ಕಾಸರಗೋಡು: ಅಖಿಲ ಭಾರತ ಸಹಕಾರಿ ಬ್ಯಾಂಕಿನ 56ನೇ ವಾಷರ್ಿಕೋತ್ಸವದ ಸಂಭ್ರಮದ ಪ್ರಯುಕ್ತ ಕಾಸರಗೋಡು ಮುನ್ಸಿಪಲ್ ಲೈಬ್ರರಿಯ ಪರಿಸರದಲ್ಲಿ ಖ್ಯಾತ ಚಿತ್ರಕಲಾವಿದ ಪಿ.ಎಸ್.ಪುಣಿಚಿತ್ತಾಯರ ನೇತೃತ್ವದಲ್ಲಿ ಇತ್ತೀಚೆಗೆ ಚಿತ್ರಕಲಾ ಶಿಬಿರ ನಡೆಯಿತು.
ಪ್ರವೀಣ್, ಜಯಪ್ರಕಾಶ್ ಶೆಟ್ಟಿ ಬೇಳ, ಇ.ವಿ.ಅಶೋಕ್, ರವಿ ಪಿಲಿಕೊಡ್, ಇ.ಬಿ.ಭಟ್ ಮೊದಲಾದ ಹದಿನೆಂಟು ಮಂದಿ ಚಿತ್ರಕಲಾವಿದರು ತಮ್ಮ ಕಲಾ ರೂಪದ ಸೃಷ್ಟಿಯನ್ನು ಬ್ಯಾಂಕಿಗೆ ಈ ಸಂದರ್ಭ ಕೊಡುಗೆ ನೀಡಿದರು.





