ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಇಂದಿನಿಂದ ಯೋಗ ತರಬೇತಿ ಆರಂಭ
ಬದಿಯಡ್ಕ : ಹಲವಾರು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳಿಗಾಗಿ ಚಿಣ್ಣರ ಕಲರವದಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ನೇತೃತ್ವದಲ್ಲಿ ಮಕ್ಕಳಿಗಾಗಿ ಉಚಿತ ಯೋಗ ತರಬೇತಿಯು ಇಂದು (ನ.11) ಸಂಜೆ 5 ಗಂಟೆಗೆ ಶ್ರೀಕೃಷ್ಣ ಮಂದಿರ ದ್ವಾರಕಾನಗರ ಕಾಸರಗೋಡು ಇಲ್ಲಿ ಅಕಾಡೆಮಿ ಸದಸ್ಯೆ ತೇಜ ಕುಮಾರಿ ಕರಂದಕ್ಕಾಡ್ ಇವರ ಮಾರ್ಗದರ್ಶನದಲ್ಲಿ ಪ್ರಾರಂಭವಾಗಲಿದೆ. ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಖ್ಯಾತ ಯಕ್ಷಗಾನ ಕಲಾವಿದ ಜಾನಪದ ಲೋಕ ಪ್ರಶಸ್ತಿ ಪಡೆದಿರುವ ಜಯರಾಮ ಪಾಟಾಳಿ ಪಡುಮಲೆ, ಜಲಜಾಕ್ಷಿ ಟೀಚರ್, ಹರೀಶ್ ಕರಂದಕ್ಕಾಡ್, ರೇಶ್ಮಾ ಸುನಿಲ್, ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್, ಶ್ರೀಕಾಂತ್, ಎ.ಆರ್. ಸುಬ್ಬಯ್ಯಕಟ್ಟೆ, ಮಣಿ ಓರೆಂಜ್ ಮೀಡಿಯಾ, ಪ್ರೊ ಎ.ಶ್ರೀನಾಥ್, ವಿದ್ಯಾಗಣೇಶ್ ಅಣಂಗೂರು ಮುಂತಾದವರು ಉಪಸ್ಥಿತರಿರುವರು. ಆಸಕ್ತರು 9446774845 ಸಂಪಕರ್ಿಸಿ ಮಾಹಿತಿ ಪಡೆಯಬಹುದು ಎಂದು ಸಂಘಟಕರು ತಿಳಿಸಿದ್ದಾರೆ.




