ಬದಿಯಡ್ಕ: ಕೇರಳದಲ್ಲಿ ಹಿಂದೂ ಸಮಾಜವೇ ಸಿಡಿದೆದ್ದಲ್ಲಿ ಪಿಣರಾಯಿಯ ಪೋಲೀಸರು ನಮಗೆ ಲೆಕ್ಕವೇ ಅಲ್ಲ. ಪೋಲೀಸರನ್ನು ಆಯುಧವನ್ನಾಗಿಸಿ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರ ಮೇಲೆ ಧಾಳಿ ಮಾಡಿರುವುದಕ್ಕೆ ತಕ್ಕ ಬೆಲೆಯನ್ನು ತೆರಬೇಕಾದೀತು ಎಂದು ಮಹಿಳಾ ಐಕ್ಯವೇದಿ ರಾಜ್ಯ ಪ್ರಧಾನ ಕಾರ್ಯದಶರ್ಿ ಬಿಂದು ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.
ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರನ್ನು ವಿನಾಕಾರಣ ಬಂಧಿಸಿರುವ ರಾಜ್ಯ ಸರಕಾರದ ಪೋಲೀಸರ ನಿಲುವಿಗೆದುರಾಗಿ ಸೋಮವಾರ ಸಂಜೆ ಬದಿಯಡ್ಕದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪೋಲೀಸ್ ಠಾಣೆಯ ಮುಂಭಾಗದಲ್ಲಿ ನಡೆದ ನಾಮಜಪಯಜ್ಞದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬೂಟು ಹಾಕಿ ಅಕ್ರಮವನ್ನು ನಡೆಸುತ್ತಿರುವ ಪೋಲೀಸರಿಗೆದುರಾಗಿ ಹಿಂದೂ ಕಾರ್ಯಕರ್ತರು ಪ್ರತಿಭಟನೆಗಿಳಿದರೆ ಬೂಟಿಲ್ಲದೆ ನಿಮ್ಮನ್ನು ಹಿಮ್ಮೆಟ್ಟಿಸುವ ಶಕ್ತಿಯನ್ನು ಹೊಂದಿದ್ದಾರೆ. ಸರಿಯಾಗಿ ಬಟ್ಟೆಯುಡದ ಮಹಿಳೆಯರಿಗೆ ಪೋಲೀಸ್ ರಕ್ಷಣೆಯನ್ನು ನೀಡಿದ ಕೇರಳ ಪೋಲೀಸ್, ಇರುಮುಡಿ ಹೊತ್ತು ಶಬರಿಮಲೆ ಏರಿದ ಶಶಿಕಲಾ ಟೀಚರ್ರಂತವರನ್ನು ಬಂಧಿಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರನ್ನು ಕೆಳಗಿಳಿಸಿದರೆ ಮಾತ್ರ ಕೇರಳ ಉನ್ನತಿಗೆ ಸಾಗಲಿದೆ ಎಂದು ಎಡರಂಗ ಸರಕಾರವನ್ನು ದೂರಿದರಲ್ಲದೆ ಇಡೀ ರಾಜ್ಯದಲ್ಲಿ ಹಿಂದೂ ಸಮಾಜವೇ ಒಂದುಗೂಡಲು ಕಾರಣವಾಗಿದೆ. ಎಡರಂಗ ಸರಕಾರವು ಶಬರಿಮಲೆ ವಿಚಾರವನ್ನು ಜಟಿಲಗೊಳಿಸುತ್ತ ಸಾಗಿದಷ್ಟು ಹಿಂದೂ ಸಂಘಟನೆ ಬಲಿಷ್ಠವಾಗಿ ಬೆಳೆಯುತ್ತಿದೆ. ಹಿಂದೂ ಸಂಸ್ಕಾರವನ್ನು ಉಳಿಸಲು ಜೀವತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ ಎಂದರು.
ಬದಿಯಡ್ಕ ಗಣೇಶಮಂದಿರದಿಂದ ಆರಂಭವಾದ ನಾಮಜಪ ಯಾತ್ರೆಯು ಬದಿಯಡ್ಕ ಪೇಟೆಯಲ್ಲಾಗಿ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಸಮಾಪ್ತಿಯಾಯಿತು. ಹಿಂದೂ ಸಂಘಟನೆಗಳ ಮುಖಂಡರಾದ ನ್ಯಾಯವಾದಿ ಕೆ.ಶ್ರೀಕಾಂತ್, ಎಂ. ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ, ಸುಮಿತ್ ರಾಜ್ ಪೆರ್ಲ, ರೂಪವಾಣಿ ಆರ್. ಭಟ್, ವಿಶ್ವನಾಥ ಪ್ರಭು, ಬಾಲಕೃಷ್ಣ ಶೆಟ್ಟಿ ಕಡಾರು, ಪುಷ್ಪಾ ಅಮೆಕ್ಕಳ, ರಜನಿಸಂದೀಪ್, ಡಿ.ಶಂಕರ, ಎಂ.ನಾರಾಯಣ ಭಟ್, ಅವಿನಾಶ್ ರೈ, ನ್ಯಾಯವಾದಿ ಗಣೇಶ್, ಕೃಷ್ಣ ಮಣಿಯಾಣಿ ಮೊಳೆಯಾರು, ರಾಮಕೃಷ್ಣ ಹೆಬ್ಬಾರ್, ಶಶಿಧರ ತೆಕ್ಕೆಮೂಲೆ, ಜಯಂತಿ, ಹರಿಪ್ರಸಾದ್ ರೈ ಪುತ್ರಕ್ಕಳ, ಗುರುಸ್ವಾಮಿಗಳು ಹಾಗೂ ನೂರಾರು ಕಾರ್ಯಕರ್ತರು ನಾಮಜಪದ ಮೂಲಕ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




