HEALTH TIPS

ಕಾಸರಗೋಡು ಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಕೊಂಬುಮೀಸೆ

                   
           ಬದಿಯಡ್ಕ: ಚೆರುವತ್ತೂರಿನ ಕುಟ್ಟಮ್ಮತ್ನಲ್ಲಿ ನಡೆಯುತ್ತಿರುವ  9ನೇ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದ ನಾಟಕ ಸ್ಪಧರ್ೆಯಲ್ಲಿ ಧರ್ಮತ್ತಡ್ಕ ಶ್ರೀದುಗರ್ಾಪರಮೇಶ್ವರಿ ಪ್ರೌಢಶಾಲೆಯ ಕೊಂಬುಮೀಸೆ ನಾಟಕವು ಜನಮನಸ್ಸನ್ನು ಗೆದ್ದು ದ್ವಿತೀಯ ಸ್ಥಾನದೊಂದಿಗೆ ಉತ್ತಮ ನಟ ಮತ್ತು ನಟಿ ಎಂಬೀ ಬಿರುದುಗಳನ್ನು ತನ್ನದಾಗಿಸಿಕೊಂಡಿದೆ.
      ಎರಡು ದಿನಗಳಲ್ಲಿ ಜರಗಿದ ಕಲೋತ್ಸವದ ಮೊದಲನೇ ದಿನದಂದು ಪ್ರದರ್ಶನಗೊಂಡ ನಾಟಕ ಸ್ಪಧರ್ೆಗಳಲ್ಲಿ ಏಳು ನಾಟಕಗಳ ಪೈಕಿ ಆರು ಮಲೆಯಾಳ ನಾಟಕಗಳು ಹಾಗೂ ಏಕಮಾತ್ರ ಕನ್ನಡ "ಕೊಂಬು ಮೀಸೆ' ನಾಟಕವು ದ್ವಿತೀಯ ಸ್ಥಾನ ಗಳಿಸಿದೆ. ಉತ್ತಮ ನಟನಾಗಿ ವೆಂಕಟೇಶ ಜಿ. ಆಯ್ಕೆಯಾದರೆ ಉತ್ತಮ ನಟನಾಗಿ ಕೆ. ಎಸ್. ಸ್ವರ್ಣ ಆಯ್ಕೆಯಾದರು. ಈ ಹಿಂದೆ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಐದು ಕನ್ನಡ ನಾಟಕಗಳು ಸ್ಪಧರ್ಿಸಿದ್ದವು. ಇದರ ಪೈಕಿ ಒಂದು ಮಲೆಯಾಳ ನಾಟಕಕ್ಕೆ ತೀಪರ್ುಗಾರರು ಮಣೆಹಾಕಿದ್ದರು. ರಂಗದಲ್ಲಿ ಸ್ಪಧರ್ಿಸಿದ ಕೊಂಬುಮೀಸೆ ನಾಟಕವು ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟರೂ ಉತ್ತಮ ನಟನಾಗಿ ವೆಂಕಟೇಶ ಜಿ. ಹಾಗೂ ಉತ್ತಮ ನಟಿಯಾಗಿ ಕೆ. ಎಸ್. ಸ್ವರ್ಣ ಆಯ್ಕೆಯಾಗಿದ್ದರು. ವಿದ್ಯಾಥರ್ಿಗಳ ಆಸಕ್ತಿಯ ಮೇರೆಗೆ ಮೇಲ್ಮನವಿ ಸಲ್ಲಿಸಿದ್ದರಿಂದ ಉಪಶಿಕ್ಷಣ ನಿದರ್ೇಶಕರ ಕಚೇರಿಯಲ್ಲಿ ಮೇಲ್ಮನವಿಗೆ ಪ್ರಾಶಸ್ತ್ಯ ಕಲ್ಪಿಸಲಾಯಿತು.
       ಜಿಲ್ಲೆಯಲ್ಲಿಯೂ ಕೂಡಾ ಒಂದೇ ಕನ್ನಡ ನಾಟಕವಾಗಿ ಕಣಕ್ಕಿಳಿದು ಚೆರುವತ್ತೂರಿನ ಮಲೆಯಾಳ ಮಣ್ಣಿನಲ್ಲಿ ಕನ್ನಡದ ಕಂಪನ್ನು ಬೀರಿ ಅದ್ಭುತ ಪ್ರದರ್ಶನ ನೀಡಿದ್ದು, ಮಲೆಯಾಳ ಪ್ರೇಕ್ಷಕರು ಮಕ್ಕಳ ಅಭಿನಯ ಹಾಗೂ ನಾಟಕದ ಪ್ರದರ್ಶನಕ್ಕೆ ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.
    ಮಂಜೇಶ್ವರ ಉಪಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಅರ್ಹವಾದ ನಾಟಕವು ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಕನ್ನಡ ನಾಟಕದ ಮಕ್ಕಳ ಮೇಲ್ಮನವಿಗೆ ಅಂಗೀಕಾರ ಲಭಿಸಿದಂತಾಯಿತು. ಜಿಲ್ಲೆಯಲ್ಲಿ ಒಂದೇ ಕನ್ನಡ ನಾಟಕವಾಗಿಯೂ ಕಣಕ್ಕಿಳಿದು ಚೆರುವತ್ತೂರಿನ ಮಣ್ಣಿನಲ್ಲಿ ಕನ್ನಡದ ಕಂಪನ್ನು ಬೀರಿ ಅದ್ಭುತ ಪ್ರದರ್ಶನ ನೀಡಿ ಮಲೆಯಾಳ ಪ್ರೇಕ್ಷಕರು ಮಕ್ಕಳ ಅಭಿನಯ ಹಾಗೂ ನಾಟಕದ ಪ್ರದರ್ಶನಕ್ಕೆ ಅಭಿನಂದನೆಯನ್ನು ವ್ಯಕ್ತಪಡಿಸಿದರು. ಈ ಬಾರಿಯೂ ಉತ್ತಮ ನಟನಾಗಿ ಕೊಂಬುಮೀಸೆ ಪಾತ್ರಕ್ಕೆ ಜೀವವಿತ್ತ ವೆಂಕಟೇಶ ಜಿ. ಉತ್ತಮ ನಟನಾಗಿ ಆಯ್ಕೆಯಾದಾಗ ಕೀತರ್ಿಪಾತ್ರದಲ್ಲಿ ಕಾಣಿಸಿಕೊಂಡ ಕೆ. ಎಸ್. ಸ್ವರ್ಣ ಉತ್ತಮ ನಟಿಯಾಗಿ ಹೊರಹೊಮ್ಮಿದರು.
    ನಾಟಕದ ಪಾತ್ರಧಾರಿಗಳಾಗಿ ಕೊಂಬುಮೀಸೆ ಮಾಧವ ಮಾಸ್ಟ್ರ ಪಾತ್ರದಲ್ಲಿ ವೆಂಕಟೇಶ ಜಿ., ಹೆಡ್ ಮಾಸ್ಟರ್ಪಾತ್ರದಲ್ಲಿ ಸಾತ್ವಿಕ್ ಕೃಷ್ಣ ಎನ್., ಕೀತರ್ಿಯಾಗಿ ಕೆ. ಎಸ್. ಸವರ್ಣ, ಚಂದುವಾಗಿ ವಿವೇಕ ರೈ, ಗಂಜಿಯಕ್ಕನಾಗಿ ಶ್ರೇಯ, ಆದಿವಾಸಿಯಾಗಿ ಚೈತ್ರಾ, ವಿದ್ಯಾಥರ್ಿಯಾಗಿ ರೇಷ್ಮಾ, ಸಂಗೀತ ನಿರ್ವಹಣೆಯಲ್ಲಿ ಕಾವ್ಯ ಜಿ. ಮತ್ತು ಭರತ್ ಕುಮಾರ್ ಭಾಗವಹಿಸಿದರು. ಉದಯ ಕೆ., ಶ್ರೇಯಸ್ ಸಹಕರಿಸಿದರು.
         ರಂಗಪರಿಕರ ಸಜ್ಜೀಕರಣ ವಸಂತ ಮೂಡಂಬೈಲು, ವೇಷಭೂಷಣ ವರದರಾಜ, ಸಂಗೀತ ಸಂಯೋಜನೆ ಮೆಲ್ವಿನ್ ಪೆಮರ್ುದೆ, ನಿದರ್ೇಶನ ಕಥಾರಚನೆ ಸಂಯೋಜನೆ ಸದಾಶಿವ ಮಾಸ್ತರ್ ಪೊಯ್ಯೆ, ಅಧ್ಯಾಪಕರಾದ ಶಿವಪ್ರಸಾದ್ ಚೆರುಗೋಳಿ, ರಾಜಕುಮಾರ್ ಕೆ., ಪ್ರಶಾಂತ ಹೊಳ್ಳ ಎನ್., ಉಷಾಪದ್ಮ ಜಿ., ತುಳಸಿ ಕೆ., ಉಷಾ ಕೆ. ಆರ್., ಶಿವನಾರಾಯಣ ಭಟ್ ನಾಟಕ ತಂಡದ ಜತೆಗಿದ್ದು ಸಹಕರಿಸಿದರು. ಶಾಲಾ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್, ವ್ಯವಸ್ಥಾಪಕರಾದ ಎನ್. ಶಂಕರನಾರಾಯಣ ಭಟ್ ವಿದ್ಯಾಥರ್ಿಗಳನ್ನು ಅಭಿನಂದಿಸಿದರು.
   ಇತರ ಒಂದಷ್ಟು:
      ಚೆರುವತ್ತೂರಿನ ಕುಟ್ಟಮ್ಮತ್ನಲ್ಲಿ ಜರಗಿದ ಕಂದಾಯ ಕಾಸರಗೋಡು ಜಿಲ್ಲಾ ಕಂದಾಯ ಶಾಲಾ ಕಲೋತ್ಸವದ ನಾಟಕ ಸ್ಪಧರ್ೆಯಲ್ಲಿ ಉತ್ತಮ ನಟನಾಗಿ ಆಯ್ಕೆಯಾದ ವೆಂಕಟೇಶ ಜಿ.  ಮತ್ತು ಉತ್ತಮ ನಟಿಯಾಗಿ ಆಯ್ಕೆಯಾದ ಕೆ. ಎಸ್. ಸ್ವರ್ಣ ಈ ಹಿಂದೆಯೂ ಮಂಜೇಶ್ವರ ಉಪಜಿಲ್ಲಾ ನಾಟಕ ಸ್ಪಧರ್ೆಯಲ್ಲೂ ಇವರು ಉತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇವರು ಧರ್ಮತ್ತಡ್ಕ ಶ್ರೀ ದುಗರ್ಾ ಪರಮೇಶ್ವರಿ ಪ್ರೌಢಶಾಲಾ ವಿದ್ಯಾಥರ್ಿಗಳು.


    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries