14ರಿಂದ ಪಾವಂಜೆಯಲ್ಲಿ ಶೇಣಿ ಶತಕ ಸರಣಿ : ಮೂರು ದಿನಗಳ ತಾಳಮದ್ದಳೆ
0
ಡಿಸೆಂಬರ್ 10, 2018
ಕಾಸರಗೋಡು : ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ನೇತೃತ್ವದಲ್ಲಿ ನಡೆಯುತ್ತಿರುವ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಮೂರು ದಿನಗಳ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಶೇಣಿ ಶತಕ ಸರಣಿ-10 ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.14,15,16ರಂದು ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಸಹಕಾರದೊಂದಿಗೆ ಪ್ರತಿದಿನ ಸಂಜೆ 5ರಿಂದ ರಾತ್ರಿ 8 ಗಂಟೆ ವರೆಗೆ ಜರುಗಲಿದೆ.
14ರಂದು ಸಂಜೆ ಜರುಗುವ ಸಭಾಕಾರ್ಯಕ್ರಮದಲ್ಲಿ ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಶೇಣಿ ಸಂಸ್ಮರಣೆ ನಡೆಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಬಾರ್ ಸಮೊ ಉಪಸ್ಥಿತರಿರುವರು.
ನಂತರ "ಕೃಷ್ಣ ಸಾರಥ್ಯ" ಪ್ರಸಂಗದ ತಾಳಮದ್ದಳೆ ಜರುಗಲಿದ್ದು, ಹಿಮ್ಮೇಳದಲ್ಲಿ ನಿಡುವಜೆ ಪುರುಷೋತ್ತಮ ಭಟ್, ನೆಕ್ಕರೆಮೂಲೆ ಗಣೇಶ್ ಭಟ್, ಅಪೂರ್ವ ಸುರತ್ಕಲ್, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೊ, ವಿನಯ ಆಚಾರ್ ಹೊಸಬೆಟ್ಟು ಭಾಗವಹಿಸುವರು. ಡಿ.15ರಂದು "ಗಂಗಾಸಾರಥ್ಯ" ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಶಾಂತ ರೈ ಪುತ್ತೂರು, ಕೃಷ್ಣರಾಜ ನಂದಳಿಕೆ, ಯೋಗೀಶ ಉಳಯಪ್ಪಾಡಿ, ಮುಮ್ಮೇಳದಲ್ಲಿ ಪಶುಪತಿ ಶಾಸ್ತ್ರಿ ಶಿರಂಕಲ್ಲು, ಪನೆಯಾಲ ರವಿರಾಜಭಟ್, ದಿನೇಶ್ ಶೆಟ್ಟಿ ಕಾವಳಕಟ್ಟೆ ಪಾಲ್ ಗೊಳ್ಳುವರು. ಡಿ.16ರಂದು "ಶಲ್ಯಸಾರಥ್ಯ" ಪ್ರಸಂಗದ ತಾಳಮದ್ದಳೆ ಪ್ರಸ್ತುಗೊಳ್ಳಲಿದ್ದು, ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್, ಪೆರುವಾಯಿ ನಾರಾಯಣ ಭಟ್, ಬಿ.ಜನಾರ್ದನ ತೋಳ್ಫಡಿತ್ತಾಯ, ಮುಮ್ಮೇಳದಲ್ಲಿ ವಿಷ್ಣಶರ್ಮ ವಾಟೆಪಡ್ಪು, ವಸಂತ ದೇವಾಡಿಗ, ಶೇಣಿ ವೇಣುಗೋಪಾಲ ಭಟ್ ಭಾಗವಹಿಸುವರು.





