HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಶಬರಿಮಲೆ ವಿವಾದದ ಹೆಸರಲ್ಲಿ ಎಡರಂಗ ಹಾಗೂ ಬಿಜೆಪಿ ಪೋಟ್ ಬ್ಯಾಂಕ್ ಸೃಷ್ಟಿಗೆ ಯತ್ನ-ಎಂ.ಎಂ.ಹಸನ್ ಪೆರ್ಲ: ಭಕ್ತಿ-ಸಂಪ್ರದಾಯಗಳ ಹೆಸರಲ್ಲಿ ಬಿಜೆಪಿ ನಾಯಕರು ಪೋಟ್ ಬ್ಯಾಂಕ್ ಸೃಷ್ಟಿಸಲು ಯತ್ನಿಸುತ್ತಿದೆ. ಶಬರಿಮಲೆ ಕುರಿತು ಸವರ್ೋಚ್ಚ ನ್ಯಾಯಾಲಯ ನೀಡಿರುವ ತೀಪರ್ಿನ ಬಗ್ಗೆ ತುಟಿಪಿಟಿಕ್ಕೆನ್ನದಿರುವ ಕೇಂದ್ರ ಬಿಜೆಪಿ ನೇತಾರ ಮಧ್ಯೆರಾಜ್ಯದ ನಾಯಕರನ್ನು ಛೂಬಿಟ್ಟು ರಾಜ್ಯದ ಒಟ್ಟು ಶಾಂತಿಯನ್ನು ಕದಡುವ ಯತ್ನದ ಹಿಂದೆ ಭಾರೀ ಗೌಪ್ಯ ರಾಜಕೀಯ ಅಡಗಿದೆ.ಈ ನಿಟ್ಟಿನಲ್ಲಿ ರಾಜ್ಯದ ಸುಶಿಕ್ಷಿತ ಜನರಿಗೆ ಸ್ಪಷ್ಟ ಅರಿವು ಇದೆ ಎಂದು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಅಧ್ಯಕ್ಷ ಎಂ.ಎಂ.ಹಸನ್ ತಿಳಿಸಿದರು. ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ಸ್ ನೇತಾರ ಕೆ.ಸುಧಾಕರನ್ ನೇತೃತ್ವದಲ್ಲಿ ಹಮ್ಮಿಕೊಂಡ ನಂಬಿಕೆ ಸಂರಕ್ಷಣಾ ಯಾತ್ರೆಗೆ ಗುರುವಾರ ಪೆರ್ಲದಲ್ಲಿ ಜಾಥಾ ನಾಯಕ ಕೆ.ಸುಧಾಕರನ್ ಅವರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಎಡರಂಗ ಹಾಗೂ ಬಿಜೆಪಿ ಎರಡು ನಾಣ್ಯಗಳ ಒಂದೇ ಮುಖಗಳಾಗಿದ್ದು, ಧರ್ಮ, ಜಾತಿ-ಮತಗಳನ್ನು ಬಳಸಿ ರಾಜಕೀಯ ದ್ರುವೀಕರಣದ ಮೂಲಕ ಜನವಂಚನೆ ಗೈಯ್ಯುವುದು ಅವುಗಳ ಸ್ವಭಾವವಾಗಿದೆ. ಎರಡೂ ಬಣಗಳೂ ಅದರದ್ದೇ ರಹಸ್ಯ ಅಜೆಂಡಾಗಳ ಮೂಲಕ ಜನರ ಮಧ್ಯೆ ವೈಷಮ್ಯ ಹುಟ್ಟಿಸುವ ವ್ಯವಸ್ಥೆಯನ್ನು ಕಂಡುಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತ ಸಮಾಜ ಜಾಗರೂಕವಾಗಿರಬೇಕೆಂದು ಅವರು ತಿಳಿಸಿದರು. ಶಬರಿಮಲೆಯ ಸಂಪ್ರದಾಯಕ್ಕೆ ಧಕ್ಕೆತರುವಲ್ಲಿ ಎಡರಂಗ ನಡೆಸುತ್ತಿರುವ ಹುನ್ನಾರ ಗಂಭೀರ ಸ್ವರೂಪದ ಸಾಮಾಜಿ, ಧಾಮರ್ಿಕ ಅವಸಾನಕ್ಕೆ ಕಾರಣವಾಗಲಿದ್ದು,ಈ ಬಗ್ಗೆ ಪಕ್ಷ ಎಂದಿಗೂ ಭಕ್ತರ ಜೊತೆಗಿದ್ದು, ಸಂಪ್ರದಾಯ ನಿರ್ವಹಣೆಗೆ ಬದ್ದವಾಗಿದೆ ಎಂದು ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕನರ್ಾಟಕ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ರಾಜ್ಯ ಕಾಂಗ್ರೆಸ್ಸ್ ಮುಖಂಡರಾದ ಕೆ.ಸಿ. ಜೋಸೆಫ್, ಟಿ.ಸಿದ್ದೀಕ್, ಪಿ.ಸಿ.ವಿಷ್ಣುನಾಥ್, ಲತಿಕಾ ಸುಭಾಶ್, ಕೆ.ಪಿ.ಅನಿಲ್ ಕುಮಾರ್, ಫಾತಿಮಾ ರೋಸ್ನ, ಕೆ.ಪಿ.ಕುಂಞಿಕಣ್ಣನ್, ಹಷರ್ಾದ್ ವಕರ್ಾಡಿ, ಮಂಜುನಾಥ ಆಳ್ವ ಮಡ್ವ, ಸುಂದರ ಆರಿಕ್ಕಾಡಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್.ಸ್ವಾಗತಿಸಿ, ನ್ಯಾಯವಾದಿ ಗೋವಿಂದನ್ ನಾಯರ್ ವಂದಿಸಿದರು. ಯಾತ್ರೆಯು ಏಕಕಾಲದಲ್ಲಿ ಗುರುವಾರ ರಾಜ್ಯದ ತಿರುವನಂತಪುರ, ಪಾಲ್ಘಾಟ್, ಆಲಪ್ಪುಳ ಹಾಗೂ ಕೋಟ್ಟಯಂ ಜಿಲ್ಲೆಗಳಲ್ಲೂ ಆರಂಭಗೊಂಡಿದ್ದು, ನ.15 ರಂದು ಪತ್ತನಂತಿಟ್ಟದಲ್ಲಿ ಸಮಾರೋಪಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries