HEALTH TIPS

No title

             ಒನ್ ಇಂಡಿಯಾ ಒನ್ ರೈಡ್ ತಂಡ ಬದಿಯಡ್ಕದಲ್ಲಿ
     ಬದಿಯಡ್ಕ: ರಾಜಧಾನಿ ದೆಹಲಿಯಿಂದ ಹೊರಟು ಭಾರತದಾದ್ಯಂತ ಪ್ರವಾಸಗೈಯುತ್ತಿರುವ ಒನ್ ಇಂಡಿಯಾ ಒನ್ ರೈಡ್ ತಂಡದ ಮೂವರು ಯುವಕರು ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಭೇಟಿಯಿತ್ತು ಮಕ್ಕಳೊಂದಿಗೆ `ಹರಟೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರೌಢವಿದ್ಯಾಥರ್ಿಗಳೊಂದಿಗೆ ತಂಡದ ನಾಯಕ ಪಿ. ಅಂಶ್ ಸಂವಾದ ನಡೆಸುತ್ತಾ ಜೀವನದ ನಿದರ್ಿಷ್ಟ ಗುರಿಯನ್ನು ತಲುಪಲು ಅಗತ್ಯವುಳ್ಳ ಮಾಹಿತಿಗಳನ್ನು ತಿಳಿಹೇಳಿದರು. ವಿದ್ಯಾಭ್ಯಾಸದ ಅಗತ್ಯತೆ, ಕೌಶಲ್ಯದ ಅನಿವಾರ್ಯತೆ, ಸೂಕ್ತ ಅಧ್ಯಾಪಕರು ನೀಡುವ ಮಾರ್ಗದರ್ಶನವನ್ನೂ ಅನುಸರಿಸುವುದರಿಂದ ಸುಲಭದಲ್ಲಿ ಗುರಿಸಾಧಿಸಬಹುದು. ವೈದ್ಯರಲ್ಲಿ ರೋಗಗಳನ್ನು ಮುಚ್ಚಿಡಬಾರದು, ವಕೀಲರಲಿತಪ್ಪುಗಳನ್ನು ಅಡಗಿಸಬಾರದು, ಅಂತೆಯೇ ಕಲಿಸುವ ಅಧ್ಯಾಪಕರಲ್ಲಿಯೂ ಪೋಷಿಸುವ ಪಾಲಕರಲ್ಲಿಯೂ ಮನಸ್ಸಿನ ತುಮುಲವನ್ನು ಹೇಳದೆ ತಮ್ಮಲ್ಲಿಯೇ ಅದುಮಿಕೊಳ್ಳಬಾರದು. ಅದಕ್ಕಾಗಿ `ಸ್ಮಾಟರ್್' ಆಗಿರಬೇಕು. ಸ್ಪಷ್ಟತೆ, ಅಳೆಯಲು ಸಿಗುವಂತೆ, ಏಕಾಗ್ರತೆಯೊಂದಿಗೆ, ನಿದರ್ಿಷ್ಟ ಸಮಯದ ಪರಿಮಿತಿಯಲ್ಲಿ ನಮ್ಮ ಕೆಲಸಕಾರ್ಯಗಳನ್ನು ಮಾಡಿಕೊಳ್ಳಬೇಕು. ಕಾನೂನು ಮತ್ತು ನಿಯಮಗಳು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆಯೇ ಹೊರತು ಶಿಕ್ಷಿಸುವುದಕ್ಕಲ್ಲ. ವಾಹನ ಚಾಲನೆಯ ಸಂದರ್ಭದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಅಳವಡಿಸುವಿಕೆ ನಮ್ಮ ರಕ್ಷಣೆಗಾಗಿಯೇ ಹೊರತು ಪೋಲಿಸರಿಗಾಗಿ ಅಲ್ಲ ಎಂಬ ಉದಾಹರಣೆಯೊಂದಿಗೆ ವಿವರಿಸಿದರು.
ಸವರ್ಾಂಗೀಣ ಅಭಿವೃದ್ಧಿ ಎಂಬ ಧ್ಯೆಯವನ್ನಿಟ್ಟುಕೊಂಡು ಯುವಕರ ತಂಡವು ದೆಹಲಿಯಿಂದ 3 ಬೈಕ್ಗಳಲ್ಲಾಗಿ ಪ್ರಾರಂಭಿಸಿ 50,000 ಕಿಲೋಮೀಟರ್ ವ್ಯಾಪ್ತಿಯನ್ನು ಸಂಚಿಸುವ ಗುರಿಯನ್ನಿಟ್ಟುಕೊಂಡಿರುತ್ತಾರೆ. ಸಾಮಾಜಿಕವಾಗಿ ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ಪಸರಿಸುವುದು ಇವರ ಆದ್ಯತೆಯಾಗಿದೆ.
ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸಂವಾದವನ್ನು ಮುನ್ನಡೆಸಿದರು. ಪೂರ್ವ ವಿದ್ಯಾಥರ್ಿ ಅಜೇಯ ಬಡಗಮೂಲೆ ಸಂಪರ್ಕ ಕೊಂಡಿಯಾಗಿ ಸಹಕರಿಸಿದರು. ಅಧ್ಯಾಪಿಕೆ ರಶ್ಮಿ ಪೆಮರ್ುಖ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳೇ ತಯಾರಿಸಿದ `ಕಸೂತಿ' ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries