ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಹಿಂ.ವರ್ಗ-ಜಾತಿ ಮಾಚರ್ಾದಿಂದ ಮಂಜೇಶ್ವರ ಠಾಣೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ
ಮಂಜೇಶ್ವರ: ಪೈವಳಿಕೆಯಲ್ಲಿ ಕಿರು ವ್ಯಾಪಾರ ನಡೆಸಿ ಜೀವನ ನಡೆಸುತಿದ್ದ ಪರಿಶಿಷ್ಟ ಜಾತಿ ವಿಭಾಗಕ್ಕೆ ಒಳಪಟ್ಟ ಉಮೇಶ್ ಎಂಬವರು ಶಬರಿಮಲೆ ನಾಮಜಪದಲ್ಲಿ ಪಾಲ್ಗೊಂಡಿದಾರೆಂಬ ನೆಪದಲ್ಲಿ ಡಿ ವೈ ಎಫ್ ಐ ಕಾರ್ಯಕರ್ತರು ಅ. 15 ರಂದು ರಾತ್ರಿ ಅವರ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಮ್ಯುನಿಸ್ಟ್ ಕರಾಳತೆಯ ಸಂಕೇತ ಎಂದು ಕುಂಟಾರು ರವೀಶ ತಂತ್ರಿ ತಿಳಿಸಿದರು.
ಈ ಬಗ್ಗೆ ತಪ್ಪೆಸೆಗಿದವರ ವಿರುದ್ದ ಸೂಕ್ತ ಕ್ರಮ ಕೈ ಗೊಳ್ಳುವಂತೆ ದೂರನ್ನು ನೀಡಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಪೋಲೀಸ್ ವ್ಯವಸ್ಥೆ ಸರಕಾರದ ಕೈಗೊಂಬೆಯಾಗಿರುವುದೆ ಸಂಕೇತ ಎಂದು ಅವರು ತಿಳಿಸಿದರು.
ಉಮೇಶ್ ಅವರ ಅಂಗಡಿ ದ್ವಂಸಗೊಳಿಸಿದ ಆರೋಪಿಗಳ ಪತ್ತೆಗೆ ಪೋಲೀಸರು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮಂಜೇಶ್ವರ ಪೋಲೀಸ್ ಠಾಣೆಗೆ ಹಿಂದುಳಿದ ವರ್ಗ-ಜಾತಿ ಮೋಚರ್ಾದ ನೇತೃತ್ವದಲ್ಲಿ ನಡೆಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸಂಗಡಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಠಾಣಾ ಮುಂಭಾಗದಲ್ಲಿ ಪೊಲೀಸರು ತಡೆದರು.
ಬಳಿಕ ಪೊಲೀಸ್ ಠಾಣಾ ಮುಂಭಾಗದಲ್ಲಿ ನಡೆದ ಧರಣಿಗೆ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ್ ತಂತ್ರಿ ಕುಂಟಾರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪಿಣರಾಯಿ ಸರಕಾರದ ಪೊಲೀಸರು ಹಿಂದೂಗಳಿಗೆ ರಕ್ಷಣೆ ನೀಡುವುದಿಲ್ಲ. ಆದರೆ ಖಾಕಿ ವಸ್ತ್ರಕ್ಕೆ ನಾವು ಗೌರವವನ್ನು ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಕಠಿಣ ಪರಿಣಾಮವನ್ನು ಎದುರಿಸಬೇಕಾಗುವುದಾಗಿ ಅವರು ಇಲಾಖೆಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ನೇತಾರರು ಕಾರ್ಯಕರ್ತರು ಸಹಿತ ಪ್ರತಿಭಟನಾ ಧರಣಿಯಲ್ಲಿ ನೂರಾರು ಮಂದಿ ಪಾಲ್ಗೊಂಡರು.




