ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 08, 2018
ಗುರುವಾಯೂರು ಕ್ಷೇತ್ರಾದಾಯದಲ್ಲಿ ಕುಸಿತ!
ತೃಶೂರ್: ರಾಜ್ಯದ ಪ್ರಸಿದ್ಧ ದೇವಸ್ಥಾನ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ತಿಂಗಳ ಆದಾಯದಲ್ಲಿ ಒಂದು ಕೋಟಿ ರೂ.ಗಳಷ್ಟು ಕುಸಿತ ಕಂಡುಬಂದಿದೆ. ದೇವಸ್ವಂ ಮಂಡಳಿ ಆಡಳಿತದ ದೇವಸ್ಥಾನಗಳಿಗೆ ಹಣದ ರೂಪದಲ್ಲಿ ಸೇವೆಯನ್ನು ನೀಡಬಾರದೆಂಬ ಪ್ರಚಾರದಿಂದಾಗಿ ಕಾಣಿಕೆಯಲ್ಲಿ ಇಷ್ಟೊಂದು ಏರು ಪೇರಾಗಿದೆ. ಆದರೆ ಈ ರೀತಿಯ ಪ್ರಚಾರದಿಂದಾಗಿ ಆದಾಯ ಕಡಿಮೆಯಾಗಿರುವುದಲ್ಲ ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನ್ ದಾಸ್ ಹೇಳಿದ್ದಾರೆ.
ಹಿಂದೂ ಧರ್ಮದ ಆಚಾರಗಳಿಗೆದುರಾಗಿ ನಿಂತಿರುವ ದೇವಸ್ವಂ ಮಂಡಳಿ, ರಾಜ್ಯ ಸರಕಾರಕ್ಕೆ ಹಿಂದುಗಳ ಹಣವನ್ನು ನೀಡಬೇಕಾಗಿಲ್ಲವೆಂಬ ರೀತಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಚಾರದಲ್ಲಿದೆ. ಹಣದ ಬದಲು ದೇವರ ನಾಮಗಳನ್ನು ಬರೆದ ಚೀಟಿಗಳನ್ನು ಮಾತ್ರ ಕಾಣಿಕೆಯ ಹುಂಡಿಯಲ್ಲಿ ಹಾಕಬೇಕು ಎಂದು ವಿವಿಧ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳ ಗುರುವಾಯೂರು ದೇವಸ್ಥಾನದ ಆದಾಯದಲ್ಲಿ ಒಂದು ಕೋಟಿಯಷ್ಟು ಮೊತ್ತ ಕಡಿತಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಣಿಕೆಯ ರೂಪದಲ್ಲಿ ಹಾಗೂ ಸೇವೆಯ ರೂಪದಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದ ದೇವಸ್ವಂ ಮಂಡಳಿ ಅಧ್ಯಕ್ಷ ಮುಖ್ಯಮಂತ್ರಿಯರ ಪರಿಹಾರ ನಿಧಿಗೆ ದೇಣಿಗೆಯನ್ನು ಆಗ್ರಹಿಸಿ ಗುರುವಾಯೂರು ದೇವಸ್ಥಾನದ ಮುಂಭಾಗದಲ್ಲಿ ಸ್ಥಾಪಿಸಲಾದ ಕಾಣಿಕೆ ಹುಂಡಿಯು ಯಾರೊಬ್ಬರ ಆದೇಶದಂತೆಯೂ ಸ್ಥಾಪಿಸಲಾಗಿಲ್ಲ ಎಂಬುದನ್ನು ಅಲ್ಲಿ ತಿಳಿಸಲಾಗಿದೆ ಎಂದೂ ಅವರು ಹೇಳಿದರು.

