ಜ.5ರಂದು ರಸಪ್ರಶ್ನೆ ಸ್ಪರ್ಧೆ
0
ಡಿಸೆಂಬರ್ 26, 2018
ಕಾಸರಗೋಡು: ರಾಷ್ಟ್ರೀಯ ಯುವಜನ ದಿನಾಚರಣೆ ಅಂಗವಾಗಿ ಜ.5ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
ರಾಜ್ಯ ಯುವಜನ ಕಲ್ಯಾಣ ಮಂಡಳಿಯ ಜಿಲ್ಲಾ ಯುವಜನ ಕೇಂದ್ರ ಆಶ್ರಯದಲ್ಲಿ, "ವಿವೇಕಾನಂದ ದರ್ಶನ ಮತ್ತು ಇಂದಿನ ಕಾಲಘಟ್ಟ" ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಕಾಲೇಜುಗಳಿಂದ ತಲಾ ಇಬ್ಬರಿರುವ ಒಂದು ತಂಡ ಭಾಗವಹಿಸಬಹುದು. ವಿಜೇತರಿಗೆ ಮೊದಲ ಬಹುಮಾನ 3 ಸಾವಿರ ರೂ., ದ್ವಿತೀಯ ಬಹುಮಾನ 2 ಸಾವಿರ ರೂ. ಮತ್ತು ತೃತೀಯ ಬಹುಮಾನ ಒಂದು ಸಾವಿರ ರೂ. ಲಭಿಸಲಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ಜ.12ರಂದು ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಕಾಲೇಜು ಅಧಿಕಾರಿಗಳ ದೃಡೀಕರಣ ಪತ್ರ ಸಹಿತ ಜ.2ರ ಸಂಜೆ 4 ಗಂಟೆಗೆ ಮುಂಚಿತವಾಗಿ ಜಿಲ್ಲಾ ಯುವಜನ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ : 9947603420(ಜಿಲ್ಲಾ ಸಂಚಾಲಕ), 04994-256219(ಜಿಲ್ಲಾ ಯುವಜನ ಕೇಂದ್ರ) ಸಂಪರ್ಕಿಸಬಹುದಾಗಿದೆ.

