HEALTH TIPS

No title

              ಪೆರ್ಲದಲ್ಲಿ ಕುಂಬಳೆ ಉಪಜಿಲ್ಲಾ ಕಲೋತ್ಸವಕ್ಕೆ ವಿದ್ಯುಕ್ತ ಚಾಲನೆ
             ವಿದ್ಯಾಥರ್ಿಗಳ ಕಲಾವಂತಿಕೆಗೆ ಸಮರ್ಥ ನಿದರ್ೇಶನ-ಪ್ರೋತ್ಸಾಹ ನೀಡಬೇಕು-ಶಾರದಾ ವೈ 
    ಪೆರ್ಲ: ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶಾಲಾ ಕಲೋತ್ಸವಗಳು ಗ್ರಾಮೀಣ ಪ್ರತಿಭಾ ಅನಾವರಣಕ್ಕೆ ಬಹುದೊಡ್ಡ ವೇದಿಕೆಯೊದಗಿಸಿದೆ. ಸಾಮಾನ್ಯ ವಿದ್ಯಾಥರ್ಿಗಳಲ್ಲಿ ಸುಪ್ತವಾಗಿರುವ ಬಹುಮುಖ ಸಾಮಥ್ರ್ಯ-ಕಲಾವಂತಿಕೆಯನ್ನು ಸಮರ್ಪಕ ಮಾರ್ಗದರ್ಶನದೊಂದಿಗೆ ಬೆಳೆಸಿ ಬೆಳಗುವಂತೆ ಮಾಡುವ ಶಾಲಾ ಕಲೋತ್ಸವದ ಅತಿಥೇಯತ್ವವನ್ನು ಈ ವರ್ಷ ಹೊತ್ತಿರುವ ಪೆರ್ಲ ಶ್ರೀಸತ್ಯನಾರಾಯಣ ವಿದ್ಯಾಸಂಸ್ಥೆ ಗಡಿನಾಡಿನ ಸಾಂಸ್ಕೃತಿಕ ಭೂಪಟದಲ್ಲಿ ತನ್ನದೇ ಸಾಧನೆಯ ಮೂಲಕ ಗುರುತಿಸಿಕೊಂಡಿದೆ ಎಂದು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ ತಿಳಿಸಿದರು.
    ಕುಂಬಳೆ ಉಪಜಿಲ್ಲಾ ಮಟ್ಟದ 2018-19ನೇ ಸಾಲಿನ ಶಾಲಾ ಕಲೋತ್ಸವಕ್ಕೆ ಗುರುವಾರ ಬೆಳಿಗ್ಗೆ ಪೆರ್ಲ ಶ್ರೀಸತ್ಯನಾರಾಯಣ ವಿದ್ಯಾಸಂಸ್ಥೆಯಲ್ಲಿ ಧ್ವಜಾರೋಹಣಗೈದು ಚಾಲನೆ ನೀಡಿ ಅವರು ಮಾತನಾಡಿದರು.
   ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆರ್ಲ, ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ, ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ, ಉಪಾಧ್ಯಕ್ಷ ಸದಾಶಿವ ಭಟ್, ಸದಸ್ಯ ಬಿ.ಎಸ್.ಗಾಂಭೀರ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಎಂ.ಕೇಶವ ಪ್ರಕಾಶ್ ವಂದಿಸಿದರು. ಪೆರ್ಲ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದಪದಾಧಿಕಾರಿಗಳು, ವಿವಿಧಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಾರ್ವಜನಿಕರು ಪಾಲ್ಗೊಂಡರು.
  ಸಮಾರಂಭದಲ್ಲಿ ಶಾಲಾ ನಿಮರ್ಾತೃ ಪರ್ತಜೆ ವೆಂಕಟರಮಣ ಭಟ್ ಅವರ ಪ್ರತಿಮೆಗೆ ಶಾರದಾ ವೈ ಮಾಲಾರ್ಪಣೆಗೈದು ಗೌರವ ನಮನ ಸಲ್ಲಿಸಿದರು.
   ಗುರುವಾರದಿಂದ ಶನಿವಾರ(ನ.3)ದವರೆಗೆ ಮೂರು ದಿನಗಳ ಕಾಲ ನಡೆಯುವ ಕಲೋತ್ಸವ ಸ್ಪಧರ್ೆಯಲ್ಲಿ ಕುಂಬಳೆ ಉಪಜಿಲ್ಲೆಯ 40 ರಿಂದ 50 ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳು ತಮ್ಮ ಪ್ರತಿಭಾ ಅನಾವರಣದ ಮೂಲಕ ಸ್ಪಧರ್ಿಸುತ್ತಿದ್ದಾರೆ. ಗುರುವಾರ ಭಾಷಣ, ಬರಹ, ಕಥೆ ಹೇಳುವುದು ಮೊದಲಾದ ವೇದಿಕೆಯೇತರ ಸ್ಪಧರ್ೆಗಳು ನಡೆದವು.
   ಇಂದು(ಶುಕ್ರವಾರ) ಭರತನಾಟ್ಯ, ಕೂಚಿಪುಡಿ,ಒಪ್ಪನ ಮೊದಲಾದ ಸ್ಪಧರ್ೆಗಳು ನಡೆಯಲಿವೆ. ಗುರುವಾರ 10 ವೇದಿಕೆಗಳಲ್ಲಿ ಸ್ಪಧರ್ೆಗಳು ನಡೆಯಿತು. ಇಂದು 12 ಪ್ರಧಾನ ವೇದಿಕೆಗಳಲ್ಲಿ ಮತ್ತು ನಾಳೆ(ಶನಿವಾರ) 7 ವೇದಿಕೆಗಳಲ್ಲಿ ಸ್ಪಧರ್ೆಗಳು ನಡೆಯಲಿವೆ.
     ಕಲೋತ್ಸವ ವಂಚಿತ ಹಿರಿಯ-ಕಿರಿಯ ಪುಟಾಣಿಗಳು!
   ರಾಜ್ಯದ ಪ್ರವಾಹದ ಕಾರಣ ಈ ವರ್ಷ ಕಲೋತ್ಸವಗಳನ್ನು ನಡೆಸದಿರುವ ಬಗ್ಗೆ ಸರಕಾರ ಮೊದಲು ಚಿಂತನೆ ನಡೆಸಿತ್ತು. ಆದರೆ ಈ ನಿಧರ್ಾರಕ್ಕೆ ಸವಾಕ್ ಸಹಿತ ವಿವಿಧ ವಲಯಗಳಿಂದ ಭಾರೀ ಒತ್ತಡಗಳು ಉಂಟಾದ ಕಾರಣ ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿಗಳಿಗೆ ಮಾತ್ರ ಕಲೋತ್ಸವ ನಡೆಸಲು ಸರಕಾರ ಒಪ್ಪಿಗೆ ನೀಡಿತು.
    ಏಷ್ಯಾದಲ್ಲೇ ಅತ್ಯಂತ ದೊಡ್ಡ ಉತ್ಸವವೆಂಬ ಹೆಗ್ಗಳಿಕೆಯ ಕೇರಳ ರಾಜ್ಯ ಕಲೋತ್ಸವವು ವ್ಯವಸ್ಥಿತವಾಗಿ ನಡೆಯುತ್ತದೆ.ಮೊದಲು ಶಾಲಾ ಹಂತ, ಬಳಿಕ ಉಪಜಿಲ್ಲೆ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಕಲೋತ್ಸವ ಏರ್ಪಡಿಸಲಾಗುತ್ತದೆ.
   ಈ ಬಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳಿಗೆ ಕಲೋತ್ಸವಗಳನ್ನು ಏರ್ಪಡಿಸದಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಎಳೆಯ ಪ್ರತಿಭೆಗಳನ್ನು ಪ್ರವಾಹದ ಪ್ರಾಕೃತಿಕ ವೈರುದ್ಯದ ಕಾರಣ ನೀಡಿ ಕಲೋತ್ಸವದಿಂದ ಹೊರಗಿಟ್ಟಿರುವುದು ವಿದ್ಯಾಥರ್ಿಗಳ ಪ್ರತಿಭಾ ಅನಾವರಣಕ್ಕೆ ಚ್ಯುತಿಯಾಗಿ ಸಾಂಸ್ಕೃತಿಕ ಹಿನ್ನಡೆಗೆ ಕಾರಣವಾಗುವ ಭೀತಿಯ ಮಾತುಗಳು ಕೇಳಿಬಂದಿದೆ.


    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries