ಉಪ್ಪಳ: ಇತಿಹಾಸ ಪ್ರಸಿದ್ಧ ಇಚ್ಲಂಗೋಡು ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ನಾರ್ಯ ವಿಭಾಗದ ತರವಾಡು ನೇಮೋತ್ಸವವು ಡಿಸೆಂಬರ್ 13 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರವು ತರವಾಡು ಸ್ಥಳವಾದ ಕುಬಣೂರಿನಲ್ಲಿ ಇತ್ತೀಚೆಗೆ ನಡೆಯಿತು.
ಡಿಸೆಂಬರ್ 13 ರಂದು ಬೆಳಗ್ಗೆ 6.30 ಕ್ಕೆ ಒಡ್ಡಂಬೆಟ್ಟು ತರವಾಡು ಸ್ಥಳದಲ್ಲಿ ಸ್ಥಳ ಶುದ್ದಿ, 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, 7.30 ಕ್ಕೆ ತರವಾಡು ಮನೆಯಿಂದ ನೂತನ ತರವಾಡು ಸ್ಥಳಕ್ಕೆ ಭಂಡಾರ ಆಗಮನ , 9 ಕ್ಕೆ ಧರ್ಮ ದೈವ ಅಣ್ಣಪ್ಪ ಪಂಜುಲರ್ಿ ದೈವದ ಕೋಲ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ, 1 ಗಂಟೆಗೆ ಭಂಡಾರ ಇಳಿಯುವುದು, 1.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.30 ಕ್ಕೆ ಸ್ಥಳ ಶುದ್ದಿ, ಸಂಜೆ 7 ಗಂಟೆಗೆ ದೈವದ ಭಂಡಾರ ಏರುವುದು. ಸಂಜೆ 7.30 ಕ್ಕೆ ಕುಪ್ಪೆ ಪಂಜುಲರ್ಿ ಮತ್ತು ವಣರ್ಾರ ಪಂಜುಲರ್ಿ ದೈವಗಳ ಸೇವೆ ನಡೆಯಲಿದೆ.ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ, 10 ಗಂಟೆಗೆ ಮೂಕಾಂಬಿಕಾ ಗುಳಿಗ ದೈವದ ಮತ್ತು ಕಲ್ಲುಟರ್ಿ ದೈವಗಳ ಅಗ್ನಿ ಸೇವೆಯ ಕೋಲ ನಡೆಯಲಿದೆ.
14 ರಂದು ಬೆಳಿಗ್ಗೆ 6.30 ಕ್ಕೆ ದೈವಗಳ ಪ್ರಸಾದ ವಿತರಣೆ, 8.30 ಕ್ಕೆ ಭಂಡಾರ ಇಳಿಯುವುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಗವದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.


