ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಬಾಯಾರು ಹೆದ್ದಾರಿ ಶಾಲೆ ವಿಜ್ಞಾನ ವೇದಿಕೆ ಆರಂಭ
ಉಪ್ಪಳ: ಮುಳಿಗದ್ದೆಯಲ್ಲಿರುವ ಬಾಯಾರು ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ವಿಜ್ಞಾನ ವೇದಿಕೆಯ ಉದ್ಘಾಟನೆಯನ್ನು ಅಡಿಕೆ ಹೆಕ್ಕುವ ಯಂತ್ರದ ಸಂಶೋಧಕ ರಾಮಕೃಷ್ಣ ಪ್ರಕಾಶ ಭಟ್ ಅವರು ವೈಜ್ಞಾನಿಕ ಪ್ರಯೋಗದಿಂದ ಇತ್ತೀಚೆಗೆ ದೀಪಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್ ಅವರು ರಾಮಕೃಷ್ಣ ಪ್ರಕಾಶ ಭಟ್ ಅವರ ಸಾಧನೆಯನ್ನು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ವಿಜ್ಞಾನ ಅಧ್ಯಾಪಕ ಮುರಳೀಧರ ಅವರು ಡಾ.ಸಿ.ವಿ.ರಾಮನ್ ಅವರ ಜನ್ಮದಿನ ಹಾಗೂ ಹಿರಿಯ ವಿಜ್ಞಾನಿಯ ಸಾಧನೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಬಳಿಕ ರಾಮಕೃಷ್ಣ ಪ್ರಕಾಶ ಭಟ್ ಅವರು ತಮ್ಮ ಸಂಶೋಧನೆಯ ಉಪಕರಣದ ಪ್ರಾತ್ಯಕ್ಷಿಕೆ ಮತ್ತು ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿದರು. ಶಾಲಾ ನಾಯಕಿ ಪ್ರತೀಕ್ಷಾ ಹಾಗೂ ಶರಣ್ಯಾ ಅವರು ರಾಮಕೃಷ್ಣ ಭಟ್ ಅವರನ್ನು ಶಾಲೆಯ ಪರವಾಗಿ ಗೌರವಿಸಿದರು.




