ಮುಳ್ಳೇರಿಯ: ವಿದ್ಯಾಥರ್ಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕುವ ಒಂದು ಅಪೂರ್ವ ಶಿಬಿರ "ಆಟದ ಮನೆ" ಕುಂಟಾರು ನುದಾನಿತ ಹಿರಿಯ ಶಾಲೆಯಲ್ಲಿ ಶನಿವಾರ ಆರಂಭಗೊಂಡಿತು.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನಿರ್ಮಲ್ ಕುಮಾರ್ ಕಾರಡ್ಕ ಶಿಬಿರವನ್ನು ಉದ್ಘಾಟಿಸಿದರು. ತಿಂಗಳಿಗೊಂದು ರಜಾದಿನದಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ನೃತ್ಯ, ಹಾಡು, ಚಿತ್ರ ರಚನೆ ಮೊದಲಾದವುಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವರು. ರಾಜೇಶ್ ಪಾಡಿ ನೇತೃತ್ವ ನೀಡುವರು. ಸಮಾರಂಭದಲ್ಲಿ ಶಾಲೆಯ ವ್ಯವಸ್ಥಾಪಕ ಜಗದೀಶ್.ಕೆ, ಮುಖ್ಯಶಿಕ್ಷಕಿ ಪ್ರಶಾಂತ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರ.ಪಿ, ಅನೀಶ್ ಮೊದಲಾದವರು ಉಪಸ್ಥಿತರಿದ್ದರು.





