ಮಾಡತ್ತಡ್ಕದಲ್ಲಿ ಅಖಂಡ ಭಜನೆಗೆ ಚಾಲನೆ
0
ಡಿಸೆಂಬರ್ 08, 2018
ಬದಿಯಡ್ಕ: ನೀರ್ಚಾಲು ಮಾಡತ್ತಡ್ಕ ಶ್ರೀ ದೈವಗಳ ಸೇವಾ ಸಮಿತಿ ಹಾಗೂ ಶ್ರೀ ಹರಿಹರ ಭಜನ ಮಂದಿರದಲ್ಲಿ, ಶ್ರೀ ಮಂದಿರ ಉದ್ಘಾಟನೆಗೊಂಡು 26 ಸಂವತ್ಸರಗಳನ್ನು ಪೂರೈಸಿರುವ ಶುಭ ಸಂದರ್ಭದಲ್ಲಿ ಹಮ್ಮಿಕೊಂಡ ಅಖಂಡ ಭಜನೆಗೆ ಹಿರಿಯರಾದ ಸರಳಿ ಶ್ಯಾಮಭಟ್ ಶುಕ್ರವಾರ ದೀಪ ಬೆಳಗಿಸಿ ಚಾಲನೆ ನೀಡಿದರು. ವೇ.ಮೂ. ವಿಷ್ಣುಶರ್ಮ ಅಣಬೈಲು ಗಣಪತಿ ಹೋಮ ನಡೆಸಿಕೊಟ್ಟರು. ಹಿರಿಯರಾದ ಗೋವಿಂದ ಭಟ್ ಮಿಂಚಿನಡ್ಕ, ಅಯ್ಯಪ್ಪ ವ್ರತಧಾರಿಗಳು, ಭಕ್ತಾದಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.
ನಂತರ ವಿವಿಧ ಭಜನ ಸಂಘಗಳಿಂದ ಭಜನೆ ಆರಂಭವಾಯಿತು. ಶ್ರೀ ಹರಿಹರ ಭಜನ ಸಂಘ ಮಾಡತ್ತಡ್ಕ, ಶ್ರೀ ವಿಶ್ವಕರ್ಮ ಭುವನೇಶ್ವರಿ ಭಜನ ಸಂಘ ವಾಂತಿಚ್ಚಾಲು, ಶ್ರೀ ಧರ್ಮಶಾಸ್ತಾ ಭಜನ ಸಂಘ ನೀರ್ಚಾಲು, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನ ಸಂಘ ಕುಮಾರಮಂಗಲ, ಶ್ರೀ ವೃಂದಾವನ ಮಹಿಳಾ ಭಜನ ಸಂಘ ಮಾಡತ್ತಡ್ಕ, ಶ್ರೀ ಮಹಾವಿಷ್ಣು ಭಜನ ಸಂಘ ಮುಂಡಿತ್ತಡ್ಕ, ಶ್ರೀಮಾತಾ ಹವ್ಯಕ ಭಜನ ಸಂಘ ಬದಿಯಡ್ಕ, ಶ್ರೀ ಆರ್ಟ್ ಆಫ್ ಲಿವಿಂಗ್ ಕಾಸರಗೋಡು, ಶ್ರೀ ಕುದುರೆಕ್ಕಾಳಿ ಅಮ್ಮ ಭಜನ ಸಂಘ ರತ್ನಗಿರಿ, ಕುಮಾರಸ್ವಾಮಿ ಭಜನ ಸಂಘ ನೀರ್ಚಾಲು, ಶ್ರೀ ಅನ್ನಪೂರ್ಣೇಶ್ವರಿ ಭಜನ ಸಂಘ ಕುಂಟಿಕಾನ ಮಠ ಮೊದಲಾದ ಸಂಘಟನೆಗಳು ಭಜನ ಸೇವೆಯನ್ನು ನಡೆಸಿಕೊಟ್ಟರು. ರಾತ್ರಿ ಕುಂಟಿಕಾನ ಹರಿಶ್ರೀ ಬಾಲಗೋಕುಲ ಇವರಿಂದ ನೃತ್ಯ ವೈವಿಧ್ಯ, ಕಲಾರತ್ನ ಶಂ.ನಾ. ಅಡಿಗ ಕುಂಬಳೆ ಇವರಿಂದ `ಸೀತಾಕಲ್ಯಾಣ'ಹರಿಕಥೆ ಪ್ರಸ್ತುತಗೊಂಡಿತು.






