HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಭಗವಂತನ ಸ್ಮರಿಸಿ ಭಯದಿಂದ ಮುಕ್ತರಾಗಿ
             ಜಿಲ್ಲಾ ಆಧ್ಯಾತ್ಮಿಕ ಸಾಧನಾ ಸಮಾವೇಶ ಎಂ.ಪದ್ಮನಾಭ ಪೈ
    ಉಪ್ಪಳ: ಭಗವಂತನ ನಾಮಸ್ಮರಣೆ ಮಾಡಿದಲ್ಲಿ ಯಾವ ಭಯವೂ  ಇರುವುದಿಲ್ಲ. ಮನುಷ್ಯರಾದವರು ಜೀವನದಲ್ಲಿ  ಕಠೋರವಾಗಿರದೆ ಬದುಕಿನ ಹಾದಿಯಲ್ಲಿ ಬರುವ ಯಾವುದೇ ಪರಿಸ್ಥಿತಿಗೂ ನಮ್ಮನ್ನು ಹೊಂದಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿರಬೇಕು. ಭಗವಂತ ನೀಡಿದ ಈ ಬದುಕನ್ನು ದೀನದಲಿತರ ಸೇವೆಯಲ್ಲಿ  ತೊಡಗಿಸಕೊಳ್ಳಬೇಕೆಂದು  ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಎಂ.ಪದ್ಮನಾಭ ಪೈ ಅಭಿಪ್ರಾಯ ವ್ಯಕ್ತಪಡಿಸಿದರು.
    ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕನರ್ಾಟಕ ಕಾಸರಗೋಡು ಜಿಲ್ಲೆ ಇದರ ಜಿಲ್ಲಾ ಆಧ್ಯಾತ್ಮಿಕ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಭಗವಂತನ ನಾಮ ಸ್ಮರಣೆಯಿಂದ  ಬದುಕಿನಲ್ಲಿ ನೆಮ್ಮದಿ ಸಾಧ್ಯ. ಆತನ ಸ್ಮರಿಸಿದಲ್ಲಿ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದು. ಆಧ್ಯಾತ್ಮಿಕತೆ  ಜೀವನವನ್ನು ಸುಲಭವಾಗಿಸುತ್ತದೆ ಎಂದು ಅವರು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕನರ್ಾಟಕ ರಾಜ್ಯ ಮಹಿಳಾ ಸಂಯೋಜಕಿ ಪ್ರಿಯಾ.ಪಿ.ಪೈ ಅವರು ಮಾತನಾಡಿ,
ನಮ್ಮ ಮಾತು, ಆಲೋಚನೆ ಹಾಗೂ ಕಾರ್ಯದಲ್ಲಿ ಸಾಮ್ಯತೆ ಇರಬೇಕು. ಭಗವಂತನಲ್ಲಿ ನಂಬಿಕೆಯನ್ನಿಟ್ಟು ಬಡವರ ಸೇವೆ ಮಾಡುವುದೇ ನಿಜವಾದ ಆಧ್ಯಾತ್ಮಿಕ ಸಾಧನೆ ಎಂದು ಹೇಳಿದರು.
   ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷ ಶಿವರಾಮ  ಕಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸೆ ಇಲ್ಲದೆಯೇ ಇರುವುದು ಆತ್ಮ ಸಾಕ್ಷಾತ್ಕಾರ. ಆಸೆಯನ್ನು ನಿಗ್ರಹಿಸಿ,ನಮ್ಮನ್ನು ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಾವಿರ ಜನ್ಮದ ಪುಣ್ಯದಿಂದ ಲಭಿಸಿದ ಮಾನವ ಜೀವನವನ್ನು ವ್ಯರ್ಥ ಮಾಡದೆ ನಾಲ್ಕು ಜನರಿಗೆ ಉಪಯೋಗವಾಗುವಂತೆ  ಬದುಕಬೇಕು ಎಂದು ತಿಳಿಸಿದರು.
   ವೇದಿಕೆಯಲ್ಲಿ ಪ್ರಶಾಂತಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ  ಪೆಲತ್ತಡ್ಕ ರಾಮಕೃಷ್ಣ ಭಟ್, ಟ್ರಸ್ಟಿನ ಸದಸ್ಯ ಪಯ್ಯರಕೋಡಿ ಸದಾಶಿವ ಭಟ್, ಕಾಸರಗೋಡು ಜಿಲ್ಲೆಯ ಶಿರಿಯ, ಕಾಟುಕುಕ್ಕೆ, ಉಪ್ಪಳ, ಕಾಸರಗೋಡು,ಮಧೂರು ಸಮಿತಿಗಳ  ಸಂಚಾಲಕರು  ಉಪಸ್ಥಿತರಿದ್ದರು. ಶಾಲಾ ಪ್ರಬಂಧಕ  ಹೆಚ್.ಮಹಾಲಿಂಗ ಭಟ್ ಸ್ವಾಗತಿಸಿ, ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ  ಸಿ.ರಾಮಚಂದ್ರ ಉಪ್ಪಳ ಕಾರ್ಯಕ್ರಮವನ್ನು ನಿರೂಪಿಸಿದರು.
   ಬಳಿಕ ಸತ್ಯಸಾಯಿ ಸೇವಾ ಸಂಸ್ಥೆ ಕನರ್ಾಟಕ ಇದರ ಸಹ ಸಂಯೋಜಕ ಜಗನ್ನಾಥ ನಾಡಿಗೇರ್ ಗೀತಾ ವಾಹಿನಿ ಎಂಬ ವಿಷಯದಲ್ಲಿ ವಿಚಾರ ಮಂಡಣೆ ಮಾಡಿ, ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಶ್ರೀ ಸತ್ಯಸಾಯಿ ಅವರು ತಮ್ಮ ಗೀತಾ ವಾಹಿನಿಯ 27 ಅಧ್ಯಾಯಗಳಲ್ಲಿ  ಜೀವನದ ಸಮಸ್ಯೆ ಹಾಗೂ ಕಷ್ಟಗಳಿಮದ ಹೇಗೆ ಪಾರಾಗಬಹುದು ಎಂಬುವುದನ್ನು ಸಂಕ್ಷಿಪ್ಯವಾಗಿ ತಿಳಿಸಿಕೊಟ್ಟಿದ್ದಾರೆ. ಭಗವಧ್ಗೀತೆಯಷ್ಟೇ ಪಾವಿತ್ರವಾಗಿರುವ ಗೀತಾವಾಹಿನಿ ಅಭ್ಯಾಸ ಪುಸ್ತಕವಿದ್ದಂತೆ. ಉತ್ತಮ ಅಭ್ಯಾಸ ಮನುಷ್ಯ ನನ್ನು ಪರಿಪೂರ್ಣನನ್ನಾಗಿಸುತ್ತದೆ ಎಂಬ ಮಾತಿನಂತೆ ಜೀವನವನ್ನು ಅರ್ಥಪೂರ್ಣವಾಗಿಸುವ ಪಾಠ ಗೀತಾವಾಹಿನಿ ಹೊಂದಿದೆ ಎಂದು ತಿಳಿಸಿದರು.
    ಬಳಿಕ ಶಿಕ್ಷಣ ಮತ್ತು ಬದುಕು ವಿಷಯದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕನರ್ಾಟಕ  ರಾಜ್ಯ ಸೇವಾ ಸಂಯೋಜಕ  ಪ್ರಭಾಕರ್ ಬೀರಯ್ಯ ,  ಮನುಕುಲಕ್ಕೆ ಸ್ವಾಮಿಯ ಕೊಡುಗೆ ಎಂಬ ವಿಷಯದಲ್ಲಿ ಉಪ್ಪಿನಂಗಡಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕಿ ಕಾವ್ಯ ಶೆಟ್ಟಿ ,  ಸತ್ಯಂ ಶಿವಂ ಸುಂದರಂ ವಿಷಯದಲ್ಲಿ ಜಗನ್ನಾಥ ನಾಡಿಗೇರ್ ಉಪನ್ಯಾಸ ನೀಡಿದರು. ಸಮಾವೇಶದ ಪ್ರಯುಕ್ತ ಭಜನಾ ಸಂಕೀರ್ತನೆ, ಭಕ್ತಿಗೀತೆ ಹಾಗೂ ನಾರಾಯಣ ಸೇವೆ ಜರಗಿತು.

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries