ಮುಜುಂಗಾವಿನಲ್ಲಿ ಸ್ಕೌಟಿಂಗ್ ಮಿನಿ ಕ್ಯಾಂಪೂರಿಗೆ ಸಿದ್ದತೆ ಪೂರ್ಣ
ಕುಂಬಳೆ: ವಿದ್ಯಾಥರ್ಿಗಳ ಶಾರೀರಿಕ, ಮಾನಸಿಕ, ನೈತಿಕ ವಿಕಾಸಕ್ಕೆ ಮಾರ್ಗದಶರ್ಿಯಾಗಿ ಕಾಯರ್ಾಚರಿಸುತ್ತಿರುವ ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮಟ್ಟದ ಮಿನಿ ಕ್ಯಾಂಪೂರಿ ನ.9 ರಿಂದ 11ರ ವರೆಗೆ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಆವರಣದಲ್ಲಿ ವೈವಿಧ್ಯಮಯ ಸಾಹಸಿಕ ಚಟುವಟಿಕೆಗಳೊಂದಿಗೆ ನಡೆಯಲಿದ್ದು, ಶಿಬಿರದ ಯಶಸ್ವಿಗೆ ವಿವಿಧಸಮಿತಿಗಳೊಂದಿಗೆ ಸಿದ್ದತೆ ಪೂರ್ಣವಾಗಿದೆ ಎಂದು ಸಂಬಂಧಪಟ್ಟವರು ಬುಧವಾರ ಸಂಜೆ ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದ ಮೊದಲ ಹಂತವಾಗಿ ನ.9 ರಂದು ಬೆಳಿಗ್ಗೆ ಜಿಲ್ಲೆಯ 48ಕ್ಕೂ ಮಿಕ್ಕಿದ ಶಾಲೆಗಳಿಂದ ಸ್ಕೌಟ್ಸ್-ಗೈಡ್ಸ್ ಶಿಕ್ಷಕರೊಂದಿಗೆ ಆಗಮಿಸುವ 800ಕ್ಕೂ ಮಿಕ್ಕಿದ ಸ್ಕೌಟ್-ಗೈಡ್ ಗಳು ಡೇರೆ ನಿಮರ್ಿಸುವಲ್ಲಿಂದ ಆರಂಭಗೊಳ್ಳಲಿದೆ.
ಅಪರಾಹ್ನ 2.30ಕ್ಕೆ ಧ್ವಜಾರೋಹಣ-ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಸಂಪುಟ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಕಾಸರಗೋಡು ವಲಯ ಕ್ರೈಸ್ತ ದೇವಾಲಯಗಳ ಪ್ರಧಾನ ಧರ್ಮಗುರು, ಬೇಳ ಶೋಕಮಾತಾ ದೇವಾಲಯದಧರ್ಮಗುರುಗಳೂ ಆದ ಫಾದರ್ ಜೋನ್ ವಾಸ್ ಹಾಗೂ ಪ್ರಸಿದ್ದ ಇಸ್ಲಾಂ ಧರ್ಮ ಪಂಡಿತ ಕುಂಬೋಳ್ ಸಯ್ಯದ್ ಕೆ.ಎಸ್. ಶಮೀಮ್ ತಂಙಳ್ ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದು ಹಾರೈಸುವರು. ಕಾಸರಗೋಡು ಬ್ಲಾ.ಪಂ.ಅಧ್ಯಕ್ಷ ಸಿ.ಎಚ್. ಮೊಹಮ್ಮದ್ ಕುಂಞಿ ಚಾಯಿಂದಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸ್ಕೌಟ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸಜಿತ್ ಎ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಸಮಗ್ರ ವಿವರಣೆ ನೀಡುವರು. ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ತಮ್ಮ ವಿದ್ಯಾಥರ್ಿ ಜೀವನದ ಸ್ಕೌಟಿಂಗ್ ಅನುಭವಗಳನ್ನು ಈ ಸಂದರ್ಭ ಹಂಚಿಕೊಳ್ಳುವರು. ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಜಿಲ್ಲಾ ಪಂ. ಮಾಜೀ ಸದಸ್ಯ ಶಂಕರ ರೈ ಮಾಸ್ತರ್ ಬಾಡೂರು, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಕೆ, ಗ್ರಾ.ಪಂ.ಸದಸ್ಯರುಗಳಾದ ಮುರಳೀದರ ಯಾದವ್ ನಾಯ್ಕಾಪು, ಹರೀಶ್ ಗಟ್ಟಿ,ವರಪ್ರಸಾದ್ ಉಪಸ್ಥಿತರಿದ್ದು ಶುಭಹಾರೈಸುವರು. ಸಂಜೆ 7.30 ರಿಂದ ಶಿಬಿರಾಥರ್ಿಗಳಿಗೆ ದೇಶಭಕ್ತಿ ಗೀತೆಗಳ ಸ್ಪಧರ್ೆ ನಡೆಯಲಿದ್ದು, ನಿವೃತ್ತ ವಿದ್ಯಾಧಿಕಾರಿ ಎಂ.ಜಿ.ನಾರಾಯಣ ರಾವ್ ಅಧ್ಯಕ್ಷತೆವಹಿಸುವರು. ಗ್ರಾ.ಪಂ.ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ನ.10 ರಂದು ಬೆಳಿಗ್ಗೆ 10 ರಿಂದ ಶಿಬಿರಾಥರ್ಿಗಳ ಸಾಹಸ ಪ್ರದರ್ಶನ ನಡೆಯಲಿದ್ದು, ಸ್ಕೌಟ್ಸ್ ರಾಜ್ಯ ಕಮಿಶನರ್ ಕೆ.ಎನ್.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ನಗರಸಭಾ ಕೌನ್ಸಿಲರ್ ಸವಿತಾ ಕೆ.ಉದ್ಘಾಟಿಸುವರು. ಸೂರಂಬೈಲು ಸರಕಾರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ಶಶಿಕಲಾ ಟೀಚರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರರಿವರು. ಸಂಜೆ7.30 ರಿಂದನೃತ್ಯ ಸ್ಪಧರ್ೆಗಳು ರಂಗೇರಲಿದ್ದು, ಗೈಡ್ಸ್ ರಾಜ್ಯ ತರಬೇತುದಾರೆ ವಸಂತ ಎಂ. ಅಧ್ಯಕ್ಷತೆ ವಹಿಸುವರು. ಪುತ್ತಿಗೆಗ್ರಾ.ಪಂ. ಸದಸ್ಯರೂ,ಶಿಬಿರದ ಆಥರ್ಿಕ ಸಮಿತಿ ಅಧ್ಯಕ್ಷರಾದ ಇ.ಕೆ.ಮೊಹಮ್ಮದ್ ಉದ್ಘಾಟಿಸುವರು. ನಿವೃತ್ತ ಕಂದಾಯ ಅಧಿಕಾರಿ ಎ.ಪಿ. ಜನಾರ್ಧನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ನ.11 ರಂದು ಅಪರಾಹ್ನ 2.30ಕ್ಕೆ ನಡೆಯುವ ವಿಶೇಷ ಸಾಹಸ-ಸಂಸ್ಕೃತಿ-ಸಾಧನಾ ಪ್ರದರ್ಶನದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ಪಿ. ಅಧ್ಯಕ್ಷತೆ ವಹಿಸುವರು. ಕುಂಬಳೆ ಗ್ರಾ.ಪಂ. ಅಧ್ಯಕ್ಷ ಹರೀಶ ಗಟ್ಟಿ ಉದ್ಘಾಟಿಸುವರು. ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂಜೆ 4 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉದುಮ ಶಾಸಕ ಕು.ಕುಂಞಿರಾಮನ್ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ಭಾರತ್ ಸ್ಕೌಟ್ಸ್-ಗೈಡ್ಸ್ ನ ಕನರ್ಾಟಕ ರಾಜ್ಯ ಕಮಿಶನರ್ ಪಿ.ಜಿ.ಆರ್.ಸಿಂದ್ಯಾ ಹಾಗೂ ಕಾರಡ್ಕ ಬ್ಲಾ.ಪಂ. ಅಧ್ಯಕ್ಷೆ ಓಮನಾ ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆಅರುಣಾ ಜೆ, ಕುಂಬಳೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಉಪಸ್ಥಿತರಿದ್ದು ಶುಭಹಾರೈಸುವರು. ಬಳಿಕ ರಾತ್ರಿ 7 ರಿಂದ ಶಿಬಿರಾಗ್ನಿ ಚಟುವಟಿಕೆಗಳು ನಡೆಯಲಿದ್ದು, ಸ್ಕೌಟ್ಸ್ - ಗೈಡ್ಸ್ ಕುಂಬಳೆ ಸ್ಥಳೀಯ ಘಟಕಾಧ್ಯಕ್ಷ ಅಪ್ಪಣ್ಣ ಮಾಸ್ತರ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬನರ್ಾಡ್ ಉದ್ಘಾಟಿಸುವರು.
ಗಡಿನಾಡಿನಲ್ಲೇ ಮೊತ್ತಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿರುವ ಮಿನಿ ಜಾಂಬೂರಿಗೆ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಆವರಣ ಐತಿಹಾಸಿಕವಾಗಿ ವಿಶಿಷ್ಟ ರೀತಿಯ ವೈವಿಧ್ಯತೆಗಳೊಂದಿಗೆ ಸಿದ್ದತೆಗಳು ಪೂರ್ಣಗೊಂಡಿದ್ದು, ಸಾರ್ವಜನಿಕರು, ವಿದ್ಯಾಥರ್ಿಗಳ ಪೋಷಕರು ಕ್ಯಾಂಪೂರಿಯ ಮುಕ್ತ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಶಿಬಿರಾಥರ್ಿಗಳು 35ಕ್ಕಿಂತಲೂ ಹೆಚ್ಚು ಜೋಪಡಿ(ಟೆಂಟ್) ನಿಮರ್ಿಸಿ, ಸ್ವ ಅಡುಗೆಗಳನ್ನು ನಿರ್ವಹಿಸುವ ಮೂಲಕ ಮಿನಿ ಕ್ಯಾಂಪೂರಿ ಮುನ್ನಡೆಸುವರು. ಶಿಬಿರಾಥರ್ಿಗಳ ಪ್ರಮುಖ ಆಕರ್ಷಣೆಯಾದ ಸ್ಕೌಟ್-ಗೈಡ್ ಸಾಹಸಿಕ ಪ್ರದರ್ಶನಗಳಿಗೆ, ಸ್ವಾವಲಂಬೀ ಬದುಕು ನಿರೂಪಣೆ, ವ್ಯಕ್ತಿತ್ವ ನಿಮರ್ಾಣ, ರಾಷ್ಟ್ರಭಕ್ತಿ, ಅಶಕ್ತರ ನೆರವು, ತುತರ್ು ಸಂದರ್ಭಗಳ ನಿರ್ವಹಣೆ, ಚಾಣಾಕ್ಷತನದ ಮೂಲಕ ಸಂಘರ್ಷ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ, ಪ್ರದರ್ಶನಗಳ ಮಿನಿ ಕ್ಯಾಂಪೂರಿಗೆ ನಾಗರಿಕರು ಸಹಕರಿಸಬೇಕೆಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಕೌಟ್ಸ್ ಜಿಲ್ಲಾ ಕಮಿಶನರ್ ಗುರುಮೂತರ್ಿ ನಾಯ್ಕಾಪು, ಶಿಬಿರ ನಿರ್ವಹಣಾ ಸಮಿತಿ ಅಧ್ಯಕ್ಷ, ವಿದ್ಯಾಪೀಠದಾಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಶಿಬಿರ ನಿರ್ವಹಣಾ ಸಮಿತಿ ಖಜಾಂಜಿ ಚಂದ್ರಶೇಖರ, ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಪ್ರಚಾರ ಸಮಿತಿಯ ವಿಜಯಾ ಸುಬ್ರಹ್ಮಣ್ಯ ನಾರಾಯಣಮಂಗಲ, ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ ಉಪಸ್ಥಿತರಿದ್ದರು.
