ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2018
ಮನೆ ಮನೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ
`ಹಚ್ಚೇವು ಕನ್ನಡದ ದೀಪ'
ಕಾಸರಗೋಡು: ಕನರ್ಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಇದರ ಕಾಸರಗೋಡು ಘಟಕದ ಮನೆ ಮನೆಗಳಲ್ಲಿ ಸುಗಮ ಸಂಗೀತ `ಹಚ್ಚೇವು ಕನ್ನಡದ ದೀಪ' ಕಾರ್ಯಕ್ರಮವು ನಾಯಕ್ಸ್ ರಸ್ತೆಯಲ್ಲಿರುವ ಪದ್ಮಾವತಿ ಎಸ್.ರಾವ್ ಅವರ ಮನೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಡಾ.ಬಿ.ಎಸ್.ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಘಟಕದ ಸದಸ್ಯರು `ಸುಂದರ ಈ ನಾಡು', `ಮಣ್ಣಾದರೆ ಕನ್ನಡ ನಾಡಲ್ಲಿ ಮಣ್ಣಾಗು' ಸಮೂಹ ಗಾಯನದಲ್ಲಿ ಹಾಡಿದರು.
ಘಟಕದ ಅಧ್ಯಕ್ಷೆ ಶಾಹಿರತ್ನ ಬಾಲಕೃಷ್ಣ, ಸಂಚಾಲಕರಾದ ರಾಧಾ ಮುರಳೀಧರ, ಕೋಶಾಧಿಕಾರಿ ಲೀಲಾಧರ ಅಶೋಕನಗರ, ಪ್ರಧಾನ ಕಾರ್ಯದಶರ್ಿ ದಿವಾಕರ ಪಿ.ಅಶೋಕನಗರ, ಪದ್ಮಾವತಿ ಬಿ.ಎಸ್.ರಾವ್, ಸರೋಜಿನಿ ಕೃಷ್ಣ ಭಟ್, ಪದ್ಮಾವತಿ ಪಿ.ಖಂಡಿಗೆ, ಭಾರತಿ ಬಾಬು, ಮಾಲತಿ ಜಗದೀಶ್, ಹರಿಣಾಕ್ಷಿ, ಪ್ರಣಾಮ್ ಚಂದ್ರ ಆಚಾರ್ಯ ಮೊದಲಾದವರು ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ, ವಚನ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಡಾ.ಮಧುಬಾಲ, ದೇವಕಿ ಭಟ್, ಜಯಶ್ರೀ ದಿವಾಕರ್, ಸಂಚಾಲಕರಾದ ಉಮೇಶ್ ಎಂ.ಸಾಲ್ಯಾನ್ ಉಪಸ್ಥಿತರಿದ್ದರು.




