ಬದಿಯಡ್ಕ: ಗೋಸಾಡ ಶ್ರೀ ಮಹಿಷಮದರ್ಿನೀ ದೇವಸ್ಥಾನದ ವಾಷರ್ಿಕ ಶ್ರೀಭೂತಬಲಿ ಉತ್ಸವವು ಶುಕ್ರವಾರ ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನವಾಯಿತು. ಇಂದು (ನ.24) ಪೂವರ್ಾಹ್ನ 7.30ಕ್ಕೆ ಶ್ರೀ ರಕ್ತೇಶ್ವರಿ ದೈವದ ಕೋಲ, 10 ಗಂಟೆಗೆ ನಾಗದೇವರಿಗೆ ತಂಬಿಲ, ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾವಿಷ್ಣುಮೂತರ್ಿ ದೈವದ ಕೋಲ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ರಾಜಾಂಗಣ ಪ್ರಸಾದದ ನಂತರ ನವಕಾಭಿಷೇಕ, ಮಂತ್ರಾಕ್ಷತೆ, ಶ್ರೀ ಧೂಮಾವತಿ ದೈವದ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ಮಹಾವಿಷ್ಣುಮೂತರ್ಿ ದೈವದ ಭಂಡಾರದ ಆಗಮನವಾಯಿತು. ನಂತರ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಗೋಸಾಡ ಶ್ರೀ ಮಹಿಷಮದರ್ಿನೀ ಭಜನಾ ಸಂಘದ ವತಿಯಿಂದ ಭಜನೆ, ರಾತ್ರಿ ಶಾಸ್ತ್ರೀಯ ಸಂಗೀತಗಾರ ವಸಂತಕುಮಾರ ಗೋಸಾಡ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆಯಿತು. ರಾತ್ರಿ ನಡೆದ ಶ್ರೀಭೂತಬಲಿ ಉತ್ಸವದ ಸಂದರ್ಭದಲ್ಲಿಯೂ ನೂರಾರು ಜನರು ಪಾಲ್ಗೊಂಡಿದ್ದರು.
ಅನ್ನದಾನದ ಸೇವಾಕರ್ತರಾಗಿ ದಿ.ವಿಶ್ವನಾಥ ರೈ ಮತ್ತು ವಸುದಾ ವಿ ರೈ ನಾರಂಪಾಡಿ ಇವರ ಸ್ಮರಣಾರ್ಥ ಶಿವದಾಸ್ ರೈ ಮತ್ತು ಸಹೋದರರು, ಮಠದಮೂಲೆ ಗೋವಿಂದ ಭಟ್ಟರ ಸ್ಮರಣಾರ್ಥ ಮಠದಮೂಲೆ ನ್ಯಾಯವಾದಿ ಪುರುಷೋತ್ತಮ ಭಟ್ ಮಂಗಳೂರು, ದಿ. ಪಾವೂರು ಸುಬ್ರಾಯ ಅಮ್ಮಣ್ಣಾಯರ ಸ್ಮರಣಾರ್ಥ ಸುಶೀಲಮ್ಮ ಮತ್ತು ಮಕ್ಕಳು ಸಹಕರಿಸಿದ್ದರು.

