HEALTH TIPS

No title

             ನೀಚರ್ಾಲಿನಲ್ಲಿ ಜೈವಿಕ ಕೃಷಿ ತೋಟ ಉದ್ಘಾಟನೆ
       ಬದಿಯಡ್ಕ: ಸಹಕಾರಿ ಸಂಸ್ಥೆಗಳು ಪ್ರಕೃತಿಯ ಸಂರಕ್ಷಣೆಯಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸುತ್ತದೆ. ಈ ನಿಟ್ಟಿನಲ್ಲಿ ನೀಚರ್ಾಲಿನ ಸಹಕಾರೀ ಸಂಘಗಳು ಜೈವಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಸಿಸ್ಟೆಂಟ್ ರಿಜಿಸ್ಟ್ರಾರ್ (ಜನರಲ್) ಕೆ.ಜಯಚಂದ್ರನ್ ಅಭಿಪ್ರಾಯಪಟ್ಟರು.
ಅವರು ಗುರುವಾರ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ನೀಚರ್ಾಲು ಕೆ.ಎ.ಸಿ.ಎಂ.ಸೊಸೈಟಿ ಹಾಗೂ ಪೆರಡಾಲ ಸೇವಾಸಹಕಾರಿ ಬ್ಯಾಂಕ್ನ ನೇತೃತ್ವದಲ್ಲಿ ನೀಚರ್ಾಲು ಕೆ.ಎ.ಸಿ.ಎಂ.ಸೊಸೈಟಿಯ ವಠಾರದಲ್ಲಿ ನಡೆದ ಕಾಸರಗೋಡು ತಾಲೂಕು ಮಟ್ಟದ ಜೈವಕೃಷಿ ತೋಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಭಾಷಣಗೈದು ಮಾತನಾಡಿದರು.
   ಆಧುನಿಕ ಕಾಲದಲ್ಲಿ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುವಂತೆ ಪ್ರೋತ್ಸಾಹವನ್ನು ನೀಡಬೇಕು. ಯುವ ಜನಾಂಗಕ್ಕೆ ಕೃಷಿಯ ಮಹತ್ವವನ್ನು ತಿಳಿಯಪಡಿಸಬೇಕು. ವಿಷರಹಿತ ಆಹಾರ ಉತ್ಪನ್ನಗಳನ್ನು ಪ್ರತಿಯೊಂದು ಮನೆಯಲ್ಲಿಯೂ ತಯಾರಿಸಿದಲ್ಲಿ ಮಾರಕ ರೋಗಗಳಿಂದ ದೂರವಾಗಿ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಈ ಸಂದರ್ಭ ಜೈವ ಕೃಷಿತೋಟದಲ್ಲಿ ಗಿಡವನ್ನು ನೆಟ್ಟು ಉದ್ಘಾಟಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೈವಿಕ ಕೃಷಿಗೆ ಸರಕಾರವು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಎಲ್ಲರೂ ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ದೂರವಿಟ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿಯೂ ಭಾಗಿಯಾಗಬೇಕು. ಪರಿಸರವು ರಾಸಾಯನಿಕ ಮುಕ್ತವಾಗಬೇಕೆನ್ನುವ ಆಶಯವನ್ನಿಟ್ಟು ಗ್ರಾಮಪಂಚಾಯತ್ ವತಿಯಿಂದ ಕೃಷಿಕರಿಗೆ ಜೈವಿಕ ಗೊಬ್ಬರಗಳನ್ನೇ ವಿತರಿಸಲಾಗಿದೆ ಎಂದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬದಿಯಡ್ಕ ಗ್ರಾ.ಪಂ.ಸದಸ್ಯೆ ಪ್ರೇಮ ಕುಮಾರಿ, ಸಹಕಾರಿ ಇಲಾಖೆಯ ಹಿರಿಯ ಇನ್ಸ್ಪೆಕ್ಟರ್ ಕೆ.ನಾಗೇಶ್, ಪೆರಡಾಲ ಸೇವಾ ಸಹಕಾರಿ ಬೇಂಕ್ನ ಕಾರ್ಯದಶರ್ಿ ವಿ.ಅಜಿತ ಕುಮಾರಿ ಮಾತನಾಡಿದರು. ನೀಚರ್ಾಲು ಕೆ.ಎ.ಸಿ.ಎಂ.ಸೊಸೈಟಿಯ ಅಧ್ಯಕ್ಷ  ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಕಾರ್ಯದಶರ್ಿ ಅಪ್ಪಣ್ಣ ಬಿ.ಎಸ್. ವಂದಿಸಿದರು. ನಿದರ್ೇಶಕಿ ಸ್ಮಿತಾ ಮಹೇಶ್ ಸರಳಿ ಪ್ರಾರ್ಥನೆಯನ್ನು ಹಾಡಿದರು. ಕ್ಯಾಂಪ್ಕೋ ನಿದರ್ೇಶಕ ಎಂ.ಕೆ. ಶಂಕರನಾರಾಯಣ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕೆ.ಎ.ಸಿ.ಎಂ.ಸಿಯ ನಿದರ್ೇಶಕರು, ಬ್ಯಾಂಕ್ ಹಾಗೂ ಕ್ಯಾಂಪ್ಕೋ ನೌಕರ ವೃಂದದವರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries