HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮುಂದೂಡಲ್ಪಟ್ಟ ಹೆದ್ದಾರಿ ಚತುಷ್ಪಥ ಯೋಜನೆ- ತಲಪಾಡಿ - ಕಾಲಿಕಡವು ರಾ.ಹೆ.ಚತುಷ್ಪಥ ಯೋಜನೆ ಜನವರಿ ತಿಂಗಳಲ್ಲಿ ನಿಮರ್ಾಣ ಕಾಮಗಾರಿ ಚಾಲನೆ ಕುಂಬಳೆ: ಮಹತ್ವಾಕಾಂಕ್ಷೆಯ ತಲಪಾಡಿ-ಕಾಲಿಕಡವು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಕಾಮಗಾರಿ ಮುಂದಿನ ವರ್ಷ ಜನವರಿ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಬಾರಿ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದೆಂದು ಹೇಳುತ್ತಲೇ ಬಂದಿರುವ ರಾಜ್ಯ ಸರಕಾರ ಇದೀಗ ಜನವರಿ ತಿಂಗಳಲ್ಲಿ ಆರಂಭಿಸುವುದಾಗಿ ಹೇಳಿದೆ. ಈ ಯೋಜನೆಗೆ ಅಗತ್ಯದ ಆಥರ್ಿಕ ನೆರವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದೆಂದು ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಕೇರಳ ಸರಕಾರಕ್ಕೆ ಭರವಸೆ ನೀಡಿರುವುದರಿಂದ ಜನವರಿ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ಕಾಸರಗೋಡಿನಿಂದ ಕಾಲಿಕಡವಿನ ತನಕ ಮೂರು ಹಂತಗಳಲ್ಲಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಡೆಸಲು ತೀಮರ್ಾನಿಸಲಾಗಿದೆ. ಇದರಂತೆ ಮೊದಲ ಹಂತದಲ್ಲಿ ತಲಪಾಡಿಯಿಂದ ಚೆಂಗಳ ತನಕ, ದ್ವಿತೀಯ ಹಂತದಲ್ಲಿ ಚೆಂಗಳದಿಂದ ನೀಲೇಶ್ವರ ತನಕ ಮತ್ತು ಮೂರನೇ ಹಂತದಲ್ಲಿ ನೀಲೇಶ್ವರದಿಂದ ಕಾಲಿಕಡವಿನ ತನಕ ಚತುಷ್ಪಥ ರಸ್ತೆಯ ಕಾಮಗಾರಿ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಈ ಯೋಜನೆಯಂತೆ ತಲಪ್ಪಾಡಿಯಿಂದ ಚೆಂಗಳ ತನಕದ 39 ಕಿ.ಮೀಟರ್ ತನಕದ ರಸ್ತೆ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 44 ಹೆಕ್ಟೇರ್ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1270 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದೇ ರೀತಿ ಚೆಂಗಳ-ನೀಲೇಶ್ವರದ ಪಳ್ಳಿಕ್ಕೆರೆ ಮೇಲ್ಸೇತುವೆ ತನಕ 37 ಕಿ.ಮೀಟರ್ ದೂರದ ರಸ್ತೆ ನಿಮರ್ಾಣಯಕ್ಕೆ 42 ಹೆಕ್ಟೇರ್ ಭೂಮಿ ವಶಪಡಿಸಲಾಗಿದೆ. ಈ ಹಂತದ ನಿಮರ್ಾಣಕ್ಕೆ 1400 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದೇ ರೀತಿ ನೀಲೇಶ್ವರ ಮೇಲ್ಸೇತುವೆಯಿಂದ ಕಾಲಿಕಡವು ತನಕದ 6.917 ಕಿ.ಮೀಟರ್ ರಸ್ತೆಯ ಒಂದು ಭಾಗವನ್ನು ಕಣ್ಣೂರು ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ನೀಲೇಶ್ವರದಲ್ಲಿ ರೈಲ್ವೇ ಮೇಲ್ಸೇತುವೆ ನಿಮರ್ಾಣ ಕೆಲಸ ಈಗ ಪ್ರಗತಿಯಲ್ಲಿದೆ. ಇದರ ನಿಮರ್ಾಣ ಕೆಲಸಕ್ಕಾಗಿ 70 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಶೀಘ್ರ 3000 ಕೋಟಿ ರೂ. ನೀಡುವುದಾಗಿ ಕೇಂದ್ರ ಸಚಿವ ಗಡ್ಕರಿ ಈಗಾಗಲೇ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಗತ್ಯದ ಭೂಸ್ವಾಧೀನ ಪಡಿಸಿರುವ ವತಿಯಿಂದ ಭೂಮಿ ಕೊಡಬೇಕಾಗಿ ಬಂದ 450 ಮಾಲಕರಿಗೆ ನಷ್ಟ ಪರಿಹಾರವಾಗಿ 1200 ಕೋಟಿ ರೂ. ನೀಡಬೇಕಾಗಿ ಬರಲಿದೆ ಎಂದು ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಅಗತ್ಯದ ಭೂಮಿ ವಶಪಡಿಸುವ ವಿಭಾಗದ ಡೆಪ್ಯೂಟಿ ಕಲೆಕ್ಟರ್ ಕೆ.ಶಶಿಧರ ಶೆಟ್ಟಿ ಅವರ ನೇತೃತ್ವದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮುಂದುವರಿದ ಕಾಲಾವಧಿ: ಹೆದ್ದಾರಿ ಚತುಷ್ಪಥ ಯೋಜನೆಗೆ ವರ್ಷಗಳಿಂದ ಯೋಜನೆ ಸಿದ್ದಪಡಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಮಧ್ಯೆ ಡಿಸೆಂಬರ್ ತಿಂಗಳಲಲಿ ಯೋಜನೆಗೆ ಚಾಲನೆ ನೀಡಲಾಗುವುದೆಂದು ಹೇಳಲಾಗಿತ್ತು. ಆದರೆ ಇದೀಗ ಒಂದು ತಿಂಗಳು ತಡವಾಗಿ ಮುಂದಿನ ವರ್ಷ ಜನವರಿಗೆ ಕಾಮಗಾರಿ ಆರಂಭದ ಸೂಚನೆ ಲಭಿಸಿರುವುದು ಹಲವಾರು ಊಹಾಪೋಪಗಳಿಗೆ ಕಾರಣವಾಗಿದೆ. ಈ ಮಧ್ಯೆ ಭೂಸ್ವಾಧೀನ ಪ್ರಕ್ರಿಯೆಯಲಲಿ ಹೆದ್ದಾರಿಯ ಪರಿಸರದಲ್ಲಿ ಕಾಯರ್ಾಚರಿಸುವ ಅಂಗಡಿ ಮುಗ್ಗಟ್ಟುಗಳ ಸಂತ್ರಸ್ಥರಿಗೆ ಪರಿಹಾರ ನೀಡುತ್ತಿರುವ ಮಧ್ಯೆ ಅಂಗಡಿ ಅಥವಾ ವ್ಯಾಪಾರ ಸಂಕೀರ್ಣದ ಮಾಲಕರೂ ತಮಗೂ ವ್ಯಾಪಾರಿಗಳಷ್ಟೇ ಪರಿಹಾರ ನೀಡಬೇಕೆಮದು ಒತ್ತಾಯಿಸುತ್ತಿರುವುದೂ ತೊಡಕಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries