ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2018
ನ.14ರಂದು ಕುರುಡಪದವು ಮಂದಿರದ ನೂತನ ದ್ವಾರ ಶಿಲಾನ್ಯಾಸ
ಉಪ್ಪಳ: ಕುರುಡಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ದ್ವಾರ ಸ್ಥಾಪನೆ ಕಾರ್ಯಕ್ರಮದ ಅಂಗವಾಗಿ ನ.14ರಂದು ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ವಿಧಿ ವಿಧಾನಗಳು ಜರಗಲಿವೆ. ಅಂದು ಬೆಳಗ್ಗೆ 9ಗಂಟೆಗೆ ನೂತನ ದ್ವಾರದ ಶಿಲಾನ್ಯಾಸ ಕಾರ್ಯಕ್ರಮವು ನೆರವೇರಲಿದೆ.
10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಅಧ್ಯಕ್ಷತೆ ವಹಿಸುವರು. ವಿವಿಧ ವಲಯಗಳ ಹಲವಾರು ಮಂದಿ ಗಣ್ಯರು ಉಪಸ್ಥಿತರಿರುವರು.




