ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಂಜೇಶ್ವರ: ಮಂಜೇಶ್ವರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಿದ್ಧತಾ ಸಭೆಯು ಮಂಜೇಶ್ವರ ಮಂಡಲ ಕಚೇರಿಯಲ್ಲಿ ನಡೆಯಿತು. ಮಂಜೇಶ್ವರ ಮಂಡಲ ಅಧ್ಯಕ್ಷ ಕೃಷ್ಣ ಅಡ್ಕತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಡಲದ ಎಲ್ಲ ಬೂತ್ ಸಮಿತಿಗಳ ಅಧ್ಯಕ್ಷರ ಸಭೆ ಈ ಸಂದರ್ಭ ಜರಗಿತು.
ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಕಾಂಗ್ರೆಸ್ ಸಭೆಯಲ್ಲಿ ತೀಮರ್ಾನಿಸಲಾಯಿತು. ನೇತಾರರಾದ ಐಆರ್ಡಿಪಿ ಇಬ್ರಾಹಿಂ, ಯುಡಿಎಫ್ ಮಂಡಲ ಸಂಚಾಲಕ ಕಾಯಿಂಞಿ ಹಾಜಿ, ಹಮೀದ್ ಹೊಸಂಗಡಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಮಂಡಲ ಕಾರ್ಯದಶರ್ಿ ಇದ್ರೀಸ್ ಮಂಜೇಶ್ವರ ಸ್ವಾಗತಿಸಿ, ರಝಾಕ್ ಬಡಾಜೆ ವಂದಿಸಿದರು.




