HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಶಬರಿಮಲೆ ವಿವಾದ ನಾಸ್ತಿಕವಾದಿ ಎಡರಂಗದ ಗೌಪ್ಯ ಅಜೆಂಡಾ-ಕೆ.ಸುರೇಂದ್ರನ್ ಮಧೂರು: ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕೋಮು ಭಾವನೆಗಳ ದ್ರುವೀಕರಣಕ್ಕೆ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸ್ ಪಕ್ಷದ ರಾಷ್ಟ್ರೀಯ ನೇತಾರರಿಗೆ ಆಪ್ತರಾದ ಟಿ.ಕೆ.ನಾಯರ್ ಎಡರಂಗ ಸರಕಾರದ ಗೌಪ್ಯ ಸಂಚಿಗೆ ಬೆನ್ನೆಲುಬಾಗಿದ್ದು, ಒಂದೆಡೆ ಶಬರಿಮಲೆಗಾಗಿ ಪ್ರತಿಭಟನೆಯ ನಾಟಕವಾಡುವ ಕಾಂಗ್ರೆಸ್ಸ್ ಪಕ್ಷ ಟಿ.ಕೆ.ನಾಯರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಧೈರ್ಯ ವಹಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಕೆ. ಸುರೇಂದ್ರನ್ ತಿಳಿಸಿದರು. ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕು ಮತ್ತು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅಯ್ಯಪ್ಪ ಭಕ್ತರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸುವ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ ಎನ್.ಡಿ.ಎ. ನೇತಾರರಾದ ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ಮತ್ತು ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಶಬರಿಮಲೆ ಸಂರಕ್ಷಣಾ ಯಾತ್ರೆಗೆ ಮಧೂರಿನಲ್ಲಿ ಗುರುವಾರ ನೀಡಿದ ಚಾಲನಾ ಸಮಾರಂಭದಲ್ಲಿ ಯಾತ್ರೆಯ ಉದ್ದೇಶ-ಲಕ್ಷ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಅವರು ಮಾತನಾಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ನಾಸ್ತಿಕವಾದಿ ಎಡರಂಗದ ಗೌಪ್ಯ ಅಜೆಂಡಾದ ಭಾಗವಾಗಿ ಪರಮೋಚ್ಚ ನ್ಯಾಯಾಲಯದ ತೀಪರ್ುನ್ನು ಜಾರಿಗೊಳಿಸಲು ಎಲ್ಲಿಲ್ಲದ ಸಾಹಸ ನಡೆಸುತ್ತಿರುವುದು ಖೇದಕರ. ಪುಣ್ಯ ನೆಲವಾದ ಶಬರಿಮಲೆಯನ್ನು ವ್ಯಾಪಾರ ಕೇಂದ್ರವಾಗಿಸಿ ಕೋಟಿ ರೂ.ಗಳನ್ನು ಕೊಳ್ಳೆಹೊಡೆಯುವ ಬೃಹತ್ ಕಂಪೆನಿಗಳ ಕೈಗೊಂಬೆಯಾಗಿ ಪಿಣರಾಯಿ ವತರ್ಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಎರಡು ದಿನಗಳ ಹಿಂದೆ ವಿಶೇಷ ಉತ್ಸವಾಚರಣೆಗೆ ತೆರೆಯಲ್ಪಟ್ಟ ಶ್ರೀಶಬರಿಮಲೆ ಕ್ಷೇತ್ರಕ್ಕೆ ಪ್ರವಾಹದೋಪಾದಿಯಲ್ಲಿ ಆಗಮಿಸಿದ ಅಯ್ಯಪ್ಪ ಭಕ್ತರನ್ನು ದಮನಿಸಲು ರಾಜ್ಯ ಸರಕಾರವು ಹೇಯ ರೀತಿಯಲ್ಲಿ ವತರ್ಿಸಿರುವುದು ಸರಕಾರದ ಹಿಂದೂ ವಿರೋಧಿ ಮನೋಸ್ಥಿತಿಯ ಸಂಕೇತವಾಗಿದೆ. ಭಕ್ತರ ಸೌಕರ್ಯಗಳಿಗಾಗಿರುವ ಶೌಚಾಲಯ, ಕುಡಿಯುವ ನೀರು, ವಸತಿ, ವಾಹನ ಸಂಚಾರಗಳೇ ಮೊದಲಾದ ಪ್ರಾಥಮಿಕ ಸೌಕರ್ಯಗಳನ್ನು ಮುಚ್ಚಿಸಿ ವಿಕೃತತೆ ಮೆರೆದ ಮುಖ್ಯಮಂತ್ರಿಗೆ ದೈವ ಭಕ್ತಿಯ ಮಹತ್ವ ಹಾಗೂ ಭಕ್ತಿ-ಶ್ರದ್ದೆಗಳ ಮಹತ್ವದ ಬಗ್ಗೆ ಅರಿವಿಲ್ಲದ್ದು ಅವರ ಕುಟಿಲತೆಯ ಸಂಕೇತವಾಗಿದೆ. ಆದರೂ ದೈವ ಭಕ್ತಿಯ ಸಾಮಥ್ರ್ಯದಿಂದ ಮುಖ್ಯಮಂತ್ರಿಯ ಯಾವ ಕುಟಿಲೋಪಾಯಗಳೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಸುರೇಂದ್ರನ್ ತಿಳಿಸಿದರು. ರಾಜ್ಯ ಬಿಜೆಪಿ ಸದಸ್ಯ, ರವೀಶ ತಂತ್ರಿ ಕುಂಟಾರು ಅವರು ಈ ಸಂದರ್ಭ ಮಾತನಾಡಿ, ಸನಾತನ ನಂಬಿಕೆಗಳನ್ನು ಹಿಸುಕುವ ಯಾವನಿಗಾದರೂ ಜಯ ಲಭಿಸಲಾರದು. ಕೋಟ್ಯಂತರ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕಿಗೆ ಮುಖ್ಯಮಂತ್ರಿ ಪ್ರಯತ್ನಿಸಿರುವುದು ಕಟ್ಟಕಡೆಯ ವಿನಾಶದ ಸೂಚನೆಯೆಂದು ಅವರು ಎಚ್ಚರಿಸಿದರು. ನಾಸ್ತಿಕವಾದದ ಜೊತೆಗೆ ಸ್ವಾರ್ಥ ಲಾಲಸಗೆ ತೊಡಗಿಕೊಂಡಿರುವ ಎಡರಂಗ ಇತರೆಡೆಗಳಂತೆ ಕೇರಳದಲ್ಲೂ ಈ ಮೂಲಕ ಅವನತಿಹೊಂದಲಿದೆ ಎಂದು ಅವರು ತಿಳಿಸಿದರು. ರಥಯಾತ್ರೆಯ ಚಾಲನಾ ಕಾರ್ಯಕ್ರಮದಲ್ಲಿ ಇತರ ಗಮನೀಯ ಅಂಶಗಳು: * ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಹಿಂದೂ ಧರ್ಮ ವಿಶ್ವಾಸಿಗಳು, ಅಯ್ಯಪ್ಪ ಭಕ್ತರು ಕಿಕ್ಕಿರಿದು ಸೇರಿದ್ದ ಸಭೆಯಲ್ಲಿ ಸ್ವಯಂ ಸೇವಕರು ಪಾನೀಯ ಹಾಗೂ ಕುಡಿಯುವ ನೀರು ವಿತರಿಸುವ ಮೂಲಕ ಗಮನ ಸೆಳೆದರು. * ಮೈಸೂರಿನ ಅರಸನಾಗಿದ್ದ ಟಿಪ್ಪು ಸುಲ್ತಾನ್ ಕರಾವಳಿಯಾದ್ಯಂತ ದಂಡಯಾತ್ರೆ ನಡೆಸಿ ಹಿಂದೂ ದೇವಾಲಯಗಳನ್ನು ಕೆಡವಿ ಮತಾಂತರದಲ್ಲಿ ತೊಡಗಿದ್ದ ಸಂದರ್ಭ ಶ್ರೀಕ್ಷೇತ್ರ ಮಧೂರಿಗೆ ಆಗಮಿಸಿದಾಗ ಮನಪರಿವರ್ತನೆಗೊಂಡು ಹತಾಶನಾಗಿ ದೇವಾಲಯದ ಬಾವಿಯ ಆಧಾರಕ್ಕೆ ಕೊಡಲಿಯಿಂದ ಕಡಿದು ಹಿಂದಿರಿಗಿದ್ದು, ಅದೇ ಸ್ಥಳದಲ್ಲಿ ಶಬರಿಮಲೆ ಸಂರಕ್ಷಣೆಗಾಗಿ ರಥಯಾತ್ರೆ ಆರಂಭಗೊಂಡಿರುವುದು ಧರ್ಮಸಂರಕ್ಷಣೆ ಹೋರಾಟಕ್ಕೆ ಲಭ್ಯವಾಗುವ ಜಯದ ಸಂಕೇತ ಎಂದು ವೇದಿಕೆಯಲ್ಲಿದ್ದ ಯಡಿಯೂರಪ್ಪ ಸಹಿತ ಗಣ್ಯರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು ಕಂಡುಬಂತು. * ಶಬರಿಮಲೆ ಹೋರಾಟಕ್ಕೆ ಕೇರಳದ ಎಲ್ಲಾ ಧರ್ಮಸಂರಕ್ಷಕ ಸಂಘಟನೆಗಳ ಜೊತೆಗೆ ಸಮಸ್ತ ಕನರ್ಾಟಕದ ಧರ್ಮ ವಿಶ್ವಾಸಿಗಳ ಪೂರ್ಣ ಬೆಂಬಲ ಇದೆ ಎಂದು ಉದ್ಘಾಟಿಸಿದ ಬಿ.ಎಸ್.ಯಡಿಯೂರಪ್ಪ ಘೋಶಿಸಿದರು. * ಜಾಥಾ ನಾಯಕ, ರಾಜ್ಯ ಬಿಜೆಪಿ ಅಧ್ಯಕ್ಷ, ಎನ್ಡಿಎ ರಾಜ್ಯ ಸಂಯೋಜಕ ನ್ಯಾಯವಾದಿ ಶ್ರೀಧರನ್ ಪಿಳ್ಳೆ ಅವರು ತಮ್ಮ ಭಾಷಣದಲ್ಲಿ ಎಡಪಕ್ಷಗಳ ನೀತಿಯ ಬಗ್ಗೆ ಉಲ್ಲೇಖಿಸುತ್ತಾ, ಜಗತ್ತಿನ ವಿವಿಧೆಡೆ ಈಗಾಗಲೇ ಮಣ್ಣುಪಾಲಾಗಿರುವ ಎಡಚಿಂತನೆಗಳನ್ನು ಕೇರಳದಲ್ಲಿ ಗೆಲ್ಲಿಸಲು ಹವಣಿಸುವ ಪಿಣರಾಯಿ ವಿಜಯನ್ ಅವರ ಹುಂಬತನದ ಬಗ್ಗೆ ಲೇವಡಿಗೈದು, ಕಮ್ಯುನಿಸ್ಟ್ ಮ್ಯಾನ್ಯಪೇಸ್ಟಾದ ಹೊತ್ತಗೆಯನ್ನು ವೇದಿಕೆಯಲ್ಲಿ ಪ್ರದಶರ್ಿಸಿ ಹೊತ್ತಗೆಯಲ್ಲಿ ತಿಳಿಸಿರುವ ಯಾವ ಅಂಶಗಳನ್ನು ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವ ಎಡಪಕ್ಷ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries