ಕುಂಬಳೆ ವೀರವಿಠಲ ದೇವಳದಲ್ಲಿ ಅವಭೃತೋತ್ಸವ ಸಂಪನ್ನ
0
ನವೆಂಬರ್ 26, 2018
ಕುಂಬಳೆ: ಕುಂಬಳೆ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಶನಿವಾರ ಕಾತರ್ಿಕ ದೀಪೋತ್ಸವ ಹಾಗು ಭಾನುವಾರ ಅವಭೃತೋತ್ಸವ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನೆರವೇರಿತು.
ಕಾತರ್ಿಕ ದೀಪೋತ್ಸವದಂದು ಶ್ರೀ ದೇವರಿಗೆ ಬೆಳಿಗ್ಗೆ ಹತ್ತು ಸಮಸ್ತರಿಂದ ದೇವತಾ ಪ್ರಾರ್ಥನೆ, ಶ್ರೀ ದೇವರು ಧಾತ್ರಿ ಕಟ್ಟೆಗೆ ಆಗಮಿಸಿ ಧಾತ್ರಿ ಹವನ,ಧಾತ್ರಿ ಪೂಜೆ ಹಾಗು ಶ್ರೀ ದೇವರಿಗೆ ಮಹಾಪೂಜೆ ಬಳಿಕ ವನಭೋಜನ ಸಮಾರಾಧನೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ ಯಸ್.ಬಿ ಜಿಲ್ಲಾ ಟೆಂಪಲ್ ಅಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಕಾಮತ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಜಿ ಯಸ್ .ಬಿ ಕಲೋತ್ಸವದ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಳೆದ ವರ್ಷ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು. ಸಂಜೆ ಪುಷ್ಪಾಲಂಕಾರ ಸಹಿತ ಬೆಳ್ಳಿ ಪಲ್ಲಂಕಿಯಲ್ಲಿ ಶ್ರೀ ದೇವರ ಪೇಟೆ ಸವಾರಿ ಪ್ರಾರಂಭವಾಗಿ ಕುಂಬ್ಳೆ ಪೇಟೆಯಲ್ಲಿ ಜಿ.ಯಸ್.ಬಿ. ಯುವಕರ ವತಿಯಿಂದ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು. ಪೇಟೆ ಸವಾರಿ ಬಳಿಕ ಶ್ರೀ ದೇವರು ದೇವಳಕ್ಕೆ ಆಗಮಿಸಿ ರಾತ್ರಿ ಗೋಪುರೋತ್ಸವ ,ವಸಂತ ಪೂಜೆ ,ಪಟ್ಟಕಾಣಿಕೆ,ಪ್ರಸಾದ ವಿತರಣೆ ಬಳಿಕ ಸಮಾರಾಧನೆ ನಡೆಯಿತು.
ಭಾನುವಾರ ಬೆಳಿಗ್ಗೆ ಶ್ರೀ ದೇವರ ಅವಭೃತೋತ್ಸವಕ್ಕೆ ಹೊರಟು ಪೇಟೆ ಸವಾರಿ ಬಳಿಕ ಶ್ರೀ ದೇವಳದ ಸರೋವರದಲ್ಲಿ ತಪ್ಪಂಗಾಯಿ ತೀರ್ಥ ಸ್ನಾನ ನಡೆಯಿತು.ಬಳಿಕ ಶ್ರೀ ದೇವರಿಗೆ ದ್ವಾದಶ ಕಲಶಾಭಿಷೇಕ, ಸಾನಿಧ್ಯ ಹವನ, ರಾತ್ರಿ ಮಹಾಪೂಜೆ, ಸಮಾರಾಧನೆ ನಡೆಯಿತು. ಊರ ಪರವೂರಿನ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


