ಬದಿಯಡ್ಕ: ಬದಿಯಡ್ಕ ಪಂಚಾಯತು ಬಂಟರ ಸಂಘದವಾಷರ್ಿಕ ಮಹಾಸಭೆ ಬದಿಯಡ್ಕದಲ್ಲಿರುವ ಕುಂಬಳೆಫಿಕರ್ಾ ಕಾಯರ್ಾಲಯದಲ್ಲಿ ಇತ್ತೀಚೆಗೆ ನಡೆಯಿತು.
ಬಂಟರ ಸಂಘದ ಬದಿಯಡ್ಕ ಪಂಚಾಯತು ಘಟಕದ ಉಪಾಧ್ಯಕ್ಷ ಗಿರೀಶ್ ರೈ ವಳಮಲೆ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು ಅವರು, ಸಂಘದಭಿವೃದ್ದಿಗೆಪ್ರತಿಯೊಬ್ಬರೂ ನಿಸ್ವಾರ್ಥ ಸೇವೆಗೈಯ್ಯುವ ಅಗತ್ಯವಿದೆ. ರಾಜಕೀಯ ರಹಿತರಾಗಿ ಸಂಘಟನೆಯ ಉನ್ನತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕುಂಬಳೆ ಫಿಕರ್ಾದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಮಾತನಾಡಿ, ಸಂಘಟನೆಯ ಮೇಲೆ ನಿಷ್ಠೆ, ಸೇವಾ ಮನೋಭಾವ, ಸಮಯ ಪ್ರಜ್ಞೆಯೊಂದಿಗೆ ಸಹಕರಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಕುಂಬಳೆ ಫಿಕರ್ಾದ ಕಾರ್ಯದಶರ್ಿ ಅಶೋಕ ರೈ ಕೊರೆಕ್ಕಾನ, ಕೋಶಾಧಿಕಾರಿ ಬಿ.ಎಸ್.ಗಾಂಭೀರ್ ಉಪಸ್ಥಿತರಿದ್ದು ಶುಭಹಾರೈಸಿದರು. ಮಹಿಳಾ ಘಟಕದ ಅಧ್ಯಕ್ಷೆ ವಿನಯಾ ಜೆ.ರೈ, ಕೃಷ್ಣ ಪ್ರಸಾದ್ ರೈ, ಮಾತೃಸಮಿತಿ ಪದಾಧಿಕಾರಿಗಳು, ಕಾರ್ಯದಶರ್ಿ, ಕಾರ್ಯಕಾರಿ ಸಮಿತಿ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಾರ್ಯದಶರ್ಿ ರವೀಂದ್ರನಾಥ ಶೆಟ್ಟಿ ಸ್ವಾಗತಿಸಿ, ವರದಿ ಮಂಡಿಸಿದರು. ಕೋಶಾಧಿಕಾರಿ ನಿರಂಜನ ರೈ ಪೆರಡಾಲ ವಂದಿಸಿದರು. ಈ ಸಂದರ್ಭ ನೂತನ ಸಮಿತಿಯ ಆಯ್ಕೆ ನಡೆಯಿತು. ರವೀಂದ್ರನಾಥ ಶೆಟ್ಟಿ ವಳಮಲೆ(ಅಧ್ಯಕ್ಷ), ಜಯಶಂಕರ ರೈ ಬೇಳ, ಜಗನ್ನಾಥ ಶೆಟ್ಟಿ ಕೊರೆಕ್ಕಾನ(ಉಪಾಧ್ಯಕ್ಷರು),ನಿರಂಜನ ರೈ ಪೆರಡಾಲ(ಪ್ರಧಾನ ಕಾರ್ಯದಶರ್ಿ), ಗಿರೀಶ್ ರೈ, ದಯಾನಂದ ರೈ ಕಡಾರು(ಜೊತೆ ಕಾರ್ಯದಶರ್ಿಗಳು), ಪ್ರಭಾಕರ ರೈ ಕಡಾರು(ಖಜಾಂಜಿ) ಹಾಗೂ ಏಳುಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


