ಧೋರಣೆಗೆದುರಾಗಿ ಗುರುವಾರ ಕನರ್ಾಟಕ ರಾಜ್ಯ ಕನ್ನಡ ರಾಜ್ಯೋತ್ಸವದ ಭಾಗವಾಗಿ ಕಾಲೇಜು ಪರಿಸರದಲ್ಲಿ ಪ್ರತಿಭಟನೆ ನಡೆಸಲು ಕಾಲೇಜು ವಿದ್ಯಾಥರ್ಿಗಳು ಅಧಿಕೃತರಲ್ಲಿ ಪೂವರ್ಾಮತಿ ಕೇಳಿದ್ದು, ಈ ಸಂದರ್ಭ ಪದವಿ ತರಗತಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸದಂತೆ ಸೂಚಿಸಿದೆ. ಈ ಕಾರಣದಿಂದ ಕನ್ನಡ ವಿದ್ಯಾಥರ್ಿಗಳು ಕಾಲೇಜು ಆವರಣದ ಹೊರಗೆ ಪ್ರತಿಭಟನೆ ನಡೆಸಬೇಕಾದ ದುವರ್ಿದಿ ಪ್ರಾಪ್ತವಾಯಿತು.
   ಆದರೆ, ಅಷ್ಟೇ ಆಗಿದ್ದರೆ ತಕಋಉಗಳಾಗುತ್ತಿರಲಿಲ್ಲ. ಕನ್ನಡ ವಿದ್ಯಾಥರ್ಿಗಳು ಶಾಲಾವರಣದ ಹೊರಗೆ ಪ್ರತಿಭಟನೆ ನಡೆಸುತ್ತಿರುವಂತೆ ಮಲೆಯಾಳ ವಿಭಾಗದ ವಿದ್ಯಾಥರ್ಿಗಳು ಹಠಾತ್ತಾಗಿ ಶಾಲಾವರಣದ ಒಳಗೆಯೇ ಮಲೆಯಾಳ ರಾಜ್ಯೋತ್ಸವದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಕಾಲೇಜಿನ ಸಂಬಂಧಪಟ್ಟ ಅಧಿಕೃತರು ಯಾವ ತಕರಾರನ್ನೂ ಎತ್ತದಿರುವುದು ಕನ್ನಡಿಗರಿಗೊಂದು ನ್ಯಾಯ, ಮಲೆಯಾಳಿಗಳಿಗೆ ಬೇರೊಂದು ನ್ಯಾಯ ಎಂಬ ತೀಮರ್ಾನದಂತೆ ಕಂಡುಬಂತು.
   ಪರೀಕ್ಷೆಯ ಕಾರಣಗಳನ್ನು ನೀಡಿ ಕನ್ನಡಿಗರ ಪ್ರತಿಭಟನೆಗೆ ಅವಕಾಶ ನೀಡದ ಕಾಲೇಜು ಅಧಿಕೃತರು ಮಲೆಯಾಳ ವಿದ್ಯಾಥರ್ಿಗಳ ಗುಲ್ಲು ಗದ್ದಲಗಳ ಘೋಷವಾಕ್ಯಗಳಿಂದೊಡಗೂಡಿದ ಕೇರಳ ರಾಜ್ಯೋದಯ ಗುಲ್ಲಿನ ನಾಟಕಕ್ಕೆ ಆಸ್ಪದ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗುವುದರ ಜೊತೆಗೆ ಅಧಿಕಾರಿ ವರ್ಗ ಗಡಿನಾಡಿನ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿ ಸಂಘರ್ಷಕ್ಕೆಡೆಮಾಡಿಕೊಡುತ್ತಿದೆಯೆಂಬ ಸಂಶಯಕ್ಕೆ ಕಾರಣವಾಗಿದೆ.
    ಗುರುವಾರ ಕಾಲೇಜು ಆವರಣದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾಥರ್ಿಗಳಾದಮನೋಜ್, ಅನುಶ್ರೀ, ನವನೀತ್, ರಾಜೇಶ್, ಕೃಷ್ಣ, ಚೈತ್ರ ಮೊದಲಾದವರು ನೇತೃತ್ವ ನೀಡಿದ್ದರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries