ಕಾಸರಗೋಡು: ವಿವಾಹ ಸಂಬಂಧ ಲಭಿಸಿದ ಉಡುಗೊರೆಗಳ ಪಟ್ಟಿ ಮತ್ತುವಿವಾಹಪೂರ್ವ ಕೌನ್ಸಿಲಿಂಗ್ ಸಟರ್ಿಫಿಕೆಟ್ ದಾಖಲಾಗುವಂತೆ ಕ್ರಮಕೈಗೊಳ್ಳಳು ಆಗ್ರಹ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಆಯೋಗ ಅದಾಲತ್ನಲ್ಲಿ ಆಯೋಗ ಸದಸ್ಯೆ ಡಾ.ಶಾಹಿದಾ ಕಮಾಲ್ ಈ ವಿಚಾರ ಪ್ರಸ್ತಾಪಿಸಿದರು.
ದಂಪತಿ ವಿವಾಹಪೂರ್ವ ಕೌನ್ಸಿಲಿಂಗ್ನಲ್ಲಿ ಹಾಜರುಪಡಿಸಿದ್ದ ದಾಖಲೆಗಳು, ವಿವಾಹ ವೇಳೆ ಇಬ್ಬರಿಗೂ ಲಭಿಸಿದ ಉಡುಗೊರೆಗಳ ಪಟ್ಟಿಗಳನ್ನು ನೋಂದಣಿ ವೇಳೆ ದಾಖಲಿಸುವ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಆಯೋಗದ ಮುಂದೆ ಮಂಡಿಸಲಾದ ಬಹುತೇಕ ದೂರುಗಳು ದಂಪತಿ ಮಧ್ಯೆ ತಲೆದೋರಿದ ಸಮಸ್ಯೆಗಳಾಗಿದ್ದು,
ಇವುಗಳಲ್ಲಿ ವಿವಾಹ ವೇಳೆ ಲಭಿಸಿದ್ದ ಉಡುಗೊರೆ ಸಂಬಂದಿತ ತಗಾದೆಗಳು ವಿಳಂಬಕ್ಕೆ ಕಾರಣವಾಗುತ್ತಿರುವುದಾಗಿಯೂ ಆಯೋಗ ತಿಳಿಸಿದೆ. ವಿವಾಹಪೂರ್ವ ಕೌನ್ಸಿಲಿಂಗ್ನಲ್ಲಿ ಭಾಗವಹಿಸಿದವರಲ್ಲಿ ನಂತರದ ದಾಂಪತ್ಯಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂತಹ ಮುಂಜಾಗರೂಕತೆ ಬೇಕು ಎಂದು ಡಾ.ಶಾಹಿದಾ ಕಮಾಲ್ ಹೇಳಿದರು.
ದಂಪತಿ ತಗಾದೆ ಸಂಬಂಧ ಪ್ರಕರಣಗಳನ್ನು ಬೇಗನೆ ಪರಿಹರಿಸುವ ನಿಟ್ಟಿನಲ್ಲಿ ಈ ರೀತಿಯ ದಾಖಲೆಗಳು ಸಹಕಾರಿಯಾಗಿವೆ. ಈಗ ಆಯೋಗದ ಮುಂದೆ ಸಲ್ಲಿಕೆಯಾಗುವ ಪ್ರಕರಣಗಳಲ್ಲಿ ಉಡುಗೊರೆ ಲಭಿಸಿರುವ ಕುರಿತಾದ ನಿಖರ ದಾಖಲೆಗಳು ಇಲ್ಲದೇ ಇರುವುದು ಸಮಸ್ಯೆಯಾಗುತ್ತಿದೆ. ವಿವಾಹ ನೋಂದಣಿ ವೇಳೆ ಉಡುಗೊರೆಗಳ ಪಟ್ಟಿ ಸ್ಪಷ್ಟವಾಗಿ ದಾಖಲಿಸಿದರೆ ಮುಂದೆ ಸಮಸ್ಯೆಗಳು ಕಂಡುಬಂದಲ್ಲಿ ಪರಿಹಾರ ಸುಲಭ ಸಾಧ್ಯ ಎಂದವರು ತಿಳಿಸಿದರು.
ಒಟ್ಟು 33 ಪ್ರಕರಣಗಳನ್ನು ಆಯೋಗ ಪರಿಶೀಲನೆ ನಡೆಸಿದ್ದು,
12 ದೂರುಗಳನ್ನು ಸಂಧಾನ ಮೂಲಕ ಬಗೆಹರಿಸಲಾಗಿದೆ. 6 ಪ್ರಕರಣಗಳಲ್ಲಿ ಪೊಲೀಸರ ವರದಿ ಆಗ್ರಹಿಸಲಾಗಿದೆ.
ಮೂರು ದೂರುಗಳನ್ನು ಆರ್ಡಿಒರ ವರದಿ ಕೋರಲಾಗಿದೆ.
10 ದೂರುಗಳನ್ನು ಮುಂದಿನ ಆಯೋಗದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಲೀಗಲ್ ಪ್ಯಾನೆಲ್ ಸದಸ್ಯೆಯರಾದ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, ನ್ಯಾಯವಾದಿ ಎ.ಪಿ.ಉಷಾ,
ನ್ಯಾಯವಾದಿ ಕೆ.ಎಂ.ಬೀನಾ, ಮಹಿಳಾ ಘಟಕದ ಎಸ್ಐ ಎಂ.ಜೆ.ಎಲ್ಸಮ್ಮ,
ಸಿಪಿಒ ಪಿ.ವಿ.ಗೀತಾ, ಕೌನ್ಸಿಲರ್ ಎಸ್.ರಮ್ಯಾಮೋಳ್ ಮೊದಲಾದವರು ಉಪಸ್ಥಿತರಿದ್ದರು.


