ಕಾಸರಗೋಡು: ಜ್ಞಾನಪ್ರದವಾದ ಕಾತರ್ಿಕ ಮಾಸದಲ್ಲಿ ಪರಮೇಶ್ವರ ಸುತನಾದ ಶ್ರೀ ಸುಬ್ರಹ್ಮಣ್ಯನ ಆರಾಧನೆಯಿಂದ ಅರಿತೋ ಅರಿಯದೆಯೋ ಮಾಡಿದ ಪಾಪಗಳೆಲ್ಲವೂ ನಾಶವಾಗಿ ಕೋಟಿ ಪುಣ್ಯಸಂಪಾದನೆ ಆಗುತ್ತದೆ. ಆ ನಿಟ್ಟಿನಲ್ಲಿ ನ. 23 ರಂದು ಕೃತ್ತಿಕಾ ನಕ್ಷತ್ರದ ಪರ್ವ ಕಾಲದಲ್ಲಿ ಶ್ರೀ ಕ್ಷೇತ್ರ ಶೇಷವನದಲ್ಲಿ ಮಹಾದೀಪೋತ್ಸವ ನಡೆಯಲಿದೆ.
ಅಂದು ಸೂಯರ್ೋದಯದಿಂದ ಸೂಯರ್ಾಸ್ತಮಾನ ದವರೆಗೆ ವಿವಿಧ ಭಜನಾ ಸಂಘಗಳಿಂದ ಸಂಕೀರ್ತನಾರ್ಚನೆ ನಡೆಯಲಿದೆ. ಸಂಜೆ 6.30 ರಿಂದ ಮಧೂರು ಸಿದ್ಧಿವಿನಾಯಕ ಭಜನಾ ಸಂಘ ಇವರಿಂದ ಭಜನೆ, ಬಳಿಕ 8ಗಂಟೆಗೆ ವಿಶೇಷ ಅಲಂಕಾರ ಸಹಿತ ದೀಪೋತ್ಸವದೊಂದಿಗೆ ಕಾತರ್ಿಕ ಪೂಜೆ ನಡೆಯಲಿದೆ. ನಂತರ ವಿಶೇಷ ಅನ್ನದಾನವೂ ಜರಗಲಿದೆ. ಈ ಶಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಉತ್ಸವ ಸಮಿತಿ ಹಾಗು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಕೇಳಿಕೊಂಡಿದೆ.




