HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಎನ್.ಡಿ.ಎ. ಶಬರಿಮಲೆ ಸಂರಕ್ಷಣಾ ರಥ ಯಾತ್ರೆಗೆ ಚಾಲನೆ ಶಬರಿಮಲೆಯನ್ನು ನಾಶಗೊಳಿಸಲು ಪಿಣರಾಯಿ ಸರಕಾರದ ಹುನ್ನಾರ ಫಲನೀಡದು: ಬಿ.ಎಸ್.ಯಡಿಯೂರಪ್ಪ ಕಾಸರಗೋಡು: ಸುಪ್ರೀಂ ಕೋಟರ್್ ತೀಪರ್ಿನ ನಂತರದ ಶಬರಿಮಲೆ ಬೆಳವಣಿಗೆಯನ್ನು ನಿಭಾಯಿಸುವಲ್ಲಿ ಪಿಣರಾಯಿ ನೇತೃತ್ವದ ಎಡರಂಗ ಸರಕಾರ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಅದರ ಗೌಪ್ಯ ಕಾರ್ಯಸೂಚಿಗಳು ಫಲನೀಡದು ಎಂದು ಬಿಜೆಪಿ ಕನರ್ಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆರೋಪಿಸಿದರು. ಮಧೂರಿನಲ್ಲಿ ಗುರುವಾರ ಬೆಳಿಗ್ಗೆ ಬಿಜೆಪಿ ನೇತೃತ್ವದ ಎನ್.ಡಿ.ಎ.ಯ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಯನ್ನು ಧಮರ್್ ದಂಡ್ ನ್ನು ಯಾತ್ರೆಯ ಸಾರಥಿಗಳಾದ ಬಿಜೆಪಿ ರಾಜ್ಯ ಅಧ್ಯಕ್ಷ, ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ಮತ್ತು ಬಿಡಿಜೆಎಸ್ ಮತ್ತು ಎನ್ಡಿಎ ಸಂಚಾಲಕರಾದ ತುಷಾರ್ ವೆಲ್ಲಾಪಳ್ಳಿ ಅವರಿಗೆ ಬೃಹತ್ ಜನಸ್ತೋಮದ ನಡುವೆ ಹಸ್ತಾಂತರಿಸಿ ಮಾತನಾಡಿದರು. ಶಂಕರಾಚಾರ್ಯ, ನಾರಾಯಣ ಗುರುಗಳು ಜನ್ಮ ಪಡೆದ ಕರ್ಮ ಭೂಮಿ, ಪುಣ್ಯ ಭೂಮಿ, ಧರ್ಮ ಭೂಮಿಯಾದ ಕೇರಳದಲ್ಲಿ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಪಿತೂರಿಯ ವಿರುದ್ಧ ಆಯೋಜಿಸಿದ ರಥ ಯಾತ್ರೆಯ ಮೂಲಕ ಧರ್ಮ ಯುದ್ಧ ಸಾರಿದೆ ಎಂದ ಅವರು ಯಾವುದೇ ಬೆಲೆ ತೆತ್ತಾದರೂ ಧರ್ಮದ ರಕ್ಷಣೆ ಮಾಡುತ್ತೇವೆ. ಎಡರಂಗ ಸರಕಾರ ಧಾಮರ್ಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಹಿಂದೂಗಳ ನಂಬಿಕೆ, ವಿಶ್ವಾಸವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು ಕೇರಳ ಸರಕಾರ ಸುಪ್ರೀಂ ಕೋಟರ್್ನಲ್ಲಿ ಶಬರಿಮಲೆಗೆ ಸಂಬಂಧಿಸಿದ ಆಚಾರಗಳ ಬಗ್ಗೆ ಸ್ಪಷ್ಟವಾದ ನಿಲುವು ಮತ್ತು ವಾದವನ್ನು ಮಂಡಿಸಿಲ್ಲ. ಇಂದಿನ ಪರಿಸ್ಥಿತಿಗೆ ಸಿಪಿಎಂ ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಅವರು ಶಬರಿಮಲೆಗೆ ಸಂಬಂಧಿಸಿ ಕೇರಳ ಸರಕಾರ ಎಡಬಿಡಂಗಿ ನಿಲುವು ತಳೆದಿದೆ ಎಂದು ಖೇದ ವ್ಯಕ್ತಪಡಿಸಿದರು. ಹಿರಿಯ ಬಿಜೆಪಿ ಶಾಸಕ ಓ.ರಾಜಗೋಪಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬಿಜೆಪಿ ಮುಖಂಡ ಪಿ.ಕೆ.ಕೃಷ್ಣದಾಸ್, ವಿಧಾನಪರಿಷತ್ ನೇತಾರ ಕೋಟ ಶ್ರೀನಿವಾಸ ಪೂಜಾರಿ, ರಥ ಯಾತ್ರೆಯ ಸಾರಥಿಗಳಾದ ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ, ತುಷಾರ್ ವೆಲ್ಲಾಪಳ್ಳಿ ಮೊದಲಾದವರು ಮಾತನಾಡಿದರು. ಶಬರಿಮಲೆ ದೇಗುಲದ ಪರಂಪರಾಗತ ಆಚಾರ, ಅನುಷ್ಠಾನಗಳನ್ನು ಸಂರಕ್ಷಿಸಬೇಕು, ಶಬರಿಮಲೆಯಲ್ಲಿ ನಾಮಜಪ ನಡೆಸಿದ ಭಕ್ತರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಕೇಸು ದಾಖಲಿಸಿ ಬಂಧಿಸುವ ಕೇರಳ ಸರಕಾರದ ನಿಲುವನ್ನು ಪ್ರತಿಭಟಿಸಿ ಎನ್.ಡಿ.ಎ. ನೇತೃತ್ವದಲ್ಲಿ ನಡೆಯುವ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಗೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಪರಿಸರದಿಂದ ಅದ್ದೂರಿಯ ಚಾಲನೆ ಲಭಿಸಿದೆ. ಸಂಸದ ನಳಿನ್ ಕುಮಾರ್ ಕಟೀಲು, ಬಿ.ಎಲ್.ಸಂತೋಷ್, ಸುಭಾಷ್ ವಾಸು, ರಾಜನ್ ಕನ್ನಾಟ್ಟು, ಕುರುವಿಳ ಮ್ಯಾಥ್ಯೂ, ಎಂ.ಮೆಹಬೂಬ್, ವಿ.ವಿ.ರಾಜೇಂದ್ರನ್, ಕೆ.ಕೆ.ಪೊನ್ನಪ್ಪನ್, ವಿ.ಗೋಪ ಕುಮಾರ್, ಪದ್ಮ ಕುಮಾರ್, ಸಂತೋಷ್ ಅರಯಕಂಡಿ, ಸಂಗೀತ ಮೋಹನ್, ಎ.ಎನ್.ರಾಧಾಕೃಷ್ಣನ್, ಎಂ.ಟಿ.ರಮೇಶ್, ಶೋಭಾ ಸುರೇಂದ್ರನ್, ಪ್ರಮೀಳಾ ಸಿ.ನಾಕ್, ಸುರೇಶ್ ಕುಮಾರ್ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಜಿ.ರಾಮನ್, ಮೀನಾಕ್ಷಿ ಶಾಂತಿಯೋಡು, ಪಿ.ರಮೇಶ್, ಎ.ವೇಲಾಯುಧನ್, ಸಂಜೀವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ರಾಜ್ಯ ಕಾರ್ಯದಶರ್ಿ ವಿ.ಕೆ.ಸಜೀವನ್ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸ್ವಾಗತಿಸಿ, ಎ.ಎನ್.ರಾಧಾಕೃಷ್ಣನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಡಿಜೆಎಸ್ ಜಿಲ್ಲಾ ಮುಖಂಡ ಗಣೇಶ್ ಪಾರೆಕಟ್ಟೆ ವಂದಿಸಿದರು. ಇದಕ್ಕೂ ಮೊದಲು ಬಿ.ಎಸ್.ಯಡಿಯೂರಪ್ಪ ಅವರು ಶ್ರೀಕ್ಷೇತ್ರ ಮಧೂರು ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries