ಮಹಿಳಾ ಗೋಡೆ: 12ರಂದು ಸಭೆ
0
ಡಿಸೆಂಬರ್ 08, 2018
ಕಾಸರಗೋಡು: ಮಹಿಳೆಯರು-ಪುರುಷರು ಸಮಾನರು, ಆಧುನಿಕ ಚಿಂತನೆ ಮೌಲ್ಯಗಳು ಇತ್ಯಾದಿ ವಿಚಾರಗಳಿಗೆ ಆದ್ಯತೆ ನೀಡಿ 2019 ಜನವರಿ ಒಂದರಿಂದ ಕಾಸರಗೋಡಿನಲ್ಲಿ ಆರಂಭಿಸಿ ತಿರುವನಂತಪುರಂ ವರೆಗೆ ನಡೆಯುವ "ಮಹಿಳಾ ಗೋಡೆ' ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾ ಮಟ್ಟದ ಸಂಘಟಕ ಸಮಿತಿ ಸಭೆ ಡಿ.12ರಂದು ಬೆಳಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಪ್ರಧಾನ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. 11 ಗಂಟೆಗೆ ನಡೆಯುವ ಸಭೆಯಲ್ಲಿ ಸೇವಾ ಸಂಘಟನೆಗಳ ಪ್ರತಿನಿಧಿಗಳು, 11.30ಕ್ಕೆ ನಡೆಯುವ ಸಭೆಯಲ್ಲಿ ಎನ್.ಆರ್.ಜಿ.ಎಸ್., ಪರಿಶಿಷ್ಟ ಜಾತಿ-ಪಂಗಡ, ಕುಟುಂಬಶ್ರೀ, ಆಶಾ-ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಹಕಾರಿ ಸಂಘಟನೆಗಳ ಪ್ರತಿನಿಧಿಗಳು, 12 ಗಂಟೆಗೆ ನಡೆಯುವ ಸಭೆಯಲ್ಲಿ ಜಿಲ್ಲಾ ಶಿಕ್ಷಣ ನಿರ್ದೇಶಕ, ಕಾಲೇಜು ಡಿ.ಸಿ. ಪ್ರತಿನಿಧಿಗಳೂ, ಯುವಜನ ಕಮೀಷನ್, ಯುವಜನ ಸಂಘಟನೆಗಳ ಪ್ರತಿನಿಧಿಗಳು, 12.30ರಿಂದ ಸಾಮಾಜಿಕಕಾರ್ಯಕರ್ತರು ಭಾಗವಹಿಸುವಂತೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.




