ಕೃಷಿ ಸಂಚಾಯಿ ಯೋಜನೆ: ಕಾರಡ್ಕ ಬ್ಲೋಕ್ ಗೆ 3.20 ಲಕ್ಷ ರೂ.ಮಂಜೂರು
0
ಡಿಸೆಂಬರ್ 26, 2018
ಕಾಸರಗೋಡು: ಕೇಂದ್ರ ಸರಕಾರಿ ಯೋಜನೆಯಾಗಿರುವ ಪ್ರಧಾನಿ ಕೃಷಿ ಸಿಂಚಾಯಿ ಯೋಜನ ನೀರಾವರಿ ಘಟಕ ವ್ಯಾಪ್ತಿಯಲ್ಲಿ 2018-19 ವರ್ಷಕ್ಕೆ ಕಾರಡ್ಕ ಬ್ಲಾಕ್ ಪಂಚಾಯತಿಗೆ 3.20 ಲಕ್ಷ ರೂ. ಮಂಜೂರು ಮಾಡಲಾಗಿದೆ.
ವಾರ್ಷಿಕ ಕ್ರಿಯಾ ಯೋಜನೆ ಜಾರಿ ಸಂಬಂಧ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಬುಧವಾರ ನಡೆಸಿದ ಕಾರ್ಯಾಗಾರದಲ್ಲಿ ಈ ವಿಚಾರ ಪ್ರಕಟಿಸಲಾಯಿತು. ಕಾರ್ಯಾಗಾರವನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿದರು.
ಕೃಷಿ ಅಗತ್ಯಕ್ಕಾಗಿ ಕೆರೆ -ಕಿರು ಅಣೆಕಟ್ಟು ನಿರ್ಮಾಣ, ತೋಡುಗಳ ಬದಿ ಸಂರಕ್ಷಣೆ, ಮಣ್ಣು-ಜಲ ಸಂರಕ್ಷಣೆ ಚಟುವಟಿಕೆಗಳು, ಕೆರೆಗಳ ನಿರ್ಮಾಣ, ಭೂಗರ್ಭ ಜಲ ಮಟ್ಟ ಹೆಚ್ಚಳ ಇತ್ಯಾದಿ ಯೋಜನೆಗಳಿಗಾಗಿ ಮೊಬಲಗು ಮಂಜೂರಾಗಿದೆ. ಬೇಡಡ್ಕ, ಮುಳಿಯಾರು ಗ್ರಾಮಪಂಚಾಯತಿಗಳ 15 ನೀರಾವರಿ ಸಮಿತಿಗಳಿಗೆ ನಿರ್ವಹಣೆಯ ಹೊಣೆ ನೀಡಲಾಗಿದೆ. ಜಿಲ್ಲಾ ನೀರಾವರಿ ಯೋಜನೆ ಪ್ರಕಾರ ಪಿ.ಎಂ.ಕೆ.ಎಸ್.ವೈಯ ರಾಜ್ಯ ಮಟ್ಟದ ಮಂಜೂರು ಸಮಿತಿ ಈ ಅನುಮತಿ ನೀಡಿದೆ ಎಂದು ತಿಳಿಸಲಾಯಿತು.
ಬೇಡಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ನ್ಯಾಯವಾದಿ ಡಿ.ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ನಿರ್ದೇಶಕ ವಿ.ಕೆ.ದಿಲೀಪ್, ತಾಂತ್ರಿಕ ಪರಿಣತ ಎಂ.ಭಾಸ್ಕರನ್, ಬ್ಲಾಕ್ ಅಭಿವೃದ್ಧಿ ಅಧಿಕಾರಿ ಬಿ.ಬಾಲಕೃಷ್ಣ, ಸೆರಿ ಕಲ್ಚರ್ ಅಧಿಕಾರಿ ಕೆ.ವಿ.ಮಹಮ್ಮದ್ ಮದನಿ, ಜನಪ್ರತಿನಿಧಿಗಳು, ನೀರಾವರಿ ಸಮಿತಿ ಪದಾಧಿಕಾರಿಗಳು, ನಿರ್ವಹಣೆ ಸಮಿತಿ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

