ಚೇಕರ್ೂಡ್ಲು ಜಿ.ಕೆ.ಭಟ್ ಸಂಸ್ಮರಣೆ 8 ರಂದು ಬದಿಯಡ್ಕ : ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹಕ ರೂವಾರಿಯೂ, ಸಮಾಜ ಸೇವಕರೂ ಆಗಿದ್ದ ದಿ. ಚೇಕರ್ೂಡ್ಲು ಗೋಪಾಲಕೃಷ್ಣ ಭಟ್
0
ನವೆಂಬರ್ 05, 2018
ಚೇಕರ್ೂಡ್ಲು ಜಿ.ಕೆ.ಭಟ್ ಸಂಸ್ಮರಣೆ 8 ರಂದು
ಬದಿಯಡ್ಕ : ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹಕ ರೂವಾರಿಯೂ, ಸಮಾಜ ಸೇವಕರೂ ಆಗಿದ್ದ ದಿ. ಚೇಕರ್ೂಡ್ಲು ಗೋಪಾಲಕೃಷ್ಣ ಭಟ್ ಅವರ ಸ್ಮರಣಾರ್ಥ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದೀಪಾವಳಿ-ಅಂಗಡಿ ಪೂಜೆಯೊಂದಿಗೆ ನವೆಂಬರ್ 8 ಗುರುವಾರ ಸಂಜೆ 5 ಕ್ಕೆ ಬದಿಯಡ್ಕ ಮೇಲಿನ ಪೇಟೆಯಲ್ಲಿರುವ ಗೌರಿಕೃಪ ಸಂಕೀರ್ಣದಲ್ಲಿ ಜರಗಲಿರುವುದು.
ಬದಿಯಡ್ಕ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿರುವ ಪಿಲಿಂಗಲ್ಲು ಕೃಷ್ಣ ಭಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತರಾದ ಪದ್ಮನಾಭ ಭಟ್ ಕೊರೆಕ್ಕಾನ ಉದ್ಘಾಟಿಸಲಿರುವರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬದಿಯಡ್ಕ ವ್ಯಾಪಾರಿ ವ್ಯವಸಾು ಏಕೋಪನಾ ಸಮಿತಿ ಪ್ರಧಾನ ಕಾರ್ಯದಶರ್ಿ ಕುಂಜಾರು ಮುಹಮ್ಮದ್ ಹಾಜಿ ಉಪಸ್ಥಿತರಿರುವರು. ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿವಿಧ ಆಟೋಟ ಸ್ಪಧರ್ಾ ವಿಜೇತರುಗಳಿಗೆ ಶ್ರೀಮತಿ ಸುಧಾ.ಜಿ.ಭಟ್ ಅವರು ಬಹುಮಾನಗಳನ್ನು ವಿತರಿಸಲಿರುವರು. ಡಾ. ಬೇ. ಸೀ. ಗೋಪಾಲಕೃಷ್ಣ, ರಂಗಶರ್ಮ ಉಪ್ಪಂಗಳ, ರವಿಕಾಂತ ಕೇಸರಿ ಕಡಾರು ಶುಭಾಶಂಸನೆಗೈಯಲಿರುವರು. ಬೇಂದ್ರೋಡು ಗೋವಿಂದ ಭಟ್ ಮತ್ತು ಬಳಗದವರಿಂದ ಜಾಂಬವತೀ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ




