ಮಂಜೇಶ್ವರ: ಪವಿತ್ರ ಉಮ್ರಾಕ್ಕಾಗಿ ಸೌದಿಗೆ ಬರುವ ದುಬೈ ಕೆಎಂಸಿಸಿ ಮಂಜೇಶ್ವರ ಕ್ಷೇತ್ರ ಉಪಾಧ್ಯಕ್ಷ ಗ್ರೀನ್ ಹೌಸ್ ಅಸೋಸಿಯೇಸನ್ ಅಧ್ಯಕ್ಷ ಝುಬೈರ್ ಕುಬಣೂರು ಅವರಿಗೆ ಕೆಎಂಸಿಸಿ ಜಿದ್ದ ಮಕ್ಕ ಮಂಜೇಶ್ವರ ಸಮಿತಿ ಸ್ವಾಗತ ನೀಡಿತು.
ಶರಫಿಯ ಅಲ್ ಫಜರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ಸಮಿತಿ ಕೋಶಾಧಿಕಾರಿ ಅನ್ವರ್ ಚೇರಂಗೈ ಉದ್ಘಾಟಿಸಿದರು. ಇಬ್ರಾಹಿಂ ಇಬ್ಬು ಸಾಹಿಬ್ ಅಧ್ಯಕ್ಷತೆ ವಹಿಸಿದ್ದರು. ಹಸನ್ ಬತ್ತೇರಿ, ಅಬ್ದುಲ್ಲ ಹಿಟ್ಟಾಚಿ, ಎಂಜಿನಿಯರ್ ಅಬ್ದುಲ್ಲ ಮುಹಮ್ಮದ್, ಉಮರ್ ಹಾಜಿ, ಬಶಿರ್ ಚಿತ್ತಾರಿ, ಹಮೀದ್ ಇಚ್ಲಂಗೋಡು ಉಪಸ್ಥಿತರಿದ್ದರು. ಒಐಸಿಸಿ ನೇತಾರ ಎಂ. ಅಬ್ದು ಪೆರ್ಲ ಸ್ವಾಗತಿಸಿ, ಮುಷ್ತಾಕ್ ಎಂ. ಪಿ. ವಂದಿಸಿದರು.


