ಮತ್ತೆ ಟ್ವಿಟರ್ ಸಿಇಓ ವಿವಾದದಲ್ಲಿ- ಮಯನ್ಮಾರ್ ಬಗ್ಗೆ ಟ್ವೀಟ್ ಮಾಡಿ ವಿವಾದ
0
ಡಿಸೆಂಬರ್ 10, 2018
ಇಗ್ಲೆಂಡ್: ಇತ್ತೀಚೆಗಷ್ಟೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟರ್ ನ್ನು ಹಿಡಿದು ವಿವಾದಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಈಗ ಮತ್ತೊಮ್ಮೆ ಇಂಥಹದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಮಯನ್ಮಾರ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಹೊರತಾಗಿಯೂ ಟ್ವಿಟರ್ ಸಿಇಒ ಮಯನ್ಮಾರ್ ನ್ನು ಪ್ರವಾಸಿ ತಾಣವನ್ನಾಗಿ ಪ್ರಮೋಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಾವು ಮಯನ್ಮಾರ್ ಗೆ ತೆರಳಿದ್ದ ಅನುಭವವನ್ನು ಹಂಚಿಕೊಂಡಿರುವ ಜಾಕ್ ಡೊರ್ಸೆ, ಇಲ್ಲಿನ ಜನ ಸಂತಸದಿಂದ ಇದ್ದಾರೆ, ಆಹಾರ ಅತ್ಯುತ್ತಮವಾಗಿದೆ ಎಂದು ಹೇಳಿದ್ದು ಜನತೆಗೆ ಮಯನ್ಮಾರ್ ಗೆ ಭೇಟಿ ನೀಡಲು ಉತ್ತೇಜನ ನೀಡಿದ್ದಾರೆ.
ಟ್ವಿಟರ್ ಸಿಇಒ ಟ್ವೀಟ್ ಗೆ ಭಾರಿ ವಿರೋಧವ್ಯಕ್ತವಾಗಿದ್ದು, ಮುಸ್ಲಿಮ್ ರೋಹಿಂಗ್ಯನ್ನರ ಸಂಕಷ್ಟವನ್ನು ನಿರ್ಲಕ್ಷಿಸುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.





