HEALTH TIPS

No title

                   ಕನ್ನಡಿಗರ ಹಕ್ಕು ಸಂರಕ್ಷಣೆ ಸರಕಾರದ ಜವಾಬ್ದಾರಿ : ಶಾಸಕ ಎನ್.ಎ.ನೆಲ್ಲಿಕುನ್ನು
                ಕಾಸರಗೋಡಿನ ಕನ್ನಡಿಗರಿಂದ ಹಕ್ಕು ಸಂರಕ್ಷಣೆ ದಿನಾಚರಣೆ, ಧರಣಿ ಸತ್ಯಾಗ್ರಹ
   ಕಾಸರಗೋಡು: ಕೇರಳ ರಾಜ್ಯದಲ್ಲಿರುವ ಪ್ರತಿಯೊಬ್ಬನ ಹಕ್ಕು, ಸವಲತ್ತು ಸಂರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಕೇರಳದಲ್ಲಿ ಮಲಯಾಳಿಗರಿಗೆ ನೀಡಲಾದ ಎಲ್ಲಾ ಹಕ್ಕು ಸವಲತ್ತುಗಳನ್ನು ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೂ ಕಲ್ಪಿಸಬೇಕಾದುದು ಸರಕಾರದ ಕರ್ತವ್ಯ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.
    ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕರಂದಕ್ಕಾಡ್ನಲ್ಲಿ ಗುರುವಾರ ಆಯೋಜಿಸಿದ ಕರಾಳ ದಿನ, ಕನ್ನಡ ಹಕ್ಕು ಸಂರಕ್ಷಣೆ ದಿನ ಮತ್ತು ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕನ್ನಡಿಗರ ಪರವಾಗಿ ನಾನಿದ್ದೇನೆ ಎಂದ ಅವರು ಕಳೆದ ಯುಡಿಎಫ್ ಸರಕಾರದ ಕಾಲಘಟ್ಟದಲ್ಲಿ ಕನ್ನಡಪರವಾಗಿ ವಾದಿಸಿ ಭಾಷಾ ಮಸೂದೆಯಲ್ಲಿ ಎರಡು ತಿದ್ದುಪಡಿಯನ್ನು ತಂದಿರುವುದಾಗಿ ಹೇಳಿದರು. ಕನ್ನಡದಲ್ಲಿ ಅಜರ್ಿ ನಮೂನೆ, ಸುತ್ತೋಲೆಯನ್ನು ನೀಡುವಂತೆ ವಿಧಾನಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದ್ದೆ. ಕನ್ನಡಿಗರ ಹಕ್ಕಿಗಾಗಿ ಹೋರಾಡುತ್ತಿರುವ ಕನ್ನಡಿಗರ ಜೊತೆಯಲ್ಲಿದ್ದುಕೊಂಡು ನಾನು ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದರು. ಮುಂದಿನ ಒಂದು ವರ್ಷದೊಳಗೆ ಕನ್ನಡ ಭಾಷೆಯನ್ನು ಕಲಿಯುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.
  ಧರಣಿ ಕಾರ್ಯಕ್ರಮದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸ್ತೂರಿ ಕನರ್ಾಟಕ ಜನಪರ ವೇದಿಕೆ ಬೆಂಗಳೂರು ರಾಜ್ಯಾಧ್ಯಕ್ಷ ರಮೇಶ್ ಗೌಡ ಅವರು ಮಾತನಾಡಿ ಕಾಸರಗೋಡಿನ ಕನ್ನಡಿಗರು ಕನ್ನಡದ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟ ಕನರ್ಾಟಕದ ಕನ್ನಡಿಗರಿಗೆ ಮಾದರಿಯಾಗಿ ಸ್ಪೂತರ್ಿ ನೀಡುತ್ತದೆ. ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಹಿತರಕ್ಷಣೆ ಮಾಡುವುದು ಸರಕಾರದ ಕರ್ತವ್ಯ. ಕನ್ನಡಿಗರಿಗೆ ಅನ್ಯಾಯವಾದಾಗ ಮತ್ತು ಭಾಷಾ ಹಕ್ಕಿನ ಮೇಲೆಯ ದೌರ್ಜನ್ಯ ನಡೆದಾಗ ಕನರ್ಾಟಕ ಸರಕಾರ ಪ್ರತಿಭಟಿಸಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧ ಅವಕಾಶವನ್ನು ನಿರಾಕರಿಸುವುದು ಸರಕಾರ ಮಾಡುತ್ತಿರುವ ಅಕ್ಷಮ್ಯ ಅಪರಾಧ. ಕೇರಳ ಹೈಕೋಟರ್್ ಕೂಡ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಬೇಕು ಎಂದು ಸರಕಾರಕ್ಕೆ ಸೂಚಿಸಿದ್ದರೂ ಪಯರ್ಾಯ ಮಾರ್ಗದಲ್ಲಿ ಕನ್ನಡವನ್ನು ಕೊಲ್ಲುವ ಕೆಲಸವನ್ನು ಕೇರಳ ರಾಜ್ಯ ಸರಕಾರ ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದರು.
      ಕಾಸರಗೋಡಿನ ಕನ್ನಡಿಗರ ಸಮಸ್ಯೆ ಕುರಿತು ಕನರ್ಾಟಕ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಸೌಲಭ್ಯ ಸಿಗುವಂತೆ ಮಾಡಬೇಕು. ಸರಕಾರದ ಮಟ್ಟದಲ್ಲಿ ಕೇರಳದೊಂದಿಗೆ ಮಾತುಕತೆ ನಡೆಸಿ ಕಾಸರಗೋಡಿನಲ್ಲಿ ಈಗ ಮೂಡಿರುವ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕನರ್ಾಟಕ ಸರಕಾರ ವಿಶೇಷ ಮುತುವಜರ್ಿ ವಹಿಸಬೇಕು. ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಹಿತ ಕಾಯುವಲ್ಲಿ ಹಾಗೂ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕನರ್ಾಟಕ ಸರಕಾರವು ದಿಟ್ಟ ಕ್ರಮಕ್ಕೆ ಮುಂದಾಗಬೇಕೆಂದರು. ಕಾಸರಗೋಡಿನ ಕನ್ನಡಿಗರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಅವರು ಭರವಸೆ ನೀಡಿದರು.
    ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ್ ಬಳ್ಳಾಲ್, ಕುಕ್ಕಾರ್ ಶಾಲಾ ನಿಕಟಪೂರ್ವ ರಕ್ಷಕ ಶಿಕ್ಷಕ ಸಂಘದಧ್ಯಕ್ಷ ಬಾಲಕೃಷ್ಣ ಅಂಬಾರು, ಜಯರಾಮ ಮಂಜತ್ತಾಯ ಎಡನೀರು, ಸಂಕಬೈಲು ಸತೀಶ ಅಡಪ, ಶ್ರೀಧರ, ಶಿವರಾಮ ಕಾಸರಗೋಡು, ಕಾತರ್ಿಕ್ ಮೊದಲಾದವರು ಮಾತನಾಡಿದರು.
  ಧರಣಿ ಸತ್ಯಾಗ್ರಹದಲ್ಲಿ ಸತೀಶ್ ಮಾಸ್ಟರ್ ಕೂಡ್ಲು, ಟಿ.ಶಂಕರನಾರಯಣ ಭಟ್, ಡಾ.ಗಣಪತಿ ಭಟ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಎಚ್.ಎಸ್.ಭಟ್, ಸೀತಾರಾಮ ಮಾಸ್ಟರ್, ಬಾಲಕೃಷ್ಣ ಅಗ್ಗಿತ್ತಾಯ, ವಿಶ್ವನಾಥ ರಾವ್, ಡಾ.ಯು.ಮಹೇಶ್ವರಿ, ಸೌಮ್ಯಾ ಪ್ರಸಾದ್, ಸತ್ಯನಾರಾಯಣ ಕಾಸರಗೋಡು, ಶ್ರೀಕಾಂತ್ ಕಾಸರಗೋಡು, ಬಿ.ರಾಮಮೂತರ್ಿ, ಪ್ರದೀಪ್ ಶೆಟ್ಟಿ, ಅಬ್ದುಲ್ ರಹಿಮಾನ್, ಪ್ರೊ.ಎ.ಶ್ರೀನಾಥ್, ಗೋಪಾಲಕೃಷ್ಣ ಭಟ್, ಡಾ.ಬೇ.ಸಿ.ಗೋಪಾಲಕೃಷ್ಣ, ದಿವಾಕರ ಆಚಾರ್ಯ, ಕೆ.ವಿ.ರಮೇಶ್, ಸುಂದರ ಬಾರಡ್ಕ ಮೊದಲಾದವರು ನೇತೃತ್ವ ನೀಡಿದರು.
   ಇದೇ ಸಂದರ್ಭದಲ್ಲಿ ಕನ್ನಡ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಶಾಂತಾರಾಮ-ಸುಧಾಕರ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
   ಕಸ್ತೂರಿ ಕನರ್ಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಸ್ತೂರಿ ಕನರ್ಾಟಕ ಜನಪರ ವೇದಿಕೆಯ 50 ಮಂದಿಕಾರ್ಯಕರ್ತರ ತಂಡ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿತು.
   ಕನ್ನಡ ಹೋರಾಟ ಸಮಿತಿ ಕೋಶಾಧಿಕಾರಿ ತಾರಾನಾಥ ಮಧೂರು ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries