ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಇದರ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘವು ಆಯೋಜಿಸುವ ಕಾವ್ಯಾಂಜಲಿ ಕಾರ್ಯಕ್ರಮವು ನ.24 ರಂದು ಅಪರಾಹ್ನ 2 ಗಂಟೆಗೆ ಮಂಜೇಶ್ವರ ಗಿಳಿವಿಂಡು ಆವರಣದಲ್ಲಿ ನಡೆಯಲಿದೆ.
ಮಂಜೇಶ್ವರ ಗೋವಿಂದ ಪೈ ಅವರಿಗೆ ಕಾವ್ಯಾಂಜಲಿ ಎನ್ನುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಕವಿಗಳ ಸಮ್ಮಿಲನ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು `ಕಾವ್ಯ ರಸಾಸ್ವಾದನೆ' ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುವರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಪದಾಧಿಕಾರಿಗಳಾದ ಬಿ.ವಿ.ಕಕ್ಕಿಲ್ಲಾಯ, ಕೆ.ಆರ್.ಜಯಾನಂದ, ಸುಭಾಸ್ಚಂದ್ರ ಕಣ್ವತೀರ್ಥ, ಅನಂತ ಮಲ್ಯ ಉಪಸ್ಥಿತರಿರುವರು.
ಕವಿಗೋಷ್ಠಿಯಲ್ಲಿ ಶ್ರೀಕೃಷ್ಣಯ್ಯ ಅನಂತಪುರ, ವಿ.ಬಿ.ಕುಳಮರ್ವ, ವಿಜಯಾ ಸುಬ್ರಹ್ಮಣ್ಯ, ಹರೀಶ್ ಪೆರ್ಲ, ಹಷರ್ಾದ್ ವಕರ್ಾಡಿ, ಪ್ರಭಾವತಿ ಕೆದಿಲಾಯ, ಗಣೇಶ್ ಪ್ರಸಾದ್ ಮಂಜೇಶ್ವರ, ಸನ್ನಿಧಿ ಟಿ.ರೈ, ರಾಜಶ್ರೀ ರೈ, ರಾಮಚಂದ್ರ ಭಟ್ ಗುಣಾಜೆ, ಸುಂದರ ಬಾರಡ್ಕ, ತೇಜಸ್ವಿನಿ ಪೈವಳಿಕೆ, ಜಯಂತಿ ರಾವ್, ಮೌನೇಶ್ ಆಚಾರ್, ಶಂಕರ ನಾರಾಯಣ ಭಟ್ ಕಕ್ಕೆಪ್ಪಾಡಿ, ಗಣಪತಿ ಭಟ್ ಎಂ, ಪ್ರಸನ್ನ ಚೆಕ್ಕೆಮನೆ, ಅನ್ನಪೂರ್ಣ ಬೆಜಜ್ಪೆ, ಮಣಿರಾಜ್ ವಾಂತಿಚಾಲ್, ಜ್ಯೋತ್ಸ್ನ ಎಂ.ಭಟ್ ಕಡಂದೇಲು, ಶ್ರದ್ಧಾ ನಾಯರ್ಪಳ್ಳ, ಸುಭಾಷ್ ಪೆರ್ಲ, ಶ್ವೇತಾ ಕಜೆ, ದಯಾನಂದ ರೈ ಕಳ್ವಾಜೆ, ಪದ್ಮಾವತಿ ಏದಾರು, ಶಮರ್ಿಳ ಬಜಕೂಡ್ಲು, ಡಾ.ಎಸ್.ಎನ್.ಭಟ್, ಅಪ್ಪಯ್ಯ ಯಾದವ, ಬದ್ರುದ್ದೀನ್ ಕುಳೂರು, ಆಶಾ ದಿಲೀಪ್ ಸುಳ್ಯಮೆ, ದೀಕ್ಷಿತಾ ಕೋಳ್ಯೂರು, ಜಯಾ ಮಣಿಯಂಪಾರೆ, ಪಾರ್ವತಿ ದಿನೇಶ್, ಕೆ.ಎ.ಎಂ.ಅನ್ಸಾರಿ, ದಿವ್ಯಗಂಗಾ ಪಿ, ನಯನಾ ವಿ.ಭಟ್ ಕುರುಡಪದವು, ನರಸಿಂಹ ಭಟ್ ಏತಡ್ಕ, ಸಂಧ್ಯಾಗೀತ ಬಾಯಾರ್, ಯೋಗೀಶ ರಾವ್ ಚಿಗುರುಪಾದೆ, ಗಣೇಶ ಪೈ ಬದಿಯಡ್ಕ, ರತ್ನಾಕರ ಮಲ್ಲಮೂಲೆ, ಕೃಷ್ಣವೇಣಿ ಕಿದೂರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕವಿತಾ ಕೂಡ್ಲು, ವಿಜಯಲಕ್ಷ್ಮಿ ಶ್ಯಾನುಭೋಗ್ ಮೊದಲಾದವರು ಭಾಗವಹಿಸುವರು.




