ಮಂಜೇಶ್ವರ: ದೀನದಲಿತರ ಆರ್ತರ ಕಣ್ಮಣಿಯಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಅಸ್ಪ್ರಶ್ಯತೆಯನ್ನು ಹೋಗಲಾಡಿಸಿದ ಬಡವರ ಆಶಾಕಿರಣವಾಗಿದ್ದರು.ಮೇಲು ಕೀಳೆಂಬ ಜಾತಿಪದ್ಧತಿಯನ್ನು ನಿವಾರಿಸಲು ಹೋರಾಡಿದ ಗುರುಗಳು ಸರ್ವ ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು ಎಂಬುದಾಗಿ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮಿ ನುಡಿದರು.
ಹೊಸಂಗಡಿಯಲ್ಲಿ ಹಿಲ್ಸೈಡ್ ಆಡಿಟೋರಿಯಂನಲ್ಲಿ ಭಾನುವಾರ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ 10ನೇ ವರ್ಷದ ವಾಷರ್ಿಕೋತ್ಸವದ ದಶಮ ಸಂಭ್ರಮ, ಬ್ರಹ್ಮಶ್ರೀ ನಾರಾಯಣಗುರುಗಳ 164 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸುದೃಢ ಸಂಘಟನೆಯಿಂದ ಸಮಾಜ ಬಲಿಷ್ಠವಾಗಲು ಸಾಧ್ಯವೆಂದು ಅವರು ಈ ಸಮದರ್ಭ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆಯ ಗೌರವಾಧ್ಯಕ್ಷ ಡಿ.ಡಿ.ಕಟ್ಟೆಮಾರ್ ಮಂಗಳೂರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳಿತಕ್ಕೊಳಗಾದ ಹಿಂದುಳಿದ ಸಮಾಜವನ್ನು ಸಾಮಾಜಿಕ ನ್ಯಾಯದ ಮೂಲಕ ಮೇಲೆತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸವರ್ಣ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಅವರ್ಣರಿಗಾಗಿ ವಿವಿದೆಡೆಗಳಲ್ಲಿ 68 ಕ್ಷೇತ್ರಗಳನ್ನು ಮತ್ತು 260 ಶಾಲೆಗಳನ್ನು ಸ್ಥಾಪಿಸಿ ಸುಜ್ಞಾನದ ಕಣ್ಣನ್ನು ತರೆಸಿದ ಮಹಾಚೇತನವಾಗಿದ್ದರು.ಒಂದೇ ಜಾತಿ ಒಂದೇ ಮತ ಒಂದೇ ದೇವರೆಂಬುದಾಗಿ ಸಮಾನತೆಯನ್ನು ಸಾರಿದ ಮಹಾ ಪುರುಷರಾಗಿದ್ದರೆಂದರು.
ಕಾರ್ಯಕ್ರಮದಲ್ಲಿ ನಾರಾಯಣಗುರುಗಳ ಭಾವಚಿತ್ರದ ಮುಂದೆ ದೀಪ ಪ್ರಜ್ವಲನೆ,ಗುರುಪೂಜೆ ಬಳಿಕ ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ವಹಿಸಿದರು. ಸಮಾಜದ ಗಣ್ಯರಾದ,ಚಿತ್ತರಂಜನ್, ತಿಮ್ಮಪ್ಪ ಕಾಂಜ,ರಾಜ ಬೆಳ್ಚಪ್ಪಾಡ, ಜಯಂತ ನಡುಬೈಲು, ಸುರೇಶ್ ಕೆ.ಪಿ,ಕೃಷ್ಣಪ್ಪ ಕಿನ್ಯ,ಲವಾನಂದ ಪೂಜಾರಿ, ಸೂರಜ್,ಪುರುಶೋತ್ತಮ ಚಿತ್ರಾಪುರ ಮಂಗಳೂರು, ಚಂದ್ರಶೇಖರ್ ಮಂಗಳೂರು, ಕೃಷ್ಣಪ್ಪ ಪೂಜಾರಿ ದೇರಂಬಳ,ಜಯಶಂಕರ ಮಂಜೇಶ್ವರ,ಚಂದ್ರಹಾಸ ಸುವರ್ಣ ವಿಟ್ಲ,ಮಾಧವ ಸಾಲ್ಯಾನ್ ಕುಂಜತ್ತೂರು, ಕೃಷ್ಣಪ್ಪ ಪೂಜಾರಿ ತೂಮಿನಾಡು,ಹರೀಶ್ ಉಳ್ಳಾಲ, ಗಣೇಶ್ ಪಾವೂರು,ಶೀನ ಪೂಜಾರಿ,ಚಂದ್ರಹಾಸ ಪೂಜಾರಿ ಮುಡಿಮಾರು,ಬಂಟಪ್ಪ ಮಾಸ್ಟರ್ ವಕರ್ಾಡಿ,ರಾಜೇಶ್ ಉಚ್ಚಿಲ,ಮೋಹನ್ ಬೊಳ್ಳಾರು,ಪೂವಪ್ಪ ಪೂಜಾರಿ ಮಂಗಲ್ಪಾಡಿ,ನಾರಾಯಣ ಪೂಜಾರಿ ಕುಂಜತ್ತೂರು,ರವೀಂದ್ರ ಪೂಜಾರಿ ಕಡಂಬಾರು ,ಗಣೇಶ್ ಪಾವೂರು ಅತಿಥಿಗಳಾಗಿ ಭಾಗವಹಿಸಿದರು.
ಸಮಾರಂಭದಲ್ಲಿ ಸಮಾಜದ ಸಾಧಕ ಗಣ್ಯರಾದ ತಿಮ್ಮಪ್ಪ ಕಾಂಜ, ಚಿತ್ತರಂಜನ್, ಡಿ.ಡಿ.ಕಟ್ಟೆಮಾರ್,ಜಯಂತ್ ನಡುಬೈಲು, ಸುದೀಕ್ಷಾ ಕಿರಣ್ ಸುವರ್ಣ ಮತ್ತು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರನ್ನು ಸಮ್ಮಾನಿಸಲಾಯಿತು.ಅಲ್ಲದೆ ದೇಯಿ ಸ್ಮರಣ ಸಂಚಿಕೆಯ ಮುಖಪುಟವನ್ನು ಅನಾವರಣಗೊಳಿಸಲಾಯಿತು.ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ಅಶ್ವಿತಾ ಬೆಜ್ಜ ರವರಿಗೆ ಗುರುಶ್ರೀ ಬಂಗಾರದ ಪದಕ ಮತ್ತು ವಿಸ್ಮಿತಾ ಎಂ.ರವರಿಗೆ ಬೆಳ್ಳಿ ಪದಕ, ಚೈತ್ರಾ ಮಂಗಲ್ಪಾಡಿ,ವೈಶಾಲಿ ಕುಂಬಳೆ,ಶೋಬಿತ ಕುಂಬಳೆ,ನಿಕಿಲ್,ಹಿತಾಕ್ಷಿ ಮುಡಿಮಾರು,ಭವಿಶ್ ಕುಂಜತ್ತೂರು ಅವರಿಗೆ ವಿದ್ಯಾಥರ್ಿ ವೇತನ ವಿತರಿಸಲಾಯಿತು. ರ್ಯಾಂಕ್ ವಿಜೇತ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾಥರ್ಿ ರೋಹಿತ್ ಕುಮಾರ್ರವರನ್ನು ಗೌರವಿಸಲಾಯಿತು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರವಿ ಮುಡಿಮಾರು ವಂದಿಸಿದರು.ಹೇಮಚಂದ್ರ ನಿರೂಪಿಸಿದರು.
ಸಮಾರಂಭವನ್ನು ದೀಪಬೆಳಗಿಸಿ ಭತ್ತತುಂಬಿದ ಕಳಸಿಗೆಯಲ್ಲಿ ಇರಿಸಿದ ತೆಂಗಿನಹಿಂಗಾರವನ್ನು ಅರಳಿಸಿ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮ ಮತ್ತು ಇಂಚರ ಮೆಲಡೀಸ್ ಕಡಂಬಾರ್ ತಂಡದಿಂದ ರಸಮಂಜರಿ ರಂಜಿಸಿತು. ಬೆಳಗ್ಗೆ ಬಿಲ್ಲವ ಸಮಾಜ ಸೇವಾ ಸಂಘ ಮಂಜೇಶ್ವರ ಹೊಸಬೆಟ್ಟುವಿನಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರದೊಂದಿಗೆ ಸಮವಸ್ತ್ರ ಸ್ವಯಂಸೇವಕ ಸೇವಕಿಯರಿಂದ ಚೆಂಡೆಮೇಳದೊಂದಿಗೆ ಆಕರ್ಷಕ ಶೋಭಾಯಾತ್ರೆ ಸಭಾಭವನಕ್ಕೆ ಆಗಮಿಸಿತು.








