ಗೋವಿಗಾಗಿ ಮೇವು
ಪೆರ್ಲ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ಇತ್ತೀಚೆಗೆ ಯಶಸ್ವಿಯಾಗಿ ಜರಗಿತು.
ಕುಂಬಳೆ ವಲಯದ ಸೀತಾಂಗೋಳಿಯ ಹಮೀದ್ ನೆಲ್ಲಿಕುನ್ನು ಇವರ ಖಾಲಿ ಸ್ಥಳದಲ್ಲಿದ್ದ ಹಸಿಹುಲ್ಲನ್ನು ಮುಳ್ಳೇರಿಯ ಮಂಡಲ ಚಂದ್ರಗಿರಿ ಹವ್ಯಕ ವಲಯದ ನೇತೃತ್ವದಲ್ಲಿ ಕತ್ತರಿಸಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಕಳುಹಿಸಿಕೊಡಲಾಯಿತು. ರಾಮಚಂದ್ರಾಪುರ ಮಠದ ಮುಳ್ಳೇರಿಯಾ ಮಂಡಲ ವಿದ್ಯಾಥರ್ಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಬಾಲಕೃಷ್ಣ ಶರ್ಮ, ಕುಂಬ್ಳೆ ವಲಯ ಅಧ್ಯಕ್ಷ ಚಂದ್ರಗಿರಿ ವಲಯ ಕಾರ್ಯದಶರ್ಿ ರಾಜಗೋಪಾಲ ಕೈಪ್ಪಂಗಳ, ಮೂಲಮಠ ಪ್ರತಿನಿಧಿ ಕುಂಜತ್ತೋಡಿ ರಾಜಗೋಪಾಲ ಶರ್ಮ, ಬಿ. ಯಲ್ ಶಂಭು ಹೆಬ್ಬಾರ ಗುಂಪೆ ವಲಯ ಘಟಕದ ಗುರಿಕ್ಕಾರ, ಸೂರ್ಯ ನಾರಾಯಣ ಭಟ್, ಸೇವಾ ಪ್ರಧಾನ ಕುಂಬ್ಳೆ ವಲಯ ಕುಂಜತ್ತೋಡಿ ಗಣೇಶ ಶರ್ಮ, ರಾಮ ಶರ್ಮ ಎಡಕ್ಕಾನ, ಆನಂದ, ಐತ್ತಪ್ಪ, ಶ್ಯಾಮ ಭಟ್ ಕುದ್ರೆಪ್ಪಾಡಿ ಇವರು ಹುಲ್ಲು ಕಟಾವು ಚಟುವಟಿಕೆಯ ನೇತೃತ್ವ ವಹಿಸಿದ್ದರು. ರಾಜಗೋಪಾಲ ಕೈಪ್ಪಂಗಳ ಅವರ ವಾಹನದ ಮೂಲಕ ಹುಲ್ಲನ್ನು ಸಾಗಿಸಲಾಯಿತು.
