ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಕಿದೂರಿನಲ್ಲಿ ಬಡರ್್ ಫೆಸ್ಟ್
ಕುಂಬಳೆ: ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಹಾಗೂ ಕಾಸರಗೊಡು ಪಕ್ಷಿಪ್ರೇಮಿ ತಂಡದ ಜಂಟಿ ಆಶ್ರಯದಲ್ಲಿ ಕಿದೂರಿನಲ್ಲಿ ವಿಶಿಷ್ಟ ಬಡರ್್ ಫೆಸ್ಟ್-2018 ಕಾರ್ಯಕ್ರಮ ನ.10 ಹಾಗೂ 11 ರಂದು ಕಿದೂರು ಕುಂಟಂಗೇರಡ್ಕದ ರಾಜೀವ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನ.10 ರಂದು ಬೆಳಿಗ್ಗೆ ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಉದ್ಘಾಟಿಸುವರು. ಸಾಮಾಜಿಕ ಅರಣ್ಯ ಇಲಾಖೆಯ ಬಿಜು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಪ್ಲಾಸ್ಟಿಕ್ ಮುಕ್ತ ಗ್ರಾಮ ಪರಿಕಲ್ಪನೆಯಡಿ ಕುಂಟಂಗೇರಡ್ಕದ ನಾಗರಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಲಾಗುವುದು.
ರಾಷ್ಟ್ರದಲ್ಲೇ ಅಪೂರ್ವವಾದ ಕಿದೂರು ಕುಂಟಂಗೇರಡ್ಕ ಪರಿಸರದಲ್ಲಿ ಕಂಡುಬರುವ ಕೇಸರಿ ಕುತ್ತಿಗೆಯ ಹಸಿರು ಪಾರಿವಾಳಗಳಿಗಾಗಿ ಮರಗಳನ್ನು ಕತ್ತರಿಸಿದ ಉಳಿಸಿದ ಸ್ಥಳೀಯ ನಿವಾಸಿ ಅಬ್ದುಲ್ ರಹಿಮಾನ್, ಪ್ಲಾಸ್ಟಿಕ್ ಮಾಲಿನ್ಯದ ಕುರಿತು ನಾಗರಿಕರಿಗೆ ಅರಿವು ಮೂಡಿಸುತ್ತಿರುವ ರಾಧಾಕೃಷ್ಣ ಬೆಜಪ್ಪೆ, ಹಿರಿಯ ನಾಟಿ ವೈದ್ಯ ಚಿಕ್ಕಯ್ಯ ರೈ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.
ಪರಿಸರ ಸಂರಕ್ಷಣೆಯಲ್ಲಿ ಸಾಧನೆಗೈದ ಕುಂಬಳೆ ಹೋಲಿಫ್ಯಾಮಿಲಿ ಶಾಲಾ ವಿದ್ಯಾಥರ್ಿ ಪ್ರಣವ್ ಭಂಡಾರಿ,ಯುವ ಪರಿಸರ ಬರಹಗಾರ ರೋಶನ್ ಡಿಸೋಜಾ ಹಾಗೂ ಕೇಂದ್ರೀಯ ವಿವಿ ಪೆರಿಯ ಕಾಲೇಜಿಗೂ ಈ ಸಂದರ್ಭ ವಿಶೇಷ ಗೌರವಾಭಿನಂದನೆ ನಡೆಯಲಿದೆ. ಪಕ್ಷಿಪ್ರೇಮಿ ರಾಜು ಮಾಸ್ತರ್ ಕಿದೂರು ಸಮಾರಂಭದ ನೇತೃತ್ವ ವಹಿಸಿರುವರು.




