ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಮಾಯಿಪ್ಪಾಡಿಯಲ್ಲಿ ಯಕ್ಷಗಾನ ತಾಳಮದ್ದಳೆ
ಮಧೂರು: ದೀಪಾವಳಿ ಹಬ್ಬದ ಪ್ರಯುಕ್ತ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಮಧೂರು ವೆಂಕಟಕೃಷ್ಣ ಮತ್ತು ಬಳಗದ ಸಹಯೋಗದೊಂದಿಗೆ ಮಾಯಿಪ್ಪಾಡಿ ಅರಮನೆಯ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭೀಷ್ಮಾಜರ್ುನ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪನಾಜೆ ವೆಂಕಟ್ರಮಣ ಭಟ್, ಗೋಪಾಲಕೃಷ್ಣ ನಾವಡ ಮಧೂರು, ವಾಸುದೇವ ಕಲ್ಲೂರಾಯ ಹಾಗೂ ಅರ್ಥಗಾರಿಕೆಯಲ್ಲಿ ಮಧೂರು ವೆಂಕಟಕೃಷ್ಣ, ಸತ್ಯನಾರಾಯಣ ತಂತ್ರಿ ಕೆ., ವಾಸುದೇವ ರಂಗಾ ಭಟ್, ಮುರಳೀ ಮಾಧವ ಮಧೂರು, ಪಿ.ಕೆ.ಧನಂಜಯ ಕೇಕುಣ್ಣಾಯ ಭಾಗವಹಿಸಿದ್ದರು.




