HEALTH TIPS

ಪುದುಕೋಳಿಯಲ್ಲಿ ಕಾಡ್ಗಿಚ್ಚು-ಅಪಾರ ಹಾನಿ

             
    ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿ ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ವ್ಯಾಪಕ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ್ದು ವ್ಯಾಪಕ ನಾಶ ನಷ್ಟಗಳು ಉಂಟಾದವು.
   ತಲ್ಪನಾಜೆ ಪರಿಸರದಲ್ಲಿ ಮಧ್ಯಾಹ್ನ 12.05ರ ವೇಳೆ ಮೊದಲು ಕಾಣಿಸಿಕೊಂಡ ಬೆಂಕಿ ಬಳಿಕ ಗಾಳಿಯ ತೀವ್ರತೆಗೆ ಕ್ಷಣಾರ್ಧದಲ್ಲಿ ವ್ಯಾಪಿಸಿ ಪುದುಕೋಳಿ, ಎರಟ್ಟಿಕಾಯಿರ ಪ್ರದೇಶಗಳ ಸುಮಾರು 70 ಎಕ್ರೆಗಳಷ್ಟು ಮುಳಿಹುಲ್ಲಿನ ಗುಡ್ಡವನ್ನು ಆಹುತಿಗೈಯ್ದಿತು. ನೂರಾರು ಮರಗಳು ಬೆಂಕಿಗೆ ಸಂಪೂರ್ಣ ಉರಿದು ನಾಶವಾದವು. ನವಿಲುಗಳೂ ಸಹಿತ ನೂರಾರು ಹಕ್ಕಿ ಪ್ರಬೇಧಗಳು, ಸರೀಸೃಪಗಳು ಬೆಂಕಿಯ ಜ್ವಾಲೆಗಳಿಂದ ತತ್ತರಿಸಿದವು.
 ಸ್ಥಳೀಯ ನಿವಾಸಿಗಳು, ನೀಚರ್ಾಲು ಪರಿಸರ ನಿವಾಸಿಗಳು ಧಾವಿಸಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಪ್ರಯತ್ನಿಸಿದರು. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕದಳದ ಅಧಿಕಾರಿಗಳು ಹರಸಾಹಸಪಟ್ಟು ಮಧ್ಯಾಹ್ನ 1.50ರ ವೇಳೆಗೆ ನಿಯಂತ್ರಣಕ್ಕೆ ತಂದರು. ಪರಿಸರದಲ್ಲಿ ಜನವಸತಿ ಇಲ್ಲದ ಕೇಂದ್ರವಾಗಿದ್ದರಿಂದ ಜೀವಹಾನಿಗಳು ಉಂಟಾಗದೆ ಪಾರಾಗಿದೆ.
     ಇದೇ ಮೊದಲಲ್ಲ:
   ತಲ್ಪನಾಜೆ, ಪುದುಕೋಳಿ ಪರಿಸರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಡಿಸೆಂಬರ್-ಜನವರಿ ತಿಂಗಳುಗಳ್ಲಿ ಉಂಟಾಗುತ್ತಿದ್ದು, ಅಪಾರ ಹಾನಿಗಳಾಗುತ್ತಿವೆ. ಕಿಡಿಗೇಡಿಗಳ ಕುಕೃತ್ಯದಿಂದ ಇದು ಉಂಟಾಗುತ್ತಿದೆಯೆಂದು ಸಾರ್ವಜನಿಕರು ತಿಳಿಸಿದ್ದಾರೆ.
   ಶುಕ್ರವಾರ ನಡೆಸಿದ ನಿಯಂತ್ರಣ ಕಾಯರ್ಾಚರಣೆಯಲ್ಲಿ ಕಾಸರಗೋಡು ಅಗ್ನಿಶಾಮಕ ದಳದ ಅಧಿಕಾರಿಗಳಾದ ಮನೋಹರ್, ಹರಿಕೃಷ್ಣ, ನಾರಾಯಣ್ ಮೊದಲಾದವರು ಭಾಗವಹಿಸಿದ್ದರು. ಜೊತೆಗೆ ಭಾರತದ ನಾವಿಕ ಸೇನಾ ಉದ್ಯೋಗಿ ನಾರಾಯಣ ಪಾಡಿ ಅವರು ಕಾಯರ್ಾಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಗಮನ ಸೆಳೆದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries