ಮಂಜೇಶ್ವರ: ವಕರ್ಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.12 ಮತ್ತು 13 ರಂದು ನಡೆಯಲಿರುವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ವಕರ್ಾಡಿ ದಿನೇಶ ಕೃಷ್ಣ ತಂತ್ರಿಗಳು ಬಿಡುಗಡೆಗೊಳಿಸಿದರು.
ಆಡಳಿತ ಮೊಕ್ತೇಸರ ದುಗರ್ಾದಾಸ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಉತ್ಸವದ ಅಂಗವಾಗಿ ಡಿ.7 ರಂದು ಅಮಾವಾಸ್ಯೆ ರಂಗಪೂಜೆ, ಡಿ.12 ರಂದು ಪಂಚಮಿ ಉತ್ಸವ, 13 ರಂದು ತುಲಾಭಾರ, ಚಂಪಾ ಷಷ್ಠಿ, ರಾತ್ರಿ ಬಳಿ ಉತ್ಸವ ಮತ್ತು 14 ರಂದು ಸಪ್ತಮಿ ಉತ್ಸವ ಜರಗಲಿದೆ.


