HEALTH TIPS

No title

              ವಿದ್ರೋಹಿ ಮನೋಸ್ಥಿತಿ-ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಮತ್ತೆ ಕನ್ನಡ ವಿರೋಧಿ ಗೋಡೆ ಬರಹ 
                ಕನ್ನಡ ವಿದ್ಯಾಥರ್ಿಗಳಿಂದ ಪ್ರತಿಭಟನೆ, ಪೊಲೀಸರಿಗೆ ದೂರು
    ಕಾಸರಗೋಡು: ಪಣಿಕ್ಕರ್ ಕುತಂತ್ರದಿಂದ ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋದ ಅಚ್ಚ ಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು ನಿರಂತರವಾಗಿ ಸಂವಿಧಾನಬದ್ಧ ಹಕ್ಕು, ಸವಲತ್ತುಗಳಿಂದ ವಂಚಿತರಾಗುತ್ತಲೇ ಬರುತ್ತಿರುವಂತೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕಿಡಿಗೇಡಿ ವಿದ್ಯಾಥರ್ಿಗಳ ಕೂಟ ಮತ್ತೆ ಕನ್ನಡ ವಿರೋಧಿ ಗೋಡೆ ಬರಹಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ವಿದ್ಯಾಥರ್ಿಗಳಿಗೆ ಅಪಮಾನವೆಸಗಿ ವಿಕೃತಿಯನ್ನು ಮೆರೆದಿದ್ದಾರೆ. ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಕನ್ನಡಿಗ ವಿದ್ಯಾಥರ್ಿಗಳು ಪ್ರತಿಭಟಿಸಿ ಕಾಲೇಜು ಪ್ರಾಂಶುಪಾಲರಿಗೆ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯನ್ನು ಅವಲೋಕಿಸಿ ತನಿಖೆಯ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಪೊಲೀಸರು ಅವಹೇಳನಕಾರಿ ಗೋಡೆ ಬರಹಗಳನ್ನು ಅಳಿಸಿದ್ದಾರೆ.
   ಕಳೆದ ವರ್ಷವೂ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಬ್ಲಾಕ್ನಲ್ಲಿ ಅವಮಾನಕಾರಿ ಮಲಯಾಳ ಬರಹಗಳು ರಾರಾಜಿಸಿತ್ತು. ಕೆಲವು ವರ್ಷಗಳ ಹಿಂದೆಯೂ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ, ನೋಟೀಸ್ ಬೋಡರ್್ಗಳಲ್ಲಿ ಅವಹೇಳನಕಾರಿ ಬರಹಗಳಿಂದ ಕನ್ನಡಿಗ ವಿದ್ಯಾಥರ್ಿಗಳನ್ನು ಅವಮಾನಿಸಿದ್ದರು.
ಈ ಬಗ್ಗೆ ಅಂದಿನ ವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವಹೇಳನಕಾರಿ ಬರಹ ಬರೆದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರೂ, ಅಪರಾಧಿಗಳು ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ಕನ್ನಡ ವಿರೋಧಿ ಬರಹಗಳು ಕಾಲೇಜು ಗೋಡೆಗಳಲ್ಲಿ ರಾರಾಜಿಸುತ್ತಿದೆ. ಅವಹೇಳನಕಾರಿ ಬರಹಗಳನ್ನು ಕನ್ನಡ ವಿದ್ಯಾಥರ್ಿಗಳು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಅದು ಎಷ್ಟು ಪರಿಣಾಮಕಾರಿಯಾಗುತ್ತದೆ ಎಂದು ನಂಬುವ ಹಾಗಿಲ್ಲ ಎಂಬುದಕ್ಕೆ ಹಿಂದಿನ ಘಟನೆಗಳೇ ಸಾಕ್ಷಿಯಾಗಿವೆ.
     `ಇದು ಕೇರಳ, ನಿಮಗೆ ಇಲ್ಲಿ ಯಾವುದೇ ಹಕ್ಕುಗಳಿಲ್ಲ. ನೀವು ಕನರ್ಾಟಕಕ್ಕೆ ಹೋಗಿ' ಮೊದಲಾದ ಅವಹೇಳನಕಾರಿ ಮಾತುಗಳನ್ನು ಮಲಯಾಳದಲ್ಲಿ ಬರೆದು ಕನ್ನಡದ ಮನಸ್ಸನ್ನು ಘಾಸಿಗೊಳಿಸುವ ಮೂಲಕ ತಮ್ಮ ಹತಾಶೆ ಮೆರೆದಿದ್ದಾರೆ.
   ನ.1 ರಂದು ಕೇರಳ `ಪಿರವಿ' ದಿನಾಚರಣೆ. ಕನರ್ಾಟಕದಲ್ಲಿ ರಾಜ್ಯೋತ್ಸವ ಹೇಗೋ ಹಾಗೆ ಕೇರಳೀಯರಿಗೆ ರಾಜ್ಯೋತ್ಸವದ ದಿನ. ಇಂತಹ ಸುದಿನದಲ್ಲೇ ಭಾಷಾ ದ್ವೇಷವನ್ನು ಹುಟ್ಟಿಸುವ ರೀತಿಯಲ್ಲಿ ಸರಕಾರಿ ಕಾಲೇಜಿನ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಬರೆದು ಅವರ ಸಂಸ್ಕೃತಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಮಲಯಾಳ ಭಾಷೆಯಲ್ಲಿ ಕನ್ನಡ ವಿರೋಧಿ ಬರಹಗಳು ಬರೆಯಲಾಗಿದ್ದು, ಈ ಮೂಲಕ ಕನ್ನಡಿಗರನ್ನು ಅವಹೇಳನಗೈಯುವ ಉದ್ದೇಶ ಇದರಲ್ಲಡಗಿದೆ.
    ಕೆಲವು ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಇಂತಹ ಬರಹಗಳು ರಾರಾಜಿಸಿತ್ತು. ಕನ್ನಡ ವಿರೋಧಿ ಧೋರಣೆಯನ್ನು ವಿದ್ಯಾಥರ್ಿಗಳು ಪ್ರತಿಭಟಿಸಿದ್ದಲ್ಲದೇ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿತ್ತು. ಕಾಲೇಜಿನ ಹೊರಗೂ ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ಕಾಲೇಜಿನಲ್ಲಿ ಇದೇ ಚಾಳಿ ಪುನರಾವತರ್ಿಸಿದೆ. 
   ಕನ್ನಡ ವಿರೋಧಿಗಳ ಕೃತ್ಯ : ಕನರ್ಾಟಕದಿಂದ ಬೇರ್ಪಟ್ಟು ಮಲತಾಯಿಯ ಮಕ್ಕಳಂತಾದ ಕಾಸರಗೋಡಿನ ಕನ್ನಡಿಗರಿಗೆ ನ.1 ರಂದು ಕರಾಳ ದಿನವಾಗಿದೆ. ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋದ ಅಚ್ಚ ಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು ಕೇರಳದಲ್ಲಿ ದ್ವಿತೀಯ ದಜರ್ೆ ಪ್ರಜೆ ಎಂಬಂತೆ ಬದುಕು ಸಾಗಿಸಬೇಕಾದ ಪರಿಸ್ಥಿತಿ. ಸಂವಿಧಾನಬದ್ಧವಾಗಿ ನೀಡಲಾದ ಎಲ್ಲಾ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳುತ್ತಲೇ ಇರುವ ಕೇರಳ ಸರಕಾರ ಮತ್ತು ಕೇರಳದ ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿ ವರ್ಗ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನಿರಂತರವಾಗಿ ಕಿರುಕುಳ ನೀಡುತ್ತಲೇ ಬಂದಿದೆ. ಹೀಗಿರುವಂತೆ ಕಾಸರಗೋಡು ಸರಕಾರಿ ಕಾಲೇಜಿನ ಕಿಡಿಗೇಡಿಗಳೂ ಕನ್ನಡ ವಿರೋಧಿ ಧೋರಣೆಯನ್ನು ಪ್ರದಶರ್ಿಸಿ ಕನ್ನಡ ವಿರೋಧಿ ಕೃತ್ಯವನ್ನು ಪ್ರದಶರ್ಿಸಿದ್ದಾರೆ.
        ಕಾಲೇಜಿನಲ್ಲಿ ಸಿ.ಸಿ. ಟಿವಿ ಸ್ಥಾಪಿಸುವಂತೆ ಆಗ್ರಹ!
    : ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮೀರುತ್ತಿದ್ದು ಈ ಹಿನ್ನೆಲೆಯಲ್ಲಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಿಸಿ ಟಿವಿ ಸೌಲಭ್ಯ ನೀಡಬೇಕೆಂದು ಕನ್ನಡ ವಿದ್ಯಾಥರ್ಿಗಳು ಆಗ್ರಹಿಸಿದ್ದಾರೆ. ಕನ್ನಡ ವಿಭಾಗಕ್ಕೆ ಅಪರಿಚಿತರು ರಾತ್ರಿ ಕಾಲದಲ್ಲಿ ಭೇಟಿ ನೀಡುವುದು ಗಮನಕ್ಕೆ ಬಂದಿದ್ದು, ವಿಭಾಗದ ಸುರಕ್ಷೆಗಾಗಿ ಗೇಟುಗಳನ್ನು ನಿಮರ್ಿಸಲು ಹಲವು ಬಾರಿ ಪ್ರಾಂಶುಪಾಲರಲ್ಲಿ ಬೇಡಿಕೆ ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಪ್ರಾಂಶುಪಾಲರು ಕೈಗೊಂಡಿಲ್ಲ ಎಂದು ವಿದ್ಯಾಥರ್ಿಗಳು ಹೇಳಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries