ಹರಿತ ಕೇರಳಂ ಮಿಷನ್ ಮೂರನೇ ವರ್ಷಾಚರಣೆಗೆ ನಾಂದಿ ಚಿತ್ತಾರಿ ನದಿತಟ ಶುಚೀಕರಣ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ
0
ಡಿಸೆಂಬರ್ 08, 2018
ಕಾಸರಗೋಡು: ಹರಿತ ಕೇರಳಂ ಮಿಷನ್ ನ ಮೂರನೇ ವರ್ಷಾಚರಣೆಯ ನಾಂದಿ ಶನಿವಾರ ವಿಶಿಷ್ಟರೂಪದಲ್ಲಿ ಜರುಗಿತು. ಜಿಲ್ಲೆಯ ಅಳ್ಳಂಗೋಡು ಚಿತ್ತಾರಿನದಿ ದಡದಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶುಚೀಕರಣ ಮೂಲಕ ನದಿಯನ್ನು ಸಂರಕ್ಷಿಸುವ ಕಾಯಲದ ಮೂಲಕ ಸಾರ್ಥಕವವಾಗಿ ಈ ವಾರ್ಷಿಕೋತ್ಸವ ಸರಣಿಗೆ ಚಾಲನೆ ಲಭಿಸಿದೆ. "ಜಲಜೀವನಂ ಅತಿಜೀವನತ್ತಿನ್(ಜಲ ಕ್ಷಾಮ ಪರಿಹಾರಕ್ಕೆ ಇರುವ ಜಲದೊಂದಿಗೆ ಸಾರ್ಥಕ ಜೀವನ ನಡೆಸುವ)" ಎಂಬ ಘೋಷಣೆಯೊಂದಿಗೆ ಜಿಲ್ಲೆಯ ಎಲ್ಲ ಸ್ಥಖಳೀಯಾಡಳಿತ ಸಂಸ್ಥೆಗಳಲ್ಲಿ ಶನಿವಾರದಿಂದ ಡಿ.15 ವರೆಗೆ ತಲಾ ಒಂದು ಜಲಾಶಯವನ್ನು ಸಂರಕ್ಷಿಸುವ ಮೂಲಕ ಜಲಸಂರಕ್ಷಣೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು, ಸಾರ್ವಜನಿಕರು ಶ್ರಮದಾನ ನಡೆಸುವ ಮೂಲಕ ಚಿತ್ತಾರಿ ನದಿತಟಿಯನ್ನು ಶುಚೀಕರಣಗೊಳಿಸಿದರು. ಸ್ಥಳೀಯಾಡಳೀತ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಮತಭೇದ ಮರೆತು ಈ ಕಾಯಕಕ್ಕೆ ಕೈಜೋಡಿಸಿದ್ದರು.
ಸಭಾ ಕಾರ್ಯಕ್ರಮ: ಕಾಞಂಗಾಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಈ ಸಂಬಂಧ ಜರುಗಿದ ಸಭೆಯನ್ನು ಉದ್ಘಾಟಿಸಿದರು. ಅಜಾನೂರು ಗ್ರಾಮಪಂಚಾಯತ್ ಅಧ್ಯಕ್ಷ ವಿ.ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್, ವಿವಿಧ ವಲಯಗಳ ಪ್ರತಿನಿಧಿಗಳಾದ ಕುನ್ನತ್ ಕರುಣಾಕರನ್, ಚೇರಾಕುಂಡ್ ಕುಂಞÂಕಣ್ಣನ್, ಎಂ.ಕುಂಞಂಬು, ಬಿ.ಬಾಲಕೃಷ್ಣನ್, ವಿ.ಕುಂಞÂರಾಮನ್ ಮಾಸ್ಟರ್, ಕೆ.ನಾರಾಯಣನ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ಅಶೋಕ್ ಕುಮಾರ್ ವಿ.ವಿ.ಪರಿಸರ ಇಲಾಖೆ ಅಧಿಕಾರಿ ಪಿ.ಮುರಳಿ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಹರಿತ ಕೇರಳಂ ಜಿಲ್ಲಾ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸ್ವಾಗತಿಸಿದರು. ಸುರೇಶ್ ಕಸ್ತೂರಿ ವಂದಿಸಿದರು.






