ಕಾಸರಗೋಡು: ತಾಳಿಪಡ್ಪುನಲ್ಲಿರುವ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ನಲ್ಲಿ ನ.22 ಮತ್ತು 23 ರಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 93 ನೇ ಜನ್ಮ ದಿನಾಚರಣೆಯ ಸಂಭ್ರಮಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನ.22 ರಂದು ಬೆಳಿಗ್ಗೆ 5 ಕ್ಕೆ ಓಂಕಾರ ಸುಪ್ರಭಾತ, 7 ಕ್ಕೆ ಗಣಪತಿ ಹವನ, ಸಂಜೆ 4 ಕ್ಕೆ ಸಾಯಿ ಸಹಸ್ರ ನಾಮಾರ್ಚನೆ, 5.30 ರಿಂದ ಭಜನೆ, ಮಂಗಳಾರತಿ, 23 ರಂದು ಬೆಳಿಗ್ಗೆ 5 ಕ್ಕೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, 7.30 ಕ್ಕೆ ಗಣಪತಿ ಹವನ, 9 ಕ್ಕೆ ಲಲಿತಾ ಸಹಸ್ರ ನಾಮಾರ್ಚನೆ, 10.30 ಕ್ಕೆ ಸತ್ಯನಾರಾಯಣ ಪೂಜೆ, 1.30 ಕ್ಕೆ ಮಂಗಳಾರತಿ, ಪ್ರಸಾದ ಭೋಜನ, ಸಂಜೆ 6.30 ಕ್ಕೆ ವೇಣಿ ಸುಬ್ರಹ್ಮಣ್ಯ ಭಟ್ ಮತ್ತು ಬಳಗ ಕಾರ್ಕಳ ಇವರಿಂದ ದಾಸವಾಣಿ, ರಾತ್ರಿ 8.30 ಕ್ಕೆ ಹುಟ್ಟು ಹಬ್ಬದ ದೀಪ ಬೆಳಗಿಸುವುದು, ಸಿಡಿ ಮದ್ದು, ಉಯ್ಯಾಲೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.





