ಕುಂಬಳೆ: ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದಲ್ಲಿ 53ನೆ ವರ್ಷದ ಏಕಾಹ ಭಜನೆಯು ಕಾತರ್ಿಕ ಜಾಗರಣ ಏಕಾದಶಿಯಾದ ಸೋಮವಾರ ಬೆಳಿಗ್ಗೆ ದೇವಳದ ಅರ್ಚಕ ಕೆ.ಪುಂಡಲೀಕ ಭಟ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.
ಬೆಳಿಗ್ಗೆ ಭಕ್ತಾದಿಗಳಿಂದ ಶ್ರೀ ದೇವರಿಗೆ 108 ಪ್ರದಕ್ಷಿಣೆ ನಡೆಯಿತು. ಸೋಮವಾರ ಮುಂಜಾನೆಯಿಂದ ಮಂಗಳವಾರ ಮುಂಜಾನೆಯ ತನಕ ಊರ ಪರವೂರ ಭಜನಾ ತಂಡದಿಂದ ಭಜನಾ ಸೇವೆ ನಡೆಯಿತು.





