ಹಿರಣ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು-ಸಮಿತಿ ರಚನೆ ಸಮಾಲೋಚನೆ
ಉಪ್ಪಳ: ಪ್ರತಿಯೊಂದು ಜೀವಾತ್ಮನ ಭಾವ ಸ್ಪುರಣೆ ಭಗವಂತನ ಕೃಪೆಯಿಂದ ಮಾತ್ರ ಸಾಧ್ಯವಾಗುವುದು. ಸತ್ ಚಿಂತನೆಯ ಮನೋಸ್ಥಿತಿಗೆ ದೇವಸಂಪ್ರೀತಿ ಅನುಗ್ರಹವಾಗುವುದು. ಈ ಹಿನ್ನೆಲೆಯಲ್ಲಿ ಅಜೀಣರ್ಾವಸ್ಥೆಯಲ್ಲಿರುವ ಭಗವತ್ ಸಾನ್ನಿಧ್ಯ ವೃದ್ದಿಗೆ ಕೈಜೋಡಿಸುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗಿ ನೆಮ್ಮದಿ ನೆಲೆಸುತ್ತದೆ ಎಂದು ಯುವ ವೈದಿಕ ವಿದ್ವಾಂಸ ಅನಂತನಾರಾಯಣ ಭಟ್ ಪರಕಜೆ ಅಭಿಪ್ರಾಯಪಟ್ಟರು.
ಬಾಯಾರು ಸಮೀಪದ ಹಿರಣ್ಯ ಶ್ರೀವನದುಗರ್ಾಪರಮೇಶ್ವರಿ ದೇವಾಲಯದಲ್ಲಿ ಕ್ಷೇತ್ರ ಪುನರ್ ನಿಮರ್ಾಣದ ಪೂರ್ವಭಾವಿಯಾಗಿ ಶುಕ್ರವಾರ ಆಯೋಜಿಸಲಾದ ವಿವಿಧ ವೈದಿಕ ಕಾರ್ಯಕ್ರಮದಂಗವಾಗಿ ನಡೆದ ಧಾಮರ್ಿಕ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ಹಲವು ದಶಕಗಳಿಂದ ಅಜೀಣರ್ಾವಸ್ಥೆಯಲ್ಲಿದ್ದು, ಪ್ರಸ್ತುತ ಮತ್ತೆ ಅಭಿವೃದ್ದಿ ಹೊಂದಲಿರುವ ಶ್ರೀಕ್ಷೇತ್ರದ ಸಾನ್ನಿಧ್ಯ ವೃದ್ದಿಯು ಪರಿಸರ-ಪ್ರದೇಶಗಳ ನೆಮ್ಮದಿಗೆ ಕಾರಣವಾಗಲಿದೆ. ಇಲ್ಲಿನ ವಿಶಿಷ್ಟ ಕೆರೆಯ ತೀರ್ಥಸ್ನಾನವು ಸಕಲ ರೋಗ ನಿವಾರಕವಾಗಿರುವುದು ಸಾನ್ನಿಧ್ಯದ ಮಹಾತ್ಮ್ಯೆಯ ಪ್ರತೀಕವಾಗಿದ್ದು, ನಾಗರಿಕರು ಒಗ್ಗಟ್ಟಿನಿಂದ ಕ್ಷೇತ್ರ ಕಾಯಕಲ್ಪಕ್ಕೆ ಪರಸ್ಪರ ಕೈಜೋಡಿಸಬೇಕೆಂದು ಅವರು ಕರೆನೀಡಿದರು.
ಹಿರಣ್ಯ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನ ಶಕ್ತಿಯ ಪ್ರೇರಣೆಯಿಂದ ಗೋಚರಿಸಲ್ಪಟ್ಟ ಕ್ಷೇತ್ರವು ಇಚ್ಚಾ ಶಕ್ತಿ, ಕ್ರಿಯಾಶಕ್ತಿಗಳ ಮೇಲ್ಮೆಯಿಂದ ಸಾಕಾರಗೊಳ್ಳುವ ಭರವಸೆ ನಮ್ಮಲ್ಲಿರಲಿ. ಮಾನವೀಯ ಸೌಹಾರ್ಧತೆಯ ಮೂಲಕ ಭಗವಂತನ ಅನುಗ್ರಹಕ್ಕೆ ಯೋಗಿಗಳಂತೆ ಬದ್ದರಾಗುವ ಛಲ ಉದ್ದರಿಸಲಿ ಎಂದು ತಿಳಿಸಿದರು.
ಶ್ರೀಕೃಷ್ಣ ಭಟ್ ಹಿರಣ್ಯ, ವೆಂಕಪ್ಪ ಶೆಟ್ಟಿ ಕಂಬಲಗದ್ದೆತರವಾಡು ಗುತ್ತುಮನೆ ಉಪಸ್ಥಿತರಿದ್ದು ಮಾತನಾಡಿದರು.
ದೇವಾಲಯದವಾಸ್ತುಶಿಲ್ಪಿ ಮುಳಿಯಾಲ ಪ್ರಸನ್ನ ಭಟ್ ಅವರು ದೇವಾಲಯದ ಸಾನ್ನಿಧ್ಯದ ಕುರಿತು ಮಾತನಾಡಿದರು.ಕಟ್ನಬೆಟ್ಟು ಮೋನಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಶೆಟ್ಟಿ ವಿಟ್ಲ ಸ್ವಾಗತಿಸಿ,ಮಧುಕರ ಭಟ್ ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಕಮಲ ಟೀಚರ್ ಪ್ರಾರ್ಥನಾ ಗೀತೆ ಹಾಡಿದರು. ಶ್ರೀವನದುಗರ್ಾದೇವಿ ಕ್ಷೇತ್ರದಜೀಣರ್ೋದ್ದಾರ ಹಾಗೂ ಆಥರ್ಿಕ ನಿಧಿ ಸಂಗ್ರಹದ ಬಗ್ಗೆ ಸಭೆಯಲ್ಲಿ ಚಚರ್ಿಸಲಾಯಿತು.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆಗಣಪತಿ ಹವನ, ಮೃತ್ಯುಂಜಯ ಹೋಮ, ಪ್ರಸಾದವಿತರಣೆ, ಅನ್ನಸಣತರ್ಪಣೆ, ಅಪರಾಹ್ನ ಮಹಿಷಂದಾಯಾದಿ ಸಪರಿವಾರ ದೈವಗಳಿಗೆತಂಬಿಲಸೇವೆ, ಶ್ರೀದುಗರ್ಾಪೂಜೆ, ಪ್ರಸಾದ ವಿತರಣೆ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಿತು.






