ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಮುಜುಂಗಾವಿನಲ್ಲಿ ಸ್ಕೌಟಿಂಗ್ ಮಿನಿ ಕ್ಯಾಂಪೂರಿಗೆ ಅದ್ದೂರಿಯ ಚಾಲನೆ
ಕುಂಬಳೆ: ಸ್ಕೌಟಿಂಗ್ ವಿಶೇಷ ಶಿಬಿರಗಳು ಜೀವನ ಮೌಲ್ಯಗಳ ಪಾಠವಾಗಲು ನೆರವಾಗುತ್ತದೆ. ಸಮಾಜದ ವಿವಿಧ ಸ್ತರಗಳ ವಿವಿಧ ಭಾಷೆ, ಸಂಸ್ಕೃತಿಗಳ ವಿದ್ಯಾಥರ್ಿಗಳು ಒಂದೊಡೆ ಜೊತೆಯಾಗಿ ವಿಶೆಷ ತರಬೇತಿ,ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಹೊಸ ಅನುಭವ ನೀಡುವುದೆಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾಥರ್ಿಗಳ ಶಾರೀರಿಕ, ಮಾನಸಿಕ, ನೈತಿಕ ವಿಕಾಸಕ್ಕೆ ಮಾರ್ಗದಶರ್ಿಯಾಗಿ ಕಾಯರ್ಾಚರಿಸುತ್ತಿರುವ ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮಟ್ಟದ ಮಿನಿ ಕ್ಯಾಂಪೂರಿಗೆ ಶುಕ್ರವಾರ ಅಪರಾಹ್ನ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದ ಜನಜೀವನದ ಅವಸ್ಥೆಗಳು ನಮ್ಮಿದಿರು ಈಗಲೂ ಭೀತಿಗೊಳಿಸುತ್ತಿದೆ. ಆದರೆ ಸ್ಕೌಟ್ಸ್-ಗೈಡ್ಸ್ ನಂತಹ ಸಾಮಾಜಿಕ ಚಳವಳಿಗಳು ಸಂಘರ್ಷಮಯ ಜೀವನ ನಿರ್ವಹಣೆಗೆ ಮಾರ್ಗದರ್ಶನ ನೀಡುತ್ತದೆ. ಪರಸ್ಪರ ಅಥರ್ೈಸಿ, ಮತ-ಧರ್ಮಗಳಾಚೆ ಮಾನವತಾ ವಾದಿಯಾಗಿ, ಸರ್ವ ಜನರೊಂದಿಗೂ ಒಗ್ಗೂಡಿ ಬದುಕುವ ಶಿಕ್ಷಣ ಹೊಸ ತಲೆಮಾರಿಗೆ ನೀಡಬೇಕು. ಇಂತಹ ಶಿಬಿರಗಳಿಂದ ಅದರ ಸಾಕಾರತೆ ಸಾಧ್ಯವಾಗಲಿ, ತನ್ಮೂಲಕ ಭವಿಷ್ಯದ ಸಮಾಜ, ರಾಜ್ಯ, ರಾಷ್ಟ್ರ ಶಾಂತಿ ಸಮೃದ್ದತೆಯಿಂದ ಮೂಡಿಬರಲಿ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಗ್ರಾ.ಪಂ. ಅಧ್ಯಕ್ಷರೂ, ಮಾಜೀ ಸ್ಕೌಟಿಂಗ್ ವಿದ್ಯಾಥರ್ಿ ಪುಂಡರೀಕಾಕ್ಷ ಕೆ.ಎಲ್ ಅವರು ಮಾತನಾಡಿ , ಜಗತ್ತಿನಲ್ಲಿ ಎಲ್ಲಾ ಜೀವರಾಶಿಗೂ ಒದಗಿರುವ ಸಮಾನ ಹಂಚಿಕೆಯೆಂದರೆ ಅದು ಸಮಯವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಸದುಪಯೋಗದ ಬಗ್ಗೆ ಗಂಭೀರ ಚಿಂತನೆಗಳಾಗಬೇಕು. ವಿದ್ಯಾಥರ್ಿಗಳು ಬಾಲ್ಯ ಕಾಲದಲ್ಲಿ ಪಡೆಯುವ ಒಂದೊಂದು ಅನುಭವಗಳೂ ಬದುಕಿನ ಯಶಸ್ವಿಗೆ ಮಾರ್ಗದಶರ್ಿಯಾಗುವುದು. ಸ್ಕೌಟಿಂಗ್ ನಿಂದ ನಾಯಕತ್ವ ಗುಣ ಲಭ್ಯವಾಗುತ್ತದೆ. ಮಾನಸಿಕ ದೃಢತೆ, ಸ್ವಾವಲಂಬನೆ, ಸಾಮಾಜಿಕ ಬದುಕಿನ ಮೌಲ್ಯಗಳಯಂತಹ ಅನುಭವಗಳಿಗೆ ಸ್ಕೌಟಿಂಗ್ ನೆರವಾಗುತ್ತದೆ. ಸಮಯ ಪರಿಪಾಲನೆ, ವ್ಯಕ್ತಿ, ಪರಿಸರ ಶುಚಿತ್ವಗಳ ಪಾಠ ಸ್ಕೌಟಿಂಗ್ ನಿಂದ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಸಂಪುಟ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಕಾಸರಗೋಡು ವಲಯ ಕ್ರೈಸ್ತ ದೇವಾಲಯಗಳ ಪ್ರಧಾನ ಧರ್ಮಗುರು, ಬೇಳ ಶೋಕಮಾತಾ ದೇವಾಲಯದಧರ್ಮಗುರುಗಳೂ ಆದ ಫಾದರ್ ಜೋನ್ ವಾಸ್ ಹಾಗೂ ಪ್ರಸಿದ್ದ ಇಸ್ಲಾಂ ಧರ್ಮ ಪಂಡಿತ ಕುಂಬೋಳ್ ಸಯ್ಯದ್ ಕೆ.ಎಸ್. ಶಮೀಮ್ ತಂಙಳ್ ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದರು.
ಕೇರಳ ರಾಜ್ಯ ಸ್ಕೌಟಿಂಗ್ ಕಾರ್ಯದಶರ್ಿ ಸಜಿತ್ ಎ.ಕೆ. ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಕೆ, ಜಿಲ್ಲೆಯ ಮೊತ್ತಮೊದಲ ಗೈಡ್ಸ್ ಶಿಕ್ಷಕಿ ನಿವೃತ್ತ ಅಧ್ಯಾಪಿಕೆ ಸವಿತಾ ಟೀಚರ್ ಕಾಸರಗೋಡು, ಗ್ರಾ.ಪಂ.ಸದಸ್ಯರುಗಳಾದ ಮುರಳೀದರ ಯಾದವ್ ನಾಯ್ಕಾಪು, ಹರೀಶ್ ಗಟ್ಟಿ, ಶುಭಹಾರೈಸಿದರು. ಶ್ರೀಭಾರತೀ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ, ನಿವೃತ್ತ ಕಂದಾಯ ಅಧಿಕಾರಿ ಜನಾರ್ಧನ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸ್ಕೌಟ್ ಶಿಕ್ಷಕ ಸಾಬು ಥೋಮಸ್ ಸ್ವಾಗತಿಸಿ, ಶಾಲಾ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ ವಂದಿಸಿದರು. ಜಿಲ್ಲಾ ಸ್ಕೌಟಿಂಗ್ ಆಯುಕ್ತ ಗುರುಮೂತರ್ಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಕ್ಯಾಂಪೂರಿ ಲಾಂಛನ ನಿಮರ್ಿಸಿದ ರಮೇಶ್ ಮಂಗಳೂರು ಅವರನ್ನು ಗೌರವಿಸಲಾಯಿತು.ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ರಾಜ್ಯಮಟ್ಟದಲ್ಲಿ ಪಡೆದಿರುವ ರಾಷ್ಟ್ರಪತಿ ಸ್ಕೌಟ್ಸ್ ಪ್ರಶಸ್ತಿ ವಿಜೇತ ವಿದ್ಯಾಥರ್ಿ ಬಂದಡ್ಕ ಶಾಲಾ ಹಳೆ ವಿದ್ಯಾಥರ್ಿ ಹರ್ಷ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಜೆ 7.30 ರಿಂದ ಶಿಬಿರಾಥರ್ಿಗಳಿಗೆ ದೇಶಭಕ್ತಿ ಗೀತೆಗಳ ಸ್ಪಧರ್ೆ ನಡೆಯಿತು. ನಿವೃತ್ತ ವಿದ್ಯಾಧಿಕಾರಿ ಎಂ.ಜಿ.ನಾರಾಯಣ ರಾವ್ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ.ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.




