ವೃತ್ತಿ ಪರಿಚಯ ಮೇಳ - ಪ್ರಶಾಂತ್. ವಿಗೆ ಎ ಗ್ರೇಡ್
0
ನವೆಂಬರ್ 26, 2018
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಣ್ಣೂರಿನ ಸೈಂಟ್ ಮೈಕೆಲ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.25 ರಂದು ಜರಗಿದ ಕೇರಳ ರಾಜ್ಯ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಬಲೆ ಹೆಣೆಯುವ ಸ್ಪಧರ್ೆಯಲ್ಲಿ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ಪ್ರಶಾಂತ್.ವಿ ಭಾಗವಹಿಸಿ `ಎ' ಗ್ರೇಡ್ ಪಡೆದಿದ್ದಾನೆ. ಈತ ಕುಂಟಿಕಾನ ಸನಿಹದ ಕಟ್ನಡ್ಕ ನಿವಾಸಿ ತಿಮ್ಮಪ್ಪ. ವಿ ಮತ್ತು ಜಯಂತಿ. ಟಿ ಇವರ ಪುತ್ರ.


